More

  ಪೊಲೀಸರಿಗೆ ಫ್ರೀ ಹ್ಯಾಂಡ್ ಕೆಲಸ ಮಾಡಲು ಬಿಡಲಿ

  ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯಾಗಿ ಇನ್ನೂ ಒಂದು ತಿಂಗಳು ಮಾಸಿಲ್ಲ. ಇಂತಹ ಸಂದರ್ಭದಲ್ಲಿ ಮಂಗಳವಾರ ರಾತ್ರಿ ವೀರಾಪುರ ಓಣಿಯ ಅಂಜಲಿ ಎಂಬ ಯುವತಿಯ ಕೊಲೆಯಾಗಿದ್ದು ವಿಪರ್ಯುಸ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಗೃಹ ಇಲಾಖೆಯು ವಿಫಲವಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.

  ಹತ್ಯೆಯಾದ ಅಂಜಲಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಹೇಶ ಟೆಂಗಿನಕಾಯಿ, ಕೆಲ ದಿನಗಳ ಹಿಂದೆ ಅಂಜಲಿ ಮತ್ತು ಆಕೆಯ ತಾಯಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಇದೀಗ ಹತ್ಯೆ ಮಾಡಿದ ಯುವಕನ ವಿರುದ್ಧ ದೂರು ನೀಡಲು ಹೋಗಿದ್ದರು. ಆದರೆ, ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಅಂಜಲಿ ಹತ್ಯೆಗೆ ಪೊಲೀಸರ ನಿರ್ಲಕ್ಷ್ಯವೂ ಕಾರಣ ಎಂದರು.

  ಕೊಲೆಗಾರ ಅಂಜಲಿಯ ಮನೆಯೊಳಗೆ ನುಗ್ಗಿ, ಆಕೆಯ ಹತ್ಯೆ ಮಾಡಿರುವುದು ಪೈಶಾಚಿಕ ಕೃತ್ಯ. ಆರೋಪಿ ಎಷ್ಟೇ ಪ್ರಭಾವಿಯಾಗಿದ್ದರೂ, ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

  ಹುಬ್ಬಳ್ಳಿಯಲ್ಲಿ ಗಾಂಜಾ ಅಮಲು ವ್ಯಾಪಕವಾಗಿದೆ. ಇಂತಹ ಅನಾಹುತಗಳಿಗೆ ಎಲ್ಲೆಂದರಲ್ಲಿ ಸಿಗುತ್ತಿರುವ ಗಾಂಜಾವೂ ಕಾರಣ ಎಂದು ಆರೋಪಿಸಿದರು.

  ಸರ್ಕಾರ ಪೊಲೀಸರಿಗೆ ಫ್ರೀ ಹ್ಯಾಂಡ್ ಆಗಿ ಕೆಲಸ ಮಾಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಅಪರಾಧಿ ಕೃತ್ಯಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಹೇಳಿದರು.

  ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಬಿಜೆಪಿಯ ಪ್ರಭು ನವಲಗುಂದಮಠ, ಶಶಿ ಬಿಜವಾಡ, ಪ್ರವೀಣ ಕುಬಸದ, ಪ್ರೀತಮ್ ಅರಕೇರಿ ಹಾಗೂ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts