More

    ಮೊಬೈಲ್ ಫೋನ್ ನೀರಿಗೆ ಬಿತ್ತೆಂದು ಜಲಾಶಯವನ್ನೇ ಖಾಲಿ ಮಾಡಿಸಿದ ಅಧಿಕಾರಿ!

    ರಾಯ್​ಪುರ: ಕೈನಲ್ಲಿ ಮೊಬೈಲ್​ ಫೋನ್​ ಇದ್ದರೆ ಜಗತ್ತು ಕಾಣುವುದಿಲ್ಲ ಎಂಬುದಕ್ಕೆ ಛತ್ತೀಸ್​ಗಢದಲ್ಲಿ ನಡೆದಿರುವ ಈ ಘಟನೆಯೆ ಪ್ರಮುಖ ಸಾಕ್ಷಿಯಾಗಿದೆ.

    ಸರ್ಕಾರಿ ಅಧಿಕಾರಿ ಒಬ್ಬ ತನ್ನ ಬೇಜವಾಬ್ದಾರಿತನದಿಂದ ಮೊಬೈಲ್​ ಫೋನ್​ಅನ್ನು ಅಣೆಕಟ್ಟಿನ ಒಳಗಡೆ ಬೀಳಿಸಿ ಆ ನಂತರ ಅಲ್ಲಿರುವ ನೀರನ್ನು ಸಂಪೂಣರ್ವಾಗಿ ಹೊರತೆಗೆದಿರುವ ಘಟನೆ ಛತ್ತೀಸ್​ಗಢದ ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್‌ನ ಖೇರ್ಕಟ್ಟಾ ಅಣೆಕಟ್ಟಿನಲ್ಲಿ ನಡೆದಿದೆ.

    ನಡೆದಿದ್ದಿಷ್ಟು

    ಆಹಾರ ಇಲಾಖೆಯ ಆಧಿಕಾರಿ ರಾಜೇಶ್​ ವಿಶ್ವಾಸ್​ ಎಂಬುವವರು ಖೇರ್ಕಟ್ಟಾ ಅಣೆಕಟ್ಟಿನ ಸುತ್ತ ಭಾನುವಾರ ಸಂಜೆ ವಾಯುವಿಹಾರ ನಡೆಸುವ ವೇಳೆ ತಮ್ಮ ಕೈನಿಂದ 1 ಲಕ್ಷ ರೂಪಾಯಿ ಬೆಲೆ ಬಾಳುವ ಮೊಬೈಲ್​ ಫೋನ್​ ಜಾರಿ ನೀರಿನೊಳಗೆ ಬಿದ್ದಿದೆ.

    ಇದಕ್ಕೆ ಸುಮ್ಮನಾಗದ ಅಧಿಕಾರಿಯೂ ತಮ್ಮ ಮೊಬೈಲ್​ ಪೋನ್​ಅನ್ನು ವಾಪಸ್​ ಪಡೆಯುವ ಸಲುವಾಗಿ ಅಣೆಕಟ್ಟಿನಲ್ಲಿರುವ ನೀರನ್ನು ತೆಗೆಯುವಂತೆ ಆದೇಶಿಸಿದ್ಧಾರೆ. ಇದರನ್ವಯ ಅಧಿಕಾರಿಗಳು ಸುಮಾರು 21 ಲಕ್ಷ ಲೀಟರ್​ ನೀರನ್ನು ಹೊರತೆಗೆದು ಮೊಬೈಲ್​ ಹುಡುಕಿ ಕೊಟ್ಟಿದ್ದಾರೆ.

    ಸಮರ್ಥಿಸಿಕೊಂಡ ಅಧಿಕಾರಿ

    ಅಣಕಟ್ಟಿನಲ್ಲಿರುವ ನೀರನ್ನು ಖಾಲಿ ಮಾಡಿಸಿ ಮೊಬೈಲ್​ ಫೋನ್​ ಹುಡುಕಿಸಿರುವ ಕುರಿತು ಅಧಿಕಾರಿ ರಾಜೇಶ್​​ ವಿಶ್ವಾಸ್​ ಪ್ರತಿಕ್ರಿಯಿಸಿದ್ದು ಪಂಪ್​ ಮಾಡಿದ ನೀರು ಉಪಯೋಗಕ್ಕೆ ಯೋಗ್ಯವಲ್ಲವಾದ್ದರಿಂದ ಕಳೆದು ಹೋದ ಮೊಬೈಲ್​ ಫೋನ್​ ತನ್ನ ವೈಯಕ್ತಿ ಆದ್ದುದರಿಂದ ಅನೇಕ ಪ್ರಮುಖ ಸಂಪರ್ಕಗಳಿದ್ದರಿಂದ ಹುಡುಕಿಸ ಬೇಕಾಯಿತ್ತು.

    ನೀರನ್ನು ಹೊರತೆಗೆಯಲು ಸುಮಾರು 7,000-8,000 ಸಾವಿರ ರೂಪಾಯಿ ಮೌಲ್ಯದ ಡೀಸೆಲ್​ ಬಳಸಲಾಗಿದ್ದು ಈ ಬಗ್ಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಮದ ಮೌಖಿಕವಾಗಿ ಆದೇಶ ಹೊರಡಿಸಲಾಗಿತ್ತು. ನನ್ನ ಕ್ರಮದಿಂದ ಯಾರಿಗೂ ಹಾನಿಯಾಗಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಅಧಿಕಾರಿಯ ಬೇಜವಾಬ್ದಾರಿತನದಿಂದ ಸೋಮವಾರದಿಂದ-ಗುರುವಾರದ ವರೆಗೆ ಸುಮಾರು 21 ಲಕ್ಷ ನೀರು ಪೋಲಾಗಿದ್ದು ಇದನ್ನು 1.500 ಸಾವಿರ ಕೃಷಿ ಭೂಮಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಹೇಳಲಾಗಿದೆ.

    ಇದನ್ನೂ ಓದಿ: 3 ವರ್ಷ ಅವಧಿಗೆ ರಾಹುಲ್​ ಗಾಂಧಿ ಸಾಮಾನ್ಯ ಪಾಸ್​ಪೋರ್ಟ್​ ಪಡೆಯಬಹುದು: ದೆಹಲಿ ಹೈಕೋರ್ಟ್​

    ಅಧಿಕಾರಿ ಅಮಾನತು

    ಇನ್ನು ಅಧಿಕಾರಿಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ ನಂತರ ಅಣೆಕಟ್ಟಿನ ಸುತ್ತಮುತ್ತಲಿನ ಗ್ರಾಮದ ರೈತರು ಹಾಗು ನಿವಾಸಿಗಳು ಆಕ್ರೋಶ ಹೊರಹಾಕಿದ್ದು ಜಲ ಮಂಡಳಿ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದಾರೆ. ಪ್ರತಿಭಟೆಯ ಕಾವು ಹೆಚ್ಚಾಗುತ್ತಿದ್ದಂತೆ ಕಳಂಕಿತ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಿ ಕಂಕೇರ್ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿ ಒಬ್ಬರು ಸೋಮವಾರ ಬೆಳಗ್ಗೆಯಿಂದ ಗುರುವಾರ ಸಂಜೆವರೆಗೆ ನೀರನ್ನು ಹೊರತೆಗೆದು ಪೋಲು ಮಾಡಲಾಗಿದೆ. ರೈತರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ಪ್ರತಿಭಟನೆ ನಡೆಸಿದಾಗ ವಿಚಾರ ನಮ್ಮ ಬೆಳಕಿಗೆ ಬಂದಿದೆ.

    ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆಯದೆ ಅಧಿಕಾರಿ ದುರುಪಯೋಗ ಪಡಿಸಿಕೊಂಡ ಕಾರಣ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಹಿಂದೆ ರಾಜೇಶ್​ ಹಲವು ಭಾರಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಅಮಾನತಿನಲ್ಲಿದ್ದರು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts