More

    ಬಾಲಕನ ಹುಟ್ಟುಹಬ್ಬದ ಮುನ್ನಾದಿನವೇ ಸಂಸಾರ ಸರ್ವನಾಶ; ಸಮಾಧಿ ಮೇಲೆ ಬರ್ತ್​ಡೇ ಗಿಫ್ಟ್​​ಗಳನ್ನಿಟ್ಟ ಅಜ್ಜ-ಅಜ್ಜಿ!

    ನವದೆಹಲಿ: ಇಸ್ರೇಲ್​ನಲ್ಲಿ ಹಮಾಸ್​ ದಾಳಿಯಿಂದಾಗಿ ರಣಾಂಗಣ ಸೃಷ್ಟಿಯಾಗಿ ರಣಭೀಕರ ಪರಿಸ್ಥಿತಿ ಉಂಟಾಗಿದ್ದು, ಅಲ್ಲಿನ ಪ್ರಕ್ಷುಬ್ಧ ವಾತಾವರಣ ಇನ್ನೂ ತಿಳಿಯಾಗಿಲ್ಲ. ಅದಾಗ್ಯೂ ಮತ್ತೆ ಮತ್ತೆ ಗುಂಡಿನ ಮೊರೆತ ಕೇಳುತ್ತಿದ್ದು, ಆತಂಕ ಮುಂದುವರಿದಿದೆ. ಈ ಮಧ್ಯೆ ಒಂದೊಂದೇ ದುರಂತಗಳು ಬಹಿರಂಗಗೊಳ್ಳುತ್ತಿವೆ.

    ಹಮಾಸ್​ ಉಗ್ರರ ದಾಳಿಯಿಂದಾಗಿ ನಲುಗಿರುವ ಇಸ್ರೇಲ್​ನಲ್ಲಿನ ಭೀಕರ ಪರಿಸ್ಥಿತಿ, ಮೆರೆದ ಕ್ರೌರ್ಯಗಳ ಕುರಿತಂತೆ ಒಂದೊಂದೇ ಸಂಗತಿ ಹೊರಬೀಳುತ್ತಿದ್ದು, ಅಲ್ಲಿನ ಜನರು ಎದುರಿಸಿದ ಬರ್ಬರತೆ, ಅನುಭವಿಸಿದ ನೋವು-ಯಾತನೆಗಳು ಬಯಲಾಗುತ್ತಿವೆ.

    ಇದನ್ನೂ ಓದಿ: ಆಕೆ ಇನ್ನಿಲ್ಲ ಎಂಬುದನ್ನು ಖಚಿತಪಡಿಸಿದ ಇಸ್ರೇಲ್​; ಆಕೆಯನ್ನು ಹಮಾಸ್ ಉಗ್ರರು ಅದೇನೇನು ಮಾಡಿದ್ದರೆಂದರೆ…

    ಅಂಥ ಒಂದು ಕರುಣಾಜನಕ ಸಂಗತಿಯೊಂದನ್ನು ಇಸ್ರೇಲ್​ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಹಂಚಿಕೊಂಡಿದೆ. ಐಟನ್ ಎಂಬ ಐದು ವರ್ಷದ ಬಾಲಕ ಆತನ ಹುಟ್ಟುಹಬ್ಬದ ಮುನ್ನಾದಿನವೇ ತಂದೆ-ತಾಯಿ, ಸೋದರಿ ಸಹಿತ ಹಮಾಸ್ ಉಗ್ರರಿಂದ ಹತ್ಯೆಗೀಡಾದ ವಿಷಯವನ್ನು ಇಸ್ರೇಲ್ ಹಂಚಿಕೊಂಡಿದೆ.

    ಇದನ್ನೂ ಓದಿ: ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

    ಅ. 8ರಂದು ಐಟನ್​ನ ಬರ್ತ್​ಡೇ. ಅದರ ಸಲುವಾಗಿ ಆತನ ಪಾಲಕರು ತಮ್ಮ ಪುತ್ರಿ-ಪುತ್ರನನ್ನು ಕರೆದುಕೊಂಡು ದಕ್ಷಿಣ ಇಸ್ರೇಲ್​ನ ಪ್ರದೇಶಕ್ಕೆ ಕ್ಯಾಂಪಿಂಗ್ ಹೋಗಿದ್ದರು. ದುರದೃಷ್ಟವಶಾತ್ ಅ. 7ರಂದು ನಡೆದ ಹಮಾಸ್ ಉಗ್ರರ ದಾಳಿಗೆ ಈ ಕುಟುಂಬ ಸಿಲುಕಿದ್ದು, ಅವರು ಐಟನ್, ಆತನ ಏಳು ವರ್ಷದ ಸಹೋದರಿ ಹಾಗೂ ತಂದೆ-ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದರು.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಮೊಮ್ಮಗನ ಬರ್ತ್​ಡೇಗೆಂದು ಅಜ್ಜ-ಅಜ್ಜಿ ತಂದಿಟ್ಟಿದ್ದ ಉಡುಗೊರೆಯ ಗೊಂಬೆಗಳನ್ನು ಬಳಿಕ ಆತನ ಸಮಾಧಿ ಮೇಲಿಟ್ಟ ಚಿತ್ರವನ್ನು ಇಸ್ರೇಲ್ ಹಂಚಿಕೊಂಡಿದ್ದು, ಹಮಾಸ್​ ದಾಳಿಯ ಭೀಕರತೆ ಹಾಗೂ ಅದರಿಂದಾದ ದುರಂತವನ್ನು ಅನಾವರಣಗೊಳಿಸಿದೆ.

    ಮಕ್ಕಳನ್ನು ಹೊಂದುವುದೆಂದರೆ ಜಗತ್ತನ್ನು ಉಳಿಸಿದಂತೆ: ಎಲಾನ್ ಮಸ್ಕ್

    15 ತಿಂಗಳ ಮಗು ಸಲುವಾಗಿ ಪ್ರಧಾನಿಗೆ ಮನವಿ ಮಾಡಿಕೊಂಡ ಸಿಎಂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts