ಸಿನಿಮಾ

IPL ಕ್ವಾಲಿಫೈಯರ್​2-ಫಿನಾಲೆ ಟಿಕೆಟ್​ಗಾಗಿ ಮುಗಿಬಿದ್ದ ಜನ; ಜೀವಕ್ಕಿಂತ ಟಿಕೆಟ್​ ಮುಖ್ಯವೇ ಎಂದ ನೆಟ್ಟಿಗರು

ಅಹಮದಬಾದ್​: ಹಾಲಿ ಐಪಿಎಲ್​ ಋತು ಅನೇಕ ಕಾರಣಗಳಿಗೆ ಹೆಚ್ಚು ಸದ್ದು ಮಾಡುತ್ತಿದ್ದು ಈ ಮಧ್ಯೆ ಟಿಕೆಟ್​ಗಾಗಿ ಅಭಿಮಾನಿಗಳು ತೀವ್ರ ಪೈಪೋಟಿ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೀಗ ಕ್ವಾಲಿಫೈಯರ್​-2 ಹಾಗೂ ಫಿನಾಲೆಯ ಟಿಕೆಟ್​ಗಳನ್ನು ಪಡೆಯಲು ಅಹಮದಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ರೀಡಾಭಿಮಾನಿಗಳ ನಡುವೆ ಸಂಘರ್ಷ ಏರ್ಪಟ್ಟಿದ್ದು ಕಾಲ್ತುಳಿತ ಉಂಟಾಗಿದೆ.

ಇದನ್ನೂ ಓದಿ: 3 ವರ್ಷ ಅವಧಿಗೆ ರಾಹುಲ್​ ಗಾಂಧಿ ಸಾಮಾನ್ಯ ಪಾಸ್​ಪೋರ್ಟ್​ ಪಡೆಯಬಹುದು: ದೆಹಲಿ ಹೈಕೋರ್ಟ್​

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ತಮ್ಮ ಜೀವಕ್ಕಿಂತ ಜನರಿಗೆ ಐಪಿಎಲ್​ ಟಿಕೆಟ್ ಹೆಚ್ಚಾಯಿತೆ ಎಂದು ಪ್ರತಿಕ್ರಿಯಿಸಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಮನಲ್ಲಿ ಏಕಕಾಲಕ್ಕೆ ಸುಮಾರು ಒಂದು ಲಕ್ಷ ಜನ ಕುಳಿತು ಕ್ರಿಕೆಟ್​ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಆನ್​ಲೈನ್​ ಮೂಲಕ ಟಿಕೆಟ್​ ಬುಕ್​ ಮಾಡಿ ಅದರ ಪ್ರತಿಯನ್ನು ಮೈದಾನದ ಸಿಬ್ಬಂದಿಗೆ ತೋರಿಸಿ ಟಿಕೆಟ್​ ಪಡೆಯಬಹುದಾಗಿದೆ.

ಕಾಲ್ತುಳುತದ ವಿಷಯ ತಿಳಿದು ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತಾದರೂ ಯಾವುದೇ ಪ್ರಯೋಜವಾಗಲಿಲ್ಲ ಅಂತಿಮವಾಗಿ ಸರತಿ ಸಾಲಿನಲ್ಲಿ ಬರುವವರಿಗೆ ಟಿಕೆಟ್​ ಕೊಡುವುದಾಗಿ ಮೈದಾನದ ಸಿಬ್ಬಂದಿ ಹೇಳಿದ ನಂತರ ಪರಿಸ್ಥಿತಿಯನ್ನು ಹತ್ತೋಟಿಗೆ ತಂದರು.

Latest Posts

ಲೈಫ್‌ಸ್ಟೈಲ್