ನೇಪಾಳದ ರುದ್ರಾಕ್ಷಿಗಳ ಪ್ರದರ್ಶನ, ಮಾರಾಟ ಮೇಳ

Rudhrakshi (1)
Published on

ನಗರದ ಎಂಜಿ ರಸ್ತೆಯ ಹೋಟೆಲ್ ಸಿಪಾಯ್ ಗ್ರಾಂಡೆಯಲ್ಲಿ ಹೈದರಾಬಾದ್ ಮೂಲದ ಇಂಡಸ್-ನೇಪಾಳ ರುದ್ರಾಕ್ಷ ಸಂಸ್ಥೆ ವತಿಯಿಂದ ಆಯೋಜಿಸಿರುವ ನೇಪಾಳದ ರುದ್ರಾಕ್ಷಿಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ದೊರೆಯಿತು.

ಮೇಳದಲ್ಲಿ ವಿರಳವಾಗಿ ದೊರಕುವ ರುದ್ರಾಕ್ಷಿಗಳು ಹಾಗೂ ಅಪರೂಪದ ರತ್ನದ ಹರಳುಗಳು, ದುಂಡು ಮುಖದ ಹಾಗೂ ಒಂದು ಮುಖ ಹೊಂದಿರುವ ರುದ್ರಾಕ್ಷಿಗಳು ಮಾರಾಟಕ್ಕೆ ಇದ್ದು, ಸಾರ್ವಜನಿಕರು ಜೂ. 18 ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 9ರ ಅವಧಿಯಲ್ಲಿ ಭೇಟಿ ನೀಡಬಹುದು.

‘ಯಾವ ರುದ್ರಾಕ್ಷಿಯನ್ನು ಯಾವಾಗ ಹಾಗೂ ಯಾರು ಧರಿಸಬೇಕು ಎಂಬುದರ ಬಗ್ಗೆ ಯಾವುದೇ ಪಂಚಾಂಗ ಮತ್ತು ಕಂಪ್ಯೂಟರ್ ಸಹಾಯವಿಲ್ಲದೆ, ವೇದ ಗಣಿತದ ಮೂಲಕ ಜನ್ಮರಾಶಿ, ಜನ್ಮನಕ್ಷತ್ರ ಆಧಾರದಲ್ಲಿ ತಿಳಿಸಲಾಗುವುದು. ಅಸಲಿ ಹಾಗೂ ನಕಲಿ ರುದ್ರಾಕ್ಷಿಗಳ ಭಿನ್ನತೆ ತಿಳಿಸಲಾಗುವುದು. ಗುಣಮಟ್ಟದ ರುದ್ರಾಕ್ಷಿಗಳನ್ನು ಗ್ರಾಹಕರಿಗೆ ಮಾರಾಟ ಮಾಡುವುದರಲ್ಲಿ ಇಂಡಸ್-ನೇಪಾಳ ರುದ್ರಾಕ್ಷ ಸಂಸ್ಥೆ ವಿಶ್ವಾಸಾರ್ಹತೆ ಹೊಂದಿದೆ. ಆಸಕ್ತರಿಗೆ ಇತರ ಮುಖಗಳ ರುದ್ರಾಕ್ಷಿಗಳನ್ನು ತರಿಸಿಕೊಡಲಾಗುವುದು. ವ್ಯಕ್ತಿಯ ಜನ್ಮದಿನಾಂಕ ಆಧರಿಸಿ ಯಾವ ರಾಶಿಗೆ ಯಾವ ಮುಖದ ರುದ್ರಾಕ್ಷಿ ಸೂಕ್ತ ಎಂದು ನಿರ್ಧರಿಸಿ ಆ ಪ್ರಕಾರದ ರುದ್ರಾಕ್ಷಿ ಕೊಡಲಾಗುವುದು. ರುದ್ರಾಕ್ಷಿ ಧರಿಸುವುದರಿಂದ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಗಳು, ಶಾಂತಿ, ನೆಮ್ಮದಿ, ಸಮಾಧಾನ ಆತ್ಮಸ್ಥೈರ್ಯ ಲಭಿಸಲಿದೆ. ಸಂಶೋಧನೆಗಳಿಂದಲೂ ಇದು ದೃಢಪಟ್ಟಿದೆ. ರುದ್ರಾಕ್ಷಿ ಧರಿಸುವುದು ಸೂಕ್ತ’ ಎಂದು ಇಂಡಸ್-ನೇಪಾಳ ಸಂಸ್ಥೆಯ ನಿರ್ದೇಶಕ ನರೇಂದ್ರ ಕಾಶಿರೆಡ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅರ್ಧ ಚಂದ್ರಾಕೃತಿಯ ಮುಖ ಹೊಂದಿರುವ ರುದ್ರಾಕ್ಷಿ ಮತ್ತು 21 ಮುಖಗಳುಳ್ಳ ರುದ್ರಾಕ್ಷಿ ವಿವಿಧ ಬಗೆಯ ಸಿದ್ಧಮಾಲೆ, ಸ್ಫಟಿಕ ಮಾಲೆ, ಜಪಮಾಲೆ, ತುಳಸಿ ಮಾಲೆ, ಶಿವಮಾಲೆ ಜ್ಞಾನಮಾಲೆಗಳು ಹಾಗೂ ಐಶ್ವರ್ಯ ಮಾಲೆ, ತುಳಸಿ ಸರಗಳನ್ನು ಎಲ್ಲರೂ ಧರಿಸಬಹುದು. ಚಿನ್ನದ ಕವಚ ಹೊಂದಿದ ರುದ್ರಾಕ್ಷಿಗಳು ಕೂಡ ಪ್ರದರ್ಶನದಲ್ಲಿ ಸಿಗುತ್ತವೆ. ಮಾಹಿತಿಗೆ ಮೊ: 9885211449 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net