More

    ಇದಕ್ಕೆ ನಾನೇ ಗ್ಯಾರಂಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗಂದಿದ್ದೇಕೆ?

    ಬೆಂಗಳೂರು: ಚುನಾವಣೆಗೆ ಮೊದಲು ಕಾಂಗ್ರೆಸ್ ಕಡೆಯಿಂದ ಐದು ಗ್ಯಾರಂಟಿಗಳನ್ನು ನೀಡಿದ್ದ ಸಿದ್ದರಾಮಯ್ಯ, ಮುಖ್ಯಮಂತ್ರಿ ಆದಮೇಲೆ ಇದೀಗ ಇನ್ನೊಂದು ಗ್ಯಾರಂಟಿಯನ್ನು ಕೊಟ್ಟಿದ್ದಾರೆ. ಅದರಲ್ಲೂ ಆ ಐದು ಗ್ಯಾರಂಟಿಗಳ ಕುರಿತಾಗಿಯೇ ಸಿಎಂ ಈ ಗ್ಯಾರಂಟಿಯನ್ನು ನೀಡಿದ್ದಾರೆ.

    ಅಷ್ಟಕ್ಕೂ ಆ ಐದು ಗ್ಯಾರಂಟಿಗಳ ಕುರಿತು ಜನರಲ್ಲಿ ಭರವಸೆ ಮೂಡಿಸುವ ಸಲುವಾಗಿಯೇ ಸಿಎಂ ಈ ಹೊಸ ಗ್ಯಾರಂಟಿ ನೀಡಿದ್ದಾರೆ. ಐದು ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಬಸ್​ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಸ್ಥಗಿತಗೊಳ್ಳಲಿದೆ ಮಾತುಗಳ ವಿಚಾರವಾಗಿ ಸಿಎಂ ಈ ಗ್ಯಾರಂಟಿ ನೀಡಿದ್ದಾರೆ.

    ಇದನ್ನೂ ಓದಿ: ಹೇಗಿದೆ ನೋಡಿ ಪೂಜಾ ಗಾಂಧಿ ಕೈಬರಹ!; ಕನ್ನಡದಲ್ಲೇ ಬರೆದು ಶುಭಾಶಯ ಕೋರಿದ ‘ಮುಂಗಾರು ಮಳೆ’ ಬೆಡಗಿ

    ಮೊದಲು ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ಈಗ ಈ ಯೋಜನೆಗಳು ಹೆಚ್ಚು ಕಾಲ ಚಾಲನೆಯಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಆರಂಭಿಸಿದ್ದಾರೆ. ಇಂಥ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ, ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ. ಇದಕ್ಕೆ ನಾನೇ ಗ್ಯಾರಂಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಶಕ್ತಿ ಯೋಜನೆ ಸ್ಥಗಿತಗೊಳ್ಳಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ‘ಯೋಜನೆ ಸ್ಥಗಿತಗೊಳ್ಳುವುದಿಲ್ಲ’ ಅಂತ ಕೆಎಸ್​ಆರ್​ಟಿಸಿ ತನ್ನ ಅಧಿಕೃತ ಎಕ್ಸ್ ಅಕೌಂಟ್ ಮೂಲಕ ಇಂದು ಸ್ಪಷ್ಟನೆಯನ್ನು ನೀಡಿದೆ.

    ಗಾದೆಮಾತು ಪ್ರಕರಣ: ರಿಯಲ್ ಸ್ಟಾರ್ ಉಪೇಂದ್ರ ಕಡೆಯಿಂದ ಮಹತ್ವದ ಸೂಚನೆ

    ಸದ್ಯ ಈ ಬಿಯರ್ ಕುಡಿಯಬೇಡಿ!; ಸೆಡಿಮೆಂಟ್ ಶೇಖರಣೆ ಆಗಿರುವುದರಿಂದ ತಡೆ ಹಿಡಿದ ಅಬಕಾರಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts