More

    ಗುರಿ ಸಾಧನೆಗೆ ನಿರಂತರ ಪ್ರಯತ್ನ ಅವಶ್ಯ

    ಬಾಗಲಕೋಟೆ: ವಿದ್ಯಾರ್ಥಿ ಜೀವನ ಎಂಬುದು ಸುವರ್ಣ ಅವಕಾಶವಾಗಿದ್ದು, ನಿರಂತರ ಪ್ರಯತ್ನದಿಂದ ತಮ್ಮ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.

    ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಕಳೆದ ೨೦೨೨-೨೩ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಜೊತೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಇಂದು ಆಧುನಿಕ ಯುಗ ವೇಗವಾಗಿ ಸಾಗುತ್ತಿದ್ದು, ಅದರ ಜೊತೆಗೆ ಪೈಪೋಟಿ ಕೂಡಾ ಹೆಚ್ಚಾಗಿದೆ. ಕೇವಲ ಸರ್ಕಾರಿ ನೌಕರರಿಯನ್ನು ಆಶಿಸದೇ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಂಡು ಶ್ರಮಜೀವಿ ಆದಾಗ ಮಾತ್ರ ಪರಿಪೂರ್ಣತೆ ಹೊಂದಲು ಸಾಧ್ಯ ಎಂದರು.

    ವಿದ್ಯಾರ್ಥಿಗಳು ಶಿಕ್ಷಣ ಪಡೆದಲ್ಲಿ ಕಲಿತ ವಿದ್ಯೆಗಿಂತ ಸಾಮಾನ್ಯ ಜ್ಞಾನದತ್ತ ಹೆಚ್ಚಿನ ಗಮನ ಹರಿಸಿದಾಗ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದಾಗಿದೆ. ಅಂತಹ ಸಂದರ್ಭದಲ್ಲಿ ಬರುವ ಅಡೆತಡೆ, ಸಮಸ್ಯೆಗಳನ್ನು ಎದುರಿಸುವ ಧೈರ್ಯವೂ ಕೂಡಾ ಬಂದೊದಗುತ್ತದೆ. ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೇ ಸಮಚಿತ್ತದಿಂದ ನಡೆದುಕೊಂಡಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹಿಂದಿನಿಂದಲೇ ಅಲಕ್ಷ, ಆಸಯ್ಯ, ಹೆದರಿಕೆಗಳನ್ನು ಬದಿಗಿಟ್ಟು ನಿಷ್ಠೆಯಿಂದ ಜ್ಞಾನಾರ್ಜನೆ ಕಡೆ ಗಮನ ಹರಿಸಲು ತಿಳಿಸಿದರು.

    ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ ಮಾತನಾಡಿ, ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಬಾಲ್ಯದಲ್ಲಿ ಅನೇಕ ಕಷ್ಟದ ದಿನಗಳಾಗಿದ್ದವು. ಇಂದಿನದಷ್ಟು ಸೌಲಭ್ಯಗಳು ಅಂದು ಇರಲಿಲ್ಲ. ಕಷ್ಟದ ದಿನಗಳಲ್ಲಿಯೇ ಇಷ್ಟಪಟ್ಟು ಓದು ಸಾಧನೆ ಮಾಡಲು ಸಾಧ್ಯವಾಯಿತು. ನನ್ನ ಸಾಧನೆಗೆ ಪ್ರಾರಂಭದಲ್ಲಿ ಪೊಲೀಸ್ ಅಧಿಕಾರಿಯಾಗಿ ಅವಕಾಶ ದೊರೆತಿದ್ದರೂ ಸಹ ಗುರಿ ಸಾಧನೆಯ ಹಸಿವು ಹಿಂಗಿರಲಿಲ್ಲ. ಪ್ರಯತ್ನ ಮುಂದು ವರೆಸಿದೆ. ಅನೇಕ ಸ್ಪರ್ಧಾತ್ಮಕ ಪರೀಕ್ಷೆಗೆ ಪಯತ್ನಿಸಿದ ಫಲವಾಗಿ ಕೆ.ಎ.ಎಸ ಮತ್ತು ಐ.ಎ.ಎಸ್ ನಂತಹ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದರು.

    ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ ಅಮರೇಶ ಪಮ್ಮಾರ, ವೈಪಿಸಿಯ ಉಪಸಮನ್ವಯಾಧಿಕಾರಿ ಸಿ.ಆರ್.ಓಣಿ ಸೇರಿದಂತೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts