ರವಿತೇಜ ಜತೆ ‘ಘೋಸ್ಟ್’ ನಟ; ಟೈಗರ್ ನಾಗೇಶ್ವರ್ ರಾವ್ ಚಿತ್ರದಲ್ಲಿ ಅನುಪಮ್ ಖೇರ್

anupam kher
Published on

ಕಳೆದ ವರ್ಷ ತೆರೆಕಂಡ ತೆಲುಗಿನ ‘ಕಾರ್ತಿಕೇಯ 2’ ಚಿತ್ರ ಹಿಟ್ ಆಗಿದ್ದೇ ತಡ ಬಾಲಿವುಡ್ ನಟ ಅನುಪಮ್ ಖೇರ್ ಅವರಿಗೆ ದಕ್ಷಿಣದಲ್ಲಿ ಬೇಡಿಕೆ ಹೆಚ್ಚಿದೆ. ಇತ್ತೀಚೆಗಷ್ಟೆ ಕನ್ನಡದ 'ಘೋಸ್ಟ್’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದ ಅವರು, ಇದೀಗ ಮತ್ತೊಂದು ತೆಲುಗು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.

ಟಾಲಿವುಡ್ ಸ್ಟಾರ್ ನಟ ರವಿತೇಜ ನಾಯಕನಾಗಿರುವ ‘ಟೈಗರ್ ನಾಗೇಶ್ವರ್ ರಾವ್’ ಚಿತ್ರದಲ್ಲಿ ಅನುಪಮ್ ಖೇರ್, ರಾಘವೇಂದ್ರ ರಜಪೂತ್ ಎಂಬ ಗುಪ್ತಚರ ಇಲಾಖೆಯ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇತ್ತೀಚೆಗಷ್ಟೆ ಅವರ ಸ್ಟ್ ಲುಕ್ ರಿಲೀಸ್ ಆಗಿದೆ. ಗುರುವಾರದಿಂದ ಅನುಪಮ್ ಖೇರ್, ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ರವಿತೇಜ ಅವರ ಮೊದಲ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ವಂಶೀ ನಿರ್ದೇಶನದಲ್ಲಿ ಮೂಡಿಬರುತ್ತಿದೆ. 1970ರ ದಶಕದಲ್ಲಿ ಹೈದರಾಬಾದ್‌ನ ಸ್ಟುವರ್ಟ್‌ಪುರಂ ಎಂಬ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಚಿತ್ರ ‘ಟೈಗರ್ ನಾಗೇಶ್ವರ್ ರಾವ್’.

ವಿಭಿನ್ನ ಗೆಟಪ್ ಮತ್ತು ಬಾಡಿ ಲಾಂಗ್ವೇಜ್‌ನಲ್ಲಿ ರವಿತೇಜ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ಇಬ್ಬರು ನಾಯಕಿಯರಿದ್ದು ನೂಪುರ್ ಸನೊನ್ ಮತ್ತು ಗಾಯತ್ರಿ ಭಾರದ್ವಾಜ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ಆರ್. ಮಧಿ ಛಾಯಾಗ್ರಹಣ, ಪ್ರಕಾಶ್ ಕುಮಾರ್ ಸಂಗೀತವಿರಲಿದೆ. ಸಿನಿಮಾ ಇದೇ ಅಕ್ಟೋಬರ್ 22ರಂದು ತೆರೆಗೆ ಬರಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net