ಮಕ್ಕಳನ್ನು ಹೊಂದುವುದೆಂದರೆ ಜಗತ್ತನ್ನು ಉಳಿಸಿದಂತೆ: ಎಲಾನ್ ಮಸ್ಕ್

Elon Musk X
Published on

ನವದೆಹಲಿ: ಜನಸಂಖ್ಯೆ ಹೆಚ್ಚುವುದನ್ನು ಜನಸಂಖ್ಯಾ ಸ್ಫೋಟ ಎನ್ನಲಾಗುತ್ತಿದೆ. ಜನಸಂಖ್ಯೆ ಹೆಚ್ಚುವುದು ಒಳ್ಳೆಯದೋ ಕೆಟ್ಟದ್ದೋ ಎಂಬುದು ಇನ್ನೂ ಗೊಂದಲದ ಸಂಗತಿ ಆಗಿದೆ. ಈ ಮಧ್ಯೆ ಎಕ್ಸ್​ ಮುಖ್ಯಸ್ಥ ಎಲಾನ್ ಮಸ್ಕ್ ಜನಸಂಖ್ಯೆ ಹೆಚ್ಚಳದ ಕುರಿತು ಒಲವು ತೋರಿ ಮಾತನಾಡಿದ್ದಾರೆ.

ನಿನ್ನೆಯಷ್ಟೇ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಮಕ್ಕಳನ್ನು ಹೊಂದುವುದೆಂದರೆ ಜಗತ್ತನ್ನು ಉಳಿಸಿದಂತೆ ಎಂದು ಹೇಳಿದ್ದಾರೆ. ಮಾತ್ರವಲ್ಲ, ಈ ಪೋಸ್ಟನ್ನು ಪಿನ್ ಮಾಡುವ ಮೂಲಕ ಆ ಅಭಿಪ್ರಾಯಕ್ಕೆ ಅವರು ಹೆಚ್ಚಿನ ಒತ್ತು ಕೊಟ್ಟಿರುವುದನ್ನು ವ್ಯಕ್ತಪಡಿಸಿದ್ದಾರೆ.  

ಒಬ್ಬಳು ಗೆಳತಿ, ಮೂವರು ಪತ್ನಿಯರ ಜತೆಗೆ ಹತ್ತಕ್ಕೂ ಅಧಿಕ ಮಕ್ಕಳನ್ನು ಹೊಂದಿರುವ ಎಲಾನ್ ಮಸ್ಕ್, ಎಲ್ಲರೂ ಹೆಚ್ಚು ಮಕ್ಕಳನ್ನು ಹೊಂದಬೇಕು, ಜನಸಂಖ್ಯೆ ಹೆಚ್ಚಾಗಬೇಕು ಎಂಬ ಆಶಯವನ್ನು ಈಗಾಗಲೇ ಕೆಲವು ಸಲ ವ್ಯಕ್ತಪಡಿಸಿದ್ದರು. ಇದೀಗ ಇನ್ನೊಮ್ಮೆ ಅವರು ಹೆಚ್ಚು ಮಕ್ಕಳು ಹುಟ್ಟುವ ಮೂಲಕ ಜನಸಂಖ್ಯೆ ಹೆಚ್ಚಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net