More

    ನನ್ನ ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ; ಆದ್ರೇ…

    ಅಹಮದಾಬಾದ್: ಸೋಮವಾರ ನಡೆದ ಐಪಿಎಲ್ 2023ರ(IPL 2023) ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿ 5ನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

    ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ(Hardik Pandya) ನಾಯಕತ್ವದ ಗುಜರಾತ್ ಟೈಟನ್ಸ್(Gujarat Titans) ತಂಡವನ್ನು ಮಣಿಸುವ ಮೂಲಕ ಸಿಎಸ್​ಕೆ(CSK) 5ನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಕ್ಯಾಪ್ಟನ್ ಕೂಲ್(Captain Cool) ಧೋನಿ ಅವರ ನಾಯಕ್ವದಲ್ಲಿ ಐಪಿಎಲ್ ಟ್ರೋಫಿ ಪಡೆದುಕೊಂಡಿದ್ದು, ತಂಡದ ಆಟಗಾರರಿಗೆ ಮತ್ತು ಧೋನಿ ಅಭಿಮಾನಿಗಳಿಗೆ ಹೆಚ್ಚಿನ ಸಂತಸ ನೀಡಿದೆ.

    ಇದನ್ನೂ ಓದಿ: ಏನೇ ಆದ್ರೂ ಆರ್​ಸಿಬಿ ನನ್ನ ಫೇವರಿಟ್… ಕಪ್ ಗೆಲ್ಲುವ ಸಮಯ ಬಂದೇ ಬರುತ್ತದೆ: ಡಿಕೆಶಿ

    ಫೈನಲ್ ಪಂದ್ಯವನ್ನು ಗೆದ್ದ ಕೂಡಲೇ ರವೀಂದ್ರ ಜಡೇಜಾ(Ravindra Jadeja) ಅವರನ್ನು ಧೋನಿ ಅಪ್ಪಿಕೊಂಡು ಕಣ್ಣೀರಿಟ್ಟರು. ತದನಂತರ ಗೆಲುವಿನ ಬಗ್ಗೆ ಮಾತನಾಡಿದ ಎಂ.ಎಸ್.ಧೋನಿ(MS Dhoni), ನನ್ನ ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ ಆದ್ರೆ, ಈ ವರ್ಷದಲ್ಲಿ ನನಗೆ ಲಭಿಸಿರುವ ಅಗಾಧ ಪ್ರೀತಿ, ಮಮತೆಯನ್ನು ಮರೆಯಲು ಸಾಧ್ಯವಿಲ್ಲ. ಪ್ರೀತಿಯನ್ನು ಹಂಚಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಹೇಳಿದರು.

    ನನಗೆ ಈಗ ಬಹಳ ಕಷ್ಟಕರವಾದುದು ಎಂದರೆ, ಮುಂದಿನ 9 ತಿಂಗಳು ಹೆಚ್ಚು ಶ್ರಮಿಸಿ, ಮತ್ತೊಂದು ಐಪಿಎಲ್ ಸೀಸನ್ ಆಡುವುದು! ಆದ್ರೆ, ಇದೆಲ್ಲಾ ನಿರ್ಧಾರವಾಗುವುದು ನನ್ನ ದೇಹದ ಮೇಲೆ, ನನಗೆ ಇನ್ನು 6-7 ತಿಂಗಳ ಕಾಲ ಯೋಚಿಸಲು ಅವಕಾಶವಿದೆ. ನನ್ನ ಅಭಿಮಾನಿಗಳಿಗೆ ನಾನು ಮರಳಿ ಬರುವುದು ಒಂದು ರೀತಿ ಉಡುಗೊರೆ ನೀಡಿದಂತೆ. ಆದ್ರೆ, ಗಿಫ್ಟ್ ನೀಡುವುದು ಬಹುಶಃ ಕಷ್ಟಕರವಾಗಿದೆ.

    ಅಭಿಮಾನಿಗಳು ನೀಡಿರುವ ಎಲ್ಲೇ ಮೀರಿದ ಪ್ರೀತಿ ಮತ್ತು ಕಾಳಜಿಗೆ ನಾನು ಮರಳಿ ಬರುವ ಮೂಲಕ ಅವರಿಗೆ ಉಡುಗೊರೆ ಕೊಡಬೇಕು. ಆದ್ರೆ, ನನ್ನ ದೇಹ ಅದಕ್ಕೆ ಸಾಥ್ ಕೊಡುವುದು ಸದ್ಯ ಕಷ್ಟವೇ ಎಂದು ಧೋನಿ ಪಂದ್ಯ ಗೆದ್ದ ಬಳಿಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಭಾರತೀಯ ಕ್ರಿಕೆಟ್ ತಂಡ ಕಂಡ ಅಪ್ರತಿಮ ನಾಯಕ, ಮಹೇಂದ್ರ ಸಿಂಗ್ ಧೋನಿ ಅವರು ಮುಂದಿನ ಐಪಿಎಲ್ ಸೀಸನ್ ಆಡಲು ಮರಳಿ ಬರಲಿದ್ದಾರೆಯೇ? ತಮ್ಮ ಅಭಿಮಾನಿಗಳ ಆಸೆಯಂತೆ ಮತ್ತೊಮ್ಮೆ ಮನರಂಜಿಸಲಿದ್ದಾರೆಯೇ? ಎಂಬುದನ್ನು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts