ನಟ ಶಾರುಖ್ ಖಾನ್ ಮನೆ ಮುಂದೆ 30ಕ್ಕೂ ಅಧಿಕ ಮೊಬೈಲ್​ಫೋನ್​ಗಳು ಕಳವು!

Sharukh Khan
Published on

ಮುಂಬೈ: ಮೊಬೈಲ್ ​ಫೋನ್​ ಕಳವು ಇತ್ತೀಚೆಗೆ ಸರ್ವೇಸಾಮಾನ್ಯ. ರಸ್ತೆ ಬದಿಯಲ್ಲಿ ಕಾಲ್ ಮಾಡುತ್ತ ಹೋಗುವಾಗ ಕಳ್ಳರು ಮೊಬೈಲ್​ಫೋನ್ ಎಗರಿಸಿಕೊಂಡು ಹೋದ ಅನೇಕ ಪ್ರಕರಣಗಳಿವೆ. ಆದರೆ ಇಂಥ ಹಲವು ಪ್ರಕರಣಗಳು ಬಾಲಿವುಡ್​ನ ಖ್ಯಾತನಟನ ಮನೆ ಎದುರು ಒಂದೇ ದಿನದಲ್ಲಿ ಸಂಭವಿಸಿವೆ.

ಬಾಲಿವುಡ್​ ನಟ ಶಾರುಖ್​ ಖಾನ್​ ಅವರ ಮುಂಬೈನ ಮನೆ 'ಮನ್ನತ್' ಬಳಿ ಒಂದೇ ದಿನದಲ್ಲಿ 30ಕ್ಕೂ ಅಧಿಕ ಮೊಬೈಲ್​ ಫೋನ್​ಗಳು ಕಳವಾಗಿವೆ. ಈ ಸಂಬಂಧ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣಗಳು ದಾಖಲಾಗಿವೆ.

ನಿನ್ನೆ ಅಂದರೆ ನ. 2ರಂದು ಶಾರುಖ್ ಖಾನ್ ಜನ್ಮದಿನವಾಗಿದ್ದು, ಅವರಿಗೆ ಶುಭ ಹಾರೈಸಲು ಅಭಿಮಾನಿಗಳು ಅವರ ಮನೆ ಮನ್ನತ್ ಮುಂದೆ ಜಮಾಯಿಸಿದ್ದರು. ಹೀಗೆ ಅಪಾರ ಪ್ರಮಾಣದಲ್ಲಿ ನೆರೆದಿದ್ದ ಅಭಿಮಾನಿಗಳಿಂದಾಗಿ 'ಮನ್ನತ್' ಮುಂದೆ ದೊಡ್ಡ ಜನಜಂಗುಳಿ ಸೃಷ್ಟಿಯಾಗಿತ್ತು.

ಆ ಜನಸಂದಣಿ ನಡುವೆಯೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಫೋಟೋ-ವಿಡಿಯೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ಅಂಥವರ ಪೈಕಿ ಹಲವರು ಬಳಿಕ ತಮ್ಮ ಮೊಬೈಲ್​ ಫೋನ್​ಗಳನ್ನು ಕಳೆದುಕೊಂಡಿದ್ದು, ಅತ್ತ ಫೋಟೋ-ವಿಡಿಯೋ ಇಲ್ಲ, ಇತ್ತ ಮೊಬೈಲ್​ಫೋನ್ ಕೂಡ ಎಲ್ಲ ಎಂಬ ಫಜೀತಿಗೆ ಒಳಗಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net