More

    ದುಬಾರಿ ಬೈಸಿಕಲ್ ಕದಿಯುತ್ತಿದ್ದವ ಸಿಕ್ಕಿಬಿದ್ದ

    ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ ದುಬಾರಿ ಬೈಸಿಕಲ್‌ಗಳನ್ನು ಕಳವು ಮಾಡುತ್ತಿದ್ದವನನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.
    ಒಡಿಶಾ ಮೂಲದ ಸ್ವಾಧೀನ್ ರೌತ್ರಾ (25) ಬಂಧಿತ. 4 ಲಕ್ಷ ರೂ. ಮೌಲ್ಯದ 17 ಸೈಕಲ್‌ಗಳನ್ನು ಜಪ್ತಿ ಮಾಡಿದ್ದು, 9 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನೌಕರಿ ಅರಸಿ ಬೆಂಗಳೂರಿಗೆ ಬಂದ ಸ್ವಾಧೀನ್, ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡು ಬಾಣಸವಾಡಿಯಲ್ಲಿ ನೆಲೆಸಿದ್ದ. ದುಶ್ಚಟಕ್ಕೆ ಒಳಗಾಗಿದ್ದ ಆತ, ರಸ್ತೆಗಳಲ್ಲಿ ಓಡಾಡಿ ಮನೆಗಳೆದುರು ನಿಲ್ಲಿಸಿದ ಸೈಕಲ್ ಗುರುತಿಸಿ, ರಾತ್ರಿ ವೇಳೆ ಕಳವು ಮಾಡುತ್ತಿದ್ದ. ಸಾಕಷ್ಟು ಮಾಲೀಕರು, ಸೈಕಲ್‌ಗೆ ಯಾಕೆ ದೂರು ಕೊಡಬೇಕು ಎಂದುಕೊಂಡು ಸುಮ್ಮನಾಗುತ್ತಿದ್ದರು. ಇತ್ತೀಚೆಗೆ ಓಎಂಬಿಆರ್ ಲೇಔಟ್‌ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಎಲೆಕ್ಟ್ರಿಕ್ ಬೈಸಿಕಲ್ ಕಳ್ಳತನ ಮಾಡಿದ್ದ. ಈ ಬಗ್ಗೆ ಮಾಲೀಕರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಎಚ್. ಮುತ್ತುರಾಜು ನೇತೃತ್ವದ ತಂಡ ಕೃತ್ಯ ನಡೆದ ಸ್ಥಳದಲ್ಲಿ ಸಿಕ್ಕ ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕದ್ದ ಬೈಸಿಕಲ್‌ಗಳನ್ನು ಪರಿಚಯಸ್ಥರಿಗೆ ಮತ್ತು ಮಿಲಿಟರಿ ವಸತಿ ಗೃಹದಲ್ಲಿ ನೆಲೆಸಿದ್ದ ಈಶಾನ್ಯ ಭಾಗದ ಜನರಿಗೆ ಹೆಚ್ಚಾಗಿ ಮಾರಾಟ ಮಾಡಿದ್ದ. ಪರಿಚಯಸ್ಥ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಕೊಟ್ಟು ಅವರು ಹಣ ಕೊಟ್ಟಾಗ ತೆಗೆದುಕೊಳ್ಳುತ್ತಿದ್ದ. ಕೆಲ ಸೈಕಲ್‌ಗಳನ್ನು ಮನೆಯಲ್ಲಿ ಇರಿಸಿಕೊಂಡು ಗಿರಾಕಿಗಳನ್ನು ಹುಡುಕುತ್ತಿದ್ದ. ದುಬಾರಿ ಬೆಲೆಯ ಸೈಕಲ್‌ಗಳನ್ನು ಕೇವಲ 2ರಿಂದ 5 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts