More

    ಸಾಫ್ಟ್​ವೇರ್​ ಉದ್ಯೋಗ: ಫ್ರೆಷರ್ಸ್​ಗೆ ಭಾರತದಲ್ಲೇ ಕಡಿಮೆ ಸಂಬಳ, ಜಾಸ್ತಿ ಕೆಲಸ!

    ಬೆಂಗಳೂರು: ಸಾಫ್ಟ್​ವೇರ್ ಕಂಪನಿಗಳ ಪೈಕಿ ಮುಂಚೂಣಿಯಲ್ಲಿರುವ ಕಂಪನಿಗಳಲ್ಲಿ ಒಂದಾಗಿರುವ ಇನ್​ಫೊಸಿಸ್​ ಸಂಸ್ಥಾಪಕ ನಾರಾಯಣಮೂರ್ತಿ ಅವರು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದಿರುವುದು ತೀರಾ ಸಂಚಲನ ಸೃಷ್ಟಿಸಿದೆ. ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿರುವ ಈ ಸಂಗತಿ ಕುರಿತಾಗಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

    ನಾರಾಯಣಮೂರ್ತಿ ಅವರ ಹೇಳಿಕೆ ವಿಚಾರವಾಗಿ ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅದು ಬಳಿಕ ಇನ್​ಫೊಸಿಸ್ ಸಿಇಒ ವಾರ್ಷಿಕ ವೇತನದ ಬಗ್ಗೆಯೂ ಕಮೆಂಟ್ ಮಾಡುವ ಮಟ್ಟಕ್ಕೆ ಹೋಗಿದೆ. ಅದರಲ್ಲೂ ಐಟಿ ಕಂಪನಿಗಳ ಸಿಇಒಗಳ ವಾರ್ಷಿಕ ವೇತನ ಫ್ರೆಷರ್ಸ್ ವಾರ್ಷಿಕ ವೇತನಕ್ಕೆ ಹೋಲಿಸಿದರೆ ತೀರಾ ಹೆಚ್ಚು ಎಂಬುದರ ಮೇಲೂ ಬೆಳಕು ಚೆಲ್ಲಿದೆ. ಅಲ್ಲದೆ, ಹತ್ತು ವರ್ಷಗಳ ಅವಧಿಯಲ್ಲಿ ಸಿಇಒ ಮತ್ತು ಫ್ರೆಷರ್ಸ್​ ವಾರ್ಷಿಕ ವೇತನ ಹೆಚ್ಚಳದಲ್ಲಿ ಭಾರಿ ಅಸಮಾನತೆ ಇರುವುದು ಕೂಡ ಕಂಡುಬಂದಿದೆ.

    ಇದನ್ನೂ ಓದಿ: ಯುವಕರೇಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಅಚ್ಚರಿಯೇ?: 70 ಗಂಟೆ ಕೆಲಸ.. ಮೂರ್ತಿ ವರ್ಸಸ್ ಮೂರ್ತಿ…

    ನಾರಾಯಣಮೂರ್ತಿ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು ಹೀಗೆ ಒಂದೊಂದೇ ವಿಚಾರವಾಗಿ ಬೆಳಕು ಚೆಲ್ಲುತ್ತಿದ್ದು, ಇದೀಗ ಅದೇ ಹಿನ್ನೆಲೆಯಲ್ಲಿ ಇನ್ನೊಂದು ಸಂಗತಿ ಬೆಳಕಿಗೆ ಬಂದಿದೆ. ಅಂದರೆ, ಫ್ರೆಷರ್ಸ್​ ಸಾಫ್ಟ್​ವೇರ್ ಉದ್ಯೋಗಿಗಳಿಗೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲೇ ಹೆಚ್ಚು ಕೆಲಸ ಮಾಡಿಸಿಕೊಂಡು ಕಡಿಮೆ ಸಂಬಳ ನೀಡುತ್ತಿದ್ದಾರೆ ಎಂಬುದರ ಮೇಲೂ ವ್ಯಕ್ತಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಸಾಕೇತ್ ಆರ್. ಎಂಬ ವ್ಯಕ್ತಿಯೊಬ್ಬರು ಯುಎಸ್​ಎ, ಯಕೆ, ಕೆನಡ, ಜರ್ಮನಿ, ಬ್ರೆಜಿಲ್, ಜಪಾನ್​ಗಳಲ್ಲಿ ಸಾಫ್ಟ್​ವೇರ್ ಉದ್ಯೋಗಿಗಳನ್ನು ಎಷ್ಟು ಸಮಯ ದುಡಿಸಿಕೊಳ್ಳುತ್ತಾರೆ ಮತ್ತು ಎಷ್ಟು ಸಂಬಳ ಕೊಡುತ್ತಾರೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಆ ಬಗ್ಗೆ ಅವರು ಪಟ್ಟಿಯೊಂದನ್ನೂ ಹಂಚಿಕೊಂಡಿದ್ದು, ಅದರ ಪ್ರಕಾರ ಭಾರತದಲ್ಲೇ ಸಾಫ್ಟ್​ವೇರ್ ಉದ್ಯೋಗಿಗಳಿಗೆ ಅಂದರೆ ಐಟಿ ಕ್ಷೇತ್ರದ ಫ್ರೆಷರ್ಸ್​ಗೆ ಬೇರೆ ದೇಶಗಳಿಗಿಂತ ಕಡಿಮೆ ಸಂಬಳ ಹಾಗೂ ಹೆಚ್ಚು ಕೆಲಸ ಇರುವುದು ಕಂಡುಬಂದಿದೆ. ಮಾತ್ರವಲ್ಲ, ಚೀನಾದಲ್ಲೂ ಐಟಿ ಫ್ರೆಷರ್ಸ್​ಗೆ ಭಾರತದಲ್ಲಿ ನೀಡುವುದಕ್ಕಿಂತ ಜಾಸ್ತಿ ಸಂಬಳ ಕೊಟ್ಟು, ಕಡಿಮೆ ದುಡಿಸಿಕೊಳ್ಳುತ್ತಿದ್ದಾರೆ.

    ಫ್ರೆಷರ್ಸ್​ಗೆ ಹೋಲಿಸಿದ್ರೆ ಇನ್​ಫೊಸಿಸ್ ಸಿಇಒ ಸಂಬಳ 2,200 ಪಟ್ಟು ಹೆಚ್ಚು!; ಅವರು ಎಷ್ಟು ಗಂಟೆ ಕೆಲಸ ಮಾಡ್ತಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts