More

    ಗರ್ಭಿಣಿಯರಿಗೆ ವಿಶೇಷ ಪ್ರೀಮಿಯರ್​ ಶೋ ತೋರಿಸಿದ ‘ಮಿಸ್ಟರ್​ ಪ್ರೆಗ್ನೆಂಟ್’ ಚಿತ್ರತಂಡ​!

    ಆಂಧ್ರಪ್ರದೇಶ: ತೆಲುಗು ಬಿಗ್ ಬಾಸ್ ಸೀಸನ್ 4ರ ಸ್ಪರ್ಧಿಯಾಗಿ ಮಿಂಚಿದ್ದ ಸೈಯದ್ ಸೋಹೆಲ್ ರಯಾನ್ ನಟನೆಯ ‘ಮಿಸ್ಟರ್ ಪ್ರೆಗ್ನೆಂಟ್’ ಚಿತ್ರವು ಇಂದು ಆಂಧ್ರಪ್ರದೇಶದ ಚಿತ್ರಮಂದಿರದಲ್ಲಿ ಗರ್ಭಿಣಿಯರಿಗೆ ವಿಶೇಷ ಪ್ರೀಮಿಯರ್​ ಶೋ ಅನ್ನು ಆಯೋಜಿಸಿತ್ತು.

    ಇದನ್ನೂ ಓದಿ: ಗುರಿ ಸಾಧನೆಗೆ ನಿರಂತರ ಪ್ರಯತ್ನ ಅವಶ್ಯ

    ಇಂದು (ಆಗಸ್ಟ್​ 16) ಮಧ್ಯಾಹ್ನ 03:45ರ ಸಮಯಕ್ಕೆ ಹೈದರಾಬಾದ್‌ನ ನೆಕ್ಸಸ್ ಮಾಲ್‌ನಲ್ಲಿ ಗರ್ಭಿಣಿಯರಿಗಾಗಿ ವಿಶೇಷ ಪ್ರೀಮಿಯರ್ ಅನ್ನು ಪ್ರದರ್ಶಿಸಿತು. ಚಿತ್ರ ವೀಕ್ಷಿಸಿದ ಬಳಿಕ ಗರ್ಭಿಣಿಯರು ತಮ್ಮ ಮನೆಗೆ ತೆರಳಲು ಸಾರಿಗೆ ಮತ್ತು ವೈದ್ಯಕೀಯ ವ್ಯವಸ್ಥೆಯನ್ನು ಕೂಡ ಚಿತ್ರತಂಡ ಮಾಡಿದೆ.  ಇದೀಗ ಈ ಸಂಗತಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.

    ಆಗಸ್ಟ್ 18, 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿರುವ ಈ ಚಿತ್ರದಲ್ಲಿ ರೂಪ ಕೊಡುವಯೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಸಿನಿಮಾ ರಿಲೀಸ್​ಗೂ ಮುನ್ನವೇ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಶ್ರೀನಿವಾಸ್ ವಿಂಜನಂಪತಿ ನಿರ್ದೇಶನದ ಈ ಚಿತ್ರದಲ್ಲಿ ಸುಹಾಸಿನಿ ಮಣಿರತ್ನಂ, ಬ್ರಹ್ಮಾಜಿ, ಅಲಿ ಬಾಷಾ ಮತ್ತು ಇತರ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ,(ಏಜೆನ್ಸೀಸ್).

    ಸಂಚಾರಿ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು ‘ಕೇರಳ ಮಾಡೆಲ್’ ಅನುಸರಿಸಲು ಮುಂದಾದ ಮಹಾರಾಷ್ಟ್ರ ಸರ್ಕಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts