More

    ಮುಖ್ಯಮಂತ್ರಿ ಬದಲಾವಣೆ ವಿಚಾರ: ಇದೀಗ ದಿನೇಶ್ ಗುಂಡೂರಾವ್ ಅವರಿಂದಲೂ ಹೊರಬಿತ್ತು ಪ್ರತಿಕ್ರಿಯೆ!

    ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆಯೇ ಇದೀಗ ಬಹುದೊಡ್ಡ ಚರ್ಚೆಯಾಗಿ ಪರಿಣಮಿಸಿದ್ದು, ಸಿಎಂ ಬದಲಾಗುತ್ತಾರಾ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಉಂಟಾಗಿದ್ದಲ್ಲದೆ ಆ ಕುರಿತ ಮಾತುಕತೆಗಳೇ ಕೇಳಿಬರುತ್ತಿವೆ.

    ಮುಂದಿನ ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಅವರು ಹೇಳಿದ ಬಳಿಕ ಮುಂದಿನ ಮುಖ್ಯಮಂತ್ರಿ ವಿಚಾರ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್​ನ ಒಬ್ಬೊಬ್ಬರೇ ನಾಯಕರು ಆ ಕುರಿತು ತಮ್ಮ ಅನಿಸಿಕೆ-ಅಭಿಪ್ರಾಯ ಹೇಳಿಕೊಳ್ಳಲಾರಂಭಿಸಿದ್ದಾರೆ.

    ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ಪಕ್ಷದ ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ‌ಕೇಳುತ್ತೇವೆ ಅಷ್ಟೇ. ನಾನು ಯಾವತ್ತೂ ಏನೂ ಮಾತನಾಡಿಲ್ಲ, ಮಾತನಾಡುವುದೂ ಇಲ್ಲ. ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳುತ್ತೇನೆ ಎಂಬದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್​ ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ತಮ್ಮ ಪ್ರತಿಕ್ರಿಯೆ ನೀಡಿದ್ದರು.

    ಇದನ್ನೂ ಓದಿ: ಪಕ್ಷದ ರಾಜ್ಯಾಧ್ಯಕ್ಷರೇ ಟ್ರಕ್​ ಕ್ಲೀನರ್ ಥರ ನಟಿಸಿ ಭ್ರಷ್ಟಾಚಾರ ಬಯಲಿಗೆಳೆದ್ರು!

    ಮತ್ತೊಂದೆಡೆ ಸಚಿವ ಪ್ರಿಯಾಂಕ್ ಖರ್ಗೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು, ಒಂದು ವೇಳೆ ಹೈಕಮಾಂಡ್ ನನ್ನನ್ನು ಸಿಎಂ ಆಗಲು ಸೂಚಿಸಿದರೆ ನಾನು ಆಗುತ್ತೇನೆ ಎನ್ನುವ ಮೂಲಕ ತಾವೂ ಸಿಎಂ ಹುದ್ದೆಯ ಆಕಾಂಕ್ಷಿ ಎಂಬುದನ್ನು ಬಹಿರಂಗಪಡಿಸಿದ್ದಾರೆ.

    ಇನ್ನೊಂದೆಡೆ ಸಚಿವ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಆಗುತ್ತಾರೆಂದು ಸಚಿವ ಕೆ.ಎನ್.ರಾಜಣ್ಣ ಹೇಳಿದ್ದು, ನಾನು ಜೀವನದಲ್ಲಿ ಹೇಳಿದ್ದು ಯಾವುದೂ ಸುಳ್ಳಾಗಿಲ್ಲ ಎಂದಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಯಾರು ಎಂಬುದು ಗುಂಪುಗಾರಿಕೆ ಹಾಗೂ ಭಿನ್ನಾಭಿಪ್ರಾಯ ಸೃಷ್ಟಿಸಿರುವ ಲಕ್ಷಣಗಳು ಗೋಚರಿಸಿವೆ.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಈ ಮಧ್ಯೆ ಇದೀಗ ಸಚಿವ ದಿನೇಶ್ ಗುಂಡೂರಾವ್ ಕೂಡ ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆಯಲಿರುವ ಕಂಬಳದ ಗದ್ದೆಯ ನಿರ್ಮಾಣ ಕಾಮಗಾರಿಯನ್ನು ಅರಮನೆ ಮೈದಾನದಲ್ಲಿ ವೀಕ್ಷಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯವಾಗಿ ಪ್ರತಿಕ್ರಿಯೆ ನೀಡಿದರು.

    ಇದನ್ನೂ ಓದಿ: ಯುವಕರೇಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಅಚ್ಚರಿಯೇ?: 70 ಗಂಟೆ ಕೆಲಸ.. ಮೂರ್ತಿ ವರ್ಸಸ್ ಮೂರ್ತಿ…

    ಈಗಾಗಲೇ ಮುಖ್ಯಮಂತ್ರಿ ಇರುವಾಗ ನಾವ್ಯಾಕೆ ಅದರ ಬಗ್ಗೆ ಚರ್ಚೆ ಮಾಡಬೇಕು? ನಮಗೆ ಪೂರ್ಣ ಬಹುಮತವಿದ್ದು, ಮುಖ್ಯಮಂತ್ರಿ ಕೂಡ ಇರುವಾಗ ನಾವು ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುರಿತು ಚರ್ಚೆ ಮಾಡಬಾರದು. ನಮ್ಮ ಹೈಕಮಾಂಡ್ ಸುಮ್ಮನಿರುವಂತೆ ಸೂಚಿಸಿದೆ, ನಾವು ಆ ಬಗ್ಗೆ ಚರ್ಚಿಸಬಾರದು ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

    ಇಬ್ಬರ ಮಧ್ಯೆ ಮನಸ್ತಾಪ ಬಂದ ಮಾತ್ರಕ್ಕೆ ಅತ್ಯಾಚಾರ ಪ್ರಕರಣ ದಾಖಲಿಸುವುದು ಸರಿಯಲ್ಲ: ಹೈಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts