More

    ದೀಕ್ಷಿತ್​ ಶೆಟ್ಟಿ ನಟನೆಯ ‘ಬ್ಲಿಂಕ್​’ ಚಿತ್ರದ ಬಗ್ಗೆ ಇಲ್ಲಿದೆ ಹೊಸ ಮಾಹಿತಿ

    ಬೆಂಗಳೂರು: ‘ದಿಯಾ’ ಖ್ಯಾತಿಯ ನಟ ದೀಕ್ಷಿತ್​ ಶೆಟ್ಟಿ ಮತ್ತು ನಟಿ ಚೈತ್ರಾ ಜೆ.ಆಚಾರ್​ ಅಭಿನಯದ ಸೈನ್ಸ್​ ಫಿಕ್ಷನ್ ‘ಬ್ಲಿಂಕ್’ ಚಿತ್ರದ ಮೊದಲ ಸಾಂಗ್​ ‘ಆಗಂತುಕ’ ಇದೀಗ ಅಧಿಕೃತವಾಗಿ ಬಿಡುಗಡೆಗೊಂಡಿದೆ.

    ಇದನ್ನೂ ಓದಿ: ಇದಕ್ಕೆ ನಾನೇ ಗ್ಯಾರಂಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗಂದಿದ್ದೇಕೆ?

    ಸಿನಿಮಾದ ಮೊದಲ ಸಾಂಗ್​ ಆಗಂತುಕ ಯೂಟ್ಯೂಬ್​ನಲ್ಲಿ ರಿಲೀಸ್​ ಆಗಿದ್ದು, ಹಾಡು ವಿಶೇಷ ರೀತಿಯಲ್ಲಿ ಮೂಡಿಬಂದಿದೆ. ರ್‍ಯಾಪ್ ವರ್ಶನ್​ ಜತೆಗೆ ಚಿತ್ರದ ಕೆಲ ಸೀನ್​ಗಳನ್ನು ಚಿತ್ರ ತಯಾರಕರು ಹಾಡಿನಲ್ಲಿ ತೋರಿಸಿದ್ದಾರೆ. ಸೈನ್ಸ್​ ಫಿಕ್ಷನ್​ ‘ಬ್ಲಿಂಕ್’ ಚಿತ್ರದ​ ಬಗ್ಗೆ ಇದೀಗ ಸಾಕಷ್ಟು ನಿರೀಕ್ಷೆಗಳು ಮೂಡಿದ್ದು, ಚಿತ್ರ ಬಿಡುಗಡೆಯಾದ ನಂತರ ಸಿನಿಪ್ರೇಕ್ಷಕರಿಂದ ಏನ್ನೆಲ್ಲಾ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

    ಶ್ರೀನಿಧಿ ಬೆಂಗಳೂರು ನಿರ್ದೇಶನದ ಬ್ಲಿಂಕ್​ ಚಿತ್ರವನ್ನು ರವಿಚಂದ್ರನ್​ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ವಿಶೇಷ ಕಥಾಹಂದರವನ್ನು ಹೊಂದಿದ್ದು, ಚಿತ್ರದಲ್ಲಿ ದೀಕ್ಷಿತ್​ ಶೆಟ್ಟಿ ರಂಗಭೂಮಿ ಹಿನ್ನಲೆಯುಳ್ಳ ಕಲಾವಿದನಾಗಿ ಅಭಿನಯಿಸಿದ್ದಾರೆ.

    ಇದನ್ನೂ ಓದಿ: Santosh Lad Surprise Visit To Dharwad Dharwad District Hospital | ಧಾರವಾಡ ಜಿಲ್ಲಾ ಆಸ್ಪತ್ರೆಗೆ ಸಚಿವ ಸಂತೋಷ್​​ ಲಾಡ್ ದಿಢೀರ್ ಭೇಟಿ

    ವಜ್ರಧೀರ್​ ಜೈನ್, ಸುರೇಶ ಆನಗಳ್ಳಿ, ಚೈತ್ರ ಜೆ.ಆಚಾರ್, ಮಂದಾರ ಬತ್ತಲಹಳ್ಳಿ, ಗೋಪಾಲ ಕೃಷ್ಣ ದೇಶಪಾಂಡೆ ಸೇರಿದಂತೆ ಇತರ ಕಲಾವಿದರು ನಟಿಸಿದ್ದಾರೆ. ಅವಿನಾಶ ಶಾಸ್ತ್ರಿ ಮತ್ತು ಪ್ರಸನ್ನ ಕುಮಾರ್ ಕ್ರಮವಾಗಿ ಛಾಯಾಗ್ರಹಣ ಮತ್ತು ಸಂಗೀತವನ್ನು ನಿರ್ವಹಿಸಿದ್ದಾರೆ.

    ಗರ್ಭಿಣಿಯರಿಗೆ ವಿಶೇಷ ಪ್ರೀಮಿಯರ್​ ಶೋ ತೋರಿಸಿದ ‘ಮಿಸ್ಟರ್​ ಪ್ರೆಗ್ನೆಂಟ್’ ಚಿತ್ರತಂಡ​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts