More

    ಶುಭಮನ್ ಗಿಲ್ ಬ್ಯಾಟಿಂಗ್ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿನ್ ತೆಂಡೂಲ್ಕರ್

    ನವದೆಹಲಿ: ಐಪಿಎಲ್ 2023ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್​ಮನ್ ಶುಭಮನ್ ಗಿಲ್ ನೀಡುತ್ತಿರುವ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ ಕುರಿತು ಕ್ರಿಕೆಟ್ ದಿಗ್ಗಜ, ಮಾಸ್ಟರ್​ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಐಪಿಎಲ್ 2023ರ ಆವೃತ್ತಿ ಆರಂಭವಾದ ಮೊದಲ ಪಂದ್ಯದಿಂದಲೂ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಬ್ಯಾಟ್ಸ್​ಮನ್ ಆಗಿ ಉತ್ತಮ ಪ್ರದರ್ಶನ ನೀಡಿರುವ ಶುಭಮನ್ ಗಿಲ್, ಪ್ರತಿ ಪಂದ್ಯದಲ್ಲೂ ತಮ್ಮ ತಂಡಕ್ಕೆ ಉತ್ತಮ ಕೊಡುಗೆಯನ್ನು ನೀಡುವ ಮುಖೇನ ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆ. ಇತ್ತೀಚೆಗೆ ನಡೆದ ಪ್ಲೇಆಫ್ ಪಂದ್ಯಗಳಲ್ಲಿ ಶುಭಮನ್ ಗಿಲ್ ಆಕರ್ಷಕ ಶತಕ ಸಿಡಿಸಿ, ಎಲ್ಲರ ಗಮನ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಇದನ್ನೂ ಓದಿ: ಚೆನ್ನೈ VS ಗುಜರಾತ್ ಫೈನಲ್ ಪಂದ್ಯ ಮುಂದೂಡಿಕೆ; ರಾತ್ರಿಯಿಡಿ ರಸ್ತೆಯಲ್ಲಿ ಕಾಲಕಳೆದ ಸಿಎಸ್​ಕೆ ಫ್ಯಾನ್ಸ್​

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿ, ಆರ್​ಸಿಬಿ ತಂಡದ ಪ್ಲೇಆಫ್​ ಕನಸನ್ನು ಭಗ್ನಗೊಳಿಸಿದರು. ಆರ್​ಸಿಬಿ ಪಂದ್ಯದ ವಿರುದ್ಧ 61 ಎಸೆತಗಳಲ್ಲಿ 101 ರನ್ ಗಳಿಸಿ ಮಿಂಚಿದರು. ತದನಂತರ ಪ್ಲೇಆಫ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 60 ಎಸೆತಗಳಲ್ಲಿ 129 ರನ್ ಗಳಿಸಿ ಔಟ್ ಆದರು.

    ಈ ಪಂದ್ಯಗಳಲ್ಲಿ ಗಿಲ್ ದಾಖಲಿಸಿದ ಶತಕವನ್ನು ಕಂಡ ಕ್ರಿಕೆಟ್ ಅಭಿಮಾನಿಗಳು ಶೀಘ್ರವೇ ವಿರಾಟ್ ಕೊಹ್ಲಿ ಅವರ ರನ್ ದಾಖಲೆಗಳನ್ನು ಶುಭಮನ್ ಹಿಂದಿಕ್ಕಲಿದ್ದಾರೆ ಎಂದು ಭವಿಷ್ಯ ನುಡಿದರು. ಈ ಚರ್ಚೆಯ ಬೆನ್ನಲ್ಲೇ ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಗಿಲ್ ಆಟವನ್ನು ಕೊಂಡಾಡಿದ್ದಾರೆ. ಈ ವರ್ಷದ ಐಪಿಎಲ್​ನಲ್ಲಿ ಶುಭಮನ್ ಗಿಲ್ ನೀಡಿರುವ ಪ್ರದರ್ಶನ ಮರೆಯುವಂತದ್ದಲ್ಲ. ಕೊಟ್ಟಿರುವ ಎರಡೂ ಶತಕಗಳು ಅದ್ಭುತ ದಾಖಲೆಗಳನ್ನು ನಿರ್ಮಿಸಿವೆ ಎಂದಿದ್ದಾರೆ.

    ಇದನ್ನೂ ಓದಿ: IPL ಕ್ವಾಲಿಫೈಯರ್​2-ಫಿನಾಲೆ ಟಿಕೆಟ್​ಗಾಗಿ ಮುಗಿಬಿದ್ದ ಜನ; ಜೀವಕ್ಕಿಂತ ಟಿಕೆಟ್​ ಮುಖ್ಯವೇ ಎಂದ ನೆಟ್ಟಿಗರು

    ನನಗೆ ಶುಭಮನ್ ಗಿಲ್ ಆಟದಲ್ಲಿ ಅವರ ತಾಳ್ಮೆ, ಅದ್ಭುತ ಬ್ಯಾಟಿಂಗ್ ವೈಖರಿ, ರನ್ ಪಡೆಯಬೇಕೆಂಬ ಹಂಬಲ ಮತ್ತು ವಿಕೆಟ್ಸ್ ನಡುವಿನ ಓಟ ಹೆಚ್ಚು ಗಮನ ಸೆಳೆದಿದೆ ಎಂದು ಹೇಳಿದ್ದಾರೆ. ಸದ್ಯ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಕ್ರಿಕೆಟಿಗರು ಶುಭಮನ್ ಗಿಲ್ ಮಾಡುತ್ತಿರುವ ರನ್ ದಾಖಲೆಗಳ ಸಾಧನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶುಭಮನ್ ಗಿಲ್, ರನ್ ಮಷಿನ್ ವಿರಾಟ್ ಕೊಹ್ಲಿ ಅವರ ದಾಖಲೆಗಳನ್ನು ಹಿಂದಿಕ್ಕಿ, ಯಶಸ್ವಿ ಆಟಗಾರರಾಗಿ ಹೊರಹೊಮ್ಮಲಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts