More

    ಇಬ್ಬರ ಮಧ್ಯೆ ಮನಸ್ತಾಪ ಬಂದ ಮಾತ್ರಕ್ಕೆ ಅತ್ಯಾಚಾರ ಪ್ರಕರಣ ದಾಖಲಿಸುವುದು ಸರಿಯಲ್ಲ: ಹೈಕೋರ್ಟ್

    ನವದೆಹಲಿ: ಸಾಮಾನ್ಯವಾಗಿ ಯುವಕ-ಯುವತಿಯ ನಡುವಿನ ಪ್ರೀತಿಯಲ್ಲಿ ಭಿನ್ನಾಭಿಪ್ರಾಯ ಇಲ್ಲವೇ ಮನಸ್ತಾಪ ಉಂಟಾದ ಮೇಲೆ ಯುವತಿ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ ಎಷ್ಟೋ ಪ್ರಸಂಗಗಳಿವೆ. ಇದೀಗ ಇಂಥ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್​ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

    ಯುವಕ-ಯುವತಿಯ ನಡುವಿನ ಪ್ರೀತಿ ಇಲ್ಲವೇ ಪ್ರಣಯಾತ್ಮಕ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಉಂಟಾದರೆ, ಮನಸ್ತಾಪವಾದರೆ ಅದೊಂದೇ ಕಾರಣದಿಂದಾಗಿ ಅತ್ಯಾಚಾರ ಪ್ರಕರಣ ದಾಖಲಿಸುವುದು ಸರಿಯಲ್ಲ ಎಂಬುದಾಗಿ ದೆಹಲಿ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ವ್ಯಕ್ತಿಯೊಬ್ಬನ ವಿರುದ್ಧ ಮಹಿಳೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ವ್ಯಕ್ತಿಯೊಬ್ಬ ನನ್ನನ್ನು ಮದುವೆಯಾಗುವುದಾಗಿ ಹೇಳಿ ಲೈಂಗಿಕ ಸಂಪರ್ಕ ಹೊಂದಿದ್ದ. ಆತನೊಂದಿಗೆ ಸಂಬಂಧ ಹೊಂದಿದ ಮೇಲೆ ಆತನ ಮನೆಯವರು ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು. ನನ್ನ ತಂದೆ ಹಣ ನೀಡಲು ನಿರಾಕರಿಸಿದಾಗ ಆತ ನನ್ನನ್ನು ದೂರವಿರಿಸಿದ ಎಂದು ಆರೋಪಿಸಿರುವ ಮಹಿಳೆ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು.

    ಇದನ್ನೂ ಓದಿ: ಕಮಲ್​ ಹಾಸನ್ ‘ಇಂಡಿಯನ್​ 2’ಗೆ ಘಟಾನುಘಟಿಗಳ ಸಾಥ್​; ನಾಳೆ ಯಾರ್ಯಾರು ಜೊತೆಯಾಗುತ್ತಿದ್ದಾರೆ?

    ಆದರೆ ಮದುವೆ ಮುರಿದು ಬೀಳಲು ಮಹಿಳೆ ಆಕೆಯ ಕಾಯಿಲೆಯನ್ನು ಗುಟ್ಟಾಗಿರಿಸಿದ್ದೇ ಕಾರಣ. ಅದಾಗ್ಯೂ ನನ್ನ ತೇಜೋವಧೆ ಮಾಡಲು ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ವ್ಯಕ್ತಿ ಆರೋಪಿಸಿದ್ದಾನೆ. ಈ ಪ್ರಕರಣ ಸಂಬಂಧ ಮನವಿಯನ್ನು ಪರಿಶೀಲಿಸಿದ ನ್ಯಾಯಾಧೀಶ ಸುಧೀರ್ ಕುಮಾರ್ ಜೈನ್, ಎಫ್​ಐಆರ್​ನಲ್ಲಿನ ಅಂಶಗಳನ್ನು ಗಮನಿಸಿದರೆ ಆರೋಪಿಗೆ ಆಕೆಯನ್ನು ಮದುವೆ ಆಗುವ ಉದ್ದೇಶ ಇರಲಿಲ್ಲ ಮತ್ತು ಆರಂಭದಿಂದಲೂ ಆತ ಆ ಬಗ್ಗೆ ಭರವಸೆ ನೀಡಿರಲಿಲ್ಲ ಎಂಬುದು ತಿಳಿದುಬರುತ್ತಿದೆ ಎಂದಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಅತ್ಯಾಚಾರ ಪ್ರಕರಣ ಅನ್ವಯಿಸುವುದಿಲ್ಲ ಎಂದೂ ಹೇಳಿದ್ದಾರೆ.

    ಇದನ್ನೂ ಓದಿ: ಸಾಫ್ಟ್​ವೇರ್​ ಉದ್ಯೋಗ: ಫ್ರೆಷರ್ಸ್​ಗೆ ಭಾರತದಲ್ಲೇ ಕಡಿಮೆ ಸಂಬಳ, ಜಾಸ್ತಿ ಕೆಲಸ!

    ಸಂಬಂಧ ಕಾರ್ಯರೂಪಕ್ಕೆ ಬರದಿದ್ದರೆ, ಸೆಕ್ಷನ್ 376 ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ಎಫ್‌ಐಆರ್ ದಾಖಲಿಸಲು ಅದೇ ಆಧಾರವಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆರೋಪಿಯೊಂದಿಗೆ ನಾಲ್ಕು ತಿಂಗಳಿನಿಂದ ಯಾವುದೇ ಬಲವಂತದ ಲೈಂಗಿಕ ಸಂಬಂಧ ವಿಚಾರವನ್ನು ದೂರುದಾರರು ಬಹಿರಂಗಪಡಿಸಿಲ್ಲ. ಅರ್ಜಿದಾರರು ದೂರುದಾರರೊಂದಿಗೆ ಆಕೆಯ ಒಪ್ಪಿಗೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬ ವಿಷಯ ವಿಚಾರಣೆಗೆ ಒಳಪಟ್ಟಿರುತ್ತದೆ ಮತ್ತು ಸಾಕ್ಷ್ಯಾಧಾರಗಳಿಲ್ಲದೆ ನಿರ್ಧರಿಸಲಾಗುವುದಿಲ್ಲ ಎಂದೂ ಹೈಕೋರ್ಟ್ ತಿಳಿಸಿದೆ.

    ಇದನ್ನೂ ಓದಿ: ಫ್ರೆಷರ್ಸ್​ಗೆ ಹೋಲಿಸಿದ್ರೆ ಇನ್​ಫೊಸಿಸ್ ಸಿಇಒ ಸಂಬಳ 2,200 ಪಟ್ಟು ಹೆಚ್ಚು!; ಅವರು ಎಷ್ಟು ಗಂಟೆ ಕೆಲಸ ಮಾಡ್ತಾರೆ?

    ಅರ್ಜಿದಾರರು ಸರ್ಕಾರಿ ಉದ್ಯೋಗಿ ಆಗಿರುವುದರಿಂದ ಸುಳ್ಳು ಪ್ರಕರಣದಲ್ಲಿ ಸೆರೆವಾಸಕ್ಕೆ ಒಳಗಾದರೆ ಅವರ ವೃತ್ತಿಜೀವನಕ್ಕೆ ಗಂಭೀರ ತೊಂದರೆ ಆಗುತ್ತದೆ. ಅದಾಗ್ಯೂ ಅವರು ಈ ಪ್ರಕರಣದಲ್ಲಿ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಅಪಾಯವಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

    ಸಿಎಂ ಸಿದ್ದರಾಮಯ್ಯ ಹೇಳಿದ್ದು ಸುಳ್ಳು!; ಆ ಮಗುವಿನ ವಿಚಾರದಲ್ಲಿ ಮಧ್ಯಪ್ರವೇಶಿಸಿದ ರಾಜ್ಯ ಬಿಜೆಪಿ ಹೀಗಂದಿದ್ದೇಕೆ?

    ಬಾಲಕನ ಹುಟ್ಟುಹಬ್ಬದ ಮುನ್ನಾದಿನವೇ ಸಂಸಾರ ಸರ್ವನಾಶ; ಸಮಾಧಿ ಮೇಲೆ ಬರ್ತ್​ಡೇ ಗಿಫ್ಟ್​​ಗಳನ್ನಿಟ್ಟ ಅಜ್ಜ-ಅಜ್ಜಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts