More

    ಚಂದನವನಕ್ಕೆ ಅನುಪಂ ಖೇರ್​; ‘ಘೋಸ್ಟ್​’ ಚಿತ್ರದಲ್ಲಿ ಪ್ರಮುಖ ಪಾತ್ರ

    ಬೆಂಗಳೂರು: ಶಿವರಾಜಕುಮಾರ್​ ಅಭಿನಯದ ‘ಘೋಸ್ಟ್​’ ಚಿತ್ರದಲ್ಲಿ ಮಲಯಾಳಂ ನಟ ಜಯರಾಂ ಅಭಿನಯಿಸುತ್ತಿರುವ ಸುದ್ದಿ ಗೊತ್ತಿದೆ. ಈಗ ಚಿತ್ರತಂಡಕ್ಕೆ ಅನುಪಂ ಖೇರ್​ ಸೇರ್ಪಡೆಯಾಗಿದ್ದು, ಮಾರ್ಚ್​ನಿಂದ ಅವರು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

    ಇದನ್ನೂ ಓದಿ: ಮಿಸಸ್ ಚಟರ್ಜಿ v/s ನಾರ್ವೆ; ನೈಜ ಘಟನೆಯಾಧಾರಿತ ಸಿನಿಮಾದಲ್ಲಿ ರಾಣಿ ಮುಖರ್ಜಿ

    ಅನುಪಂ ಖೇರ್​, ಹಿಂದಿಯಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದಾರೆ. ಆದರೆ, ಇದುವರೆಗೂ ಕನ್ನಡದಲ್ಲಿ ಮಾತ್ರ ಅವರು ನಟಿಸಿರಲಿಲ್ಲ. ಈಗ ‘ಘೋಸ್ಟ್​’ ಚಿತ್ರದ ಮೂಲಕ ಅವರು ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

    ‘ಘೋಸ್ಟ್​’ ಚಿತ್ರದಲ್ಲಿ ಅನುಪಂ ಖೇರ್​ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದನ್ನು ಒಪ್ಪಿಕೊಳ್ಳುವ ನಿರ್ದೇಶಕ ಶ್ರೀನಿ, ‘ಅನುಪಂ ಖೇರ್​ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಪಾತ್ರ ಏನೆಂಬುದನ್ನು ಈಗಲೇ ಬಹಿರಂಗಪಡಿಸುವುದಕ್ಕೆ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಆ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು. ಮಾರ್ಚ್​ನಿಂದ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಆಗ ಅನುಪಂ ಖೇರ್​ ಸಹ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ’ ಎನ್ನುತ್ತಾರೆ.

    ಇನ್ನು, ಹೊಸ ವರ್ಷದ ಪ್ರಯುಕ್ತ, ‘ಘೋಸ್ಟ್​’ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದ್ದು, ಶಿವಣ್ಣ ಗ್ಯಾಂಗ್​ಸ್ಟರ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘Once a Gangster, always a Gangster’ ಎಂಬ ಉಪಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿರುವ ಈ ಪೋಸ್ಟರ್​ ಯೂಟ್ಯೂಬ್​ನ ಸಂದೇಶ್​ ಪ್ರೊಡಕ್ಷನ್ಸ್​ ಚಾನಲ್​ನಲ್ಲಿ ಬಿಡುಗಡೆಯಾಗಿದೆ.

    ಇದನ್ನೂ ಓದಿ: 2 ದಿನಗಳಲ್ಲಿ 127 ಕೋಟಿ ಗಳಿಕೆ; ಹಳೆಯ ದಾಖಲೆಗಳನ್ನೆಲ್ಲ ಮುರಿದ ‘ಪಠಾಣ್’​

    ‘ಘೋಸ್ಟ್’ ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಶಿವರಾಜಕುಮಾರ್, ಮಲಯಾಳಂ ನಟ ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ನಟಿಸುತ್ತಿದ್ದಾರೆ. ನಿರ್ದೇಶಕ ಶ್ರೀನಿ ಕಥೆ-ಚಿತ್ರಕಥೆ ಬರೆದರೆ, ಮಾಸ್ತಿ ಮಂಜು ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ‘ಡ್ಯಾಶ್​’ ಹಾಡಿಗೆ ಕೋಟಿ ವೀಕ್ಷಣೆ … ಖುಷಿಯಾದರು ಚಂದನ್​, ಸಂಜನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts