More

    ಸಿಎಂ ಸಿದ್ದರಾಮಯ್ಯ ಹೇಳಿದ್ದು ಸುಳ್ಳು!; ಆ ಮಗುವಿನ ವಿಚಾರದಲ್ಲಿ ಮಧ್ಯಪ್ರವೇಶಿಸಿದ ರಾಜ್ಯ ಬಿಜೆಪಿ ಹೀಗಂದಿದ್ದೇಕೆ?

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯ ಬಿಜೆಪಿ ಇದೀಗ ಗಂಭೀರ ಆರೋಪವೊಂದನ್ನು ಮಾಡಿದೆ. ಮುಖ್ಯಮಂತ್ರಿಯಂಥ ಘನತೆವೆತ್ತ ಸ್ಥಾನದಲ್ಲಿ ಕೂತು ಸಿದ್ದರಾಮಯ್ಯ ಅವರು ಸುಳ್ಳು ಹೇಳಿದ್ದಾರೆ ಎಂಬುದಾಗಿ ಬಿಜೆಪಿ ಆರೋಪಿಸಿದೆ. ಅಷ್ಟಕ್ಕೂ ಇಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಿರುವುದು ಸಿಎಂ ನಿನ್ನೆ ಮಗುವೊಂದರ ಚಿಕಿತ್ಸೆ ಸಲುವಾಗಿ ಪ್ರಧಾನಿ ಮೋದಿ ಅವರ ಮಧ್ಯಪ್ರವೇಶದ ಬಗ್ಗೆ ಮಾಡಿಕೊಂಡಿರುವ ಮನವಿ.

    ‘ಕರ್ನಾಟಕದ 15 ತಿಂಗಳ ಮೌರ್ಯ ಎಂಬ ಪುಟ್ಟ ಕಂದ ‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈ ಮಗುವಿನ ಖಾಯಿಲೆ ಗುಣಪಡಿಸಬಹುದಾದ ಝೋಲ್ಗೆನ್‌ಸ್ಮ ಎಂಬ ಚುಚ್ಚುಮದ್ದನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದ್ದು, ಅದರ ಬೆಲೆ ರೂ. 17.5 ಕೋಟಿ ಇದೆ. ಕೇಂದ್ರ ಸರ್ಕಾರವು ಇದನ್ನು ಮಾನವೀಯ ನೆಲೆಗಟ್ಟಿನಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಆಮದು ಸುಂಕದಿಂದ ವಿನಾಯಿತಿ ನೀಡುವ ಮೂಲಕ ಕರುನಾಡಿನ ಪುಟ್ಟ ಕಂದನ ಪ್ರಾಣ ಉಳಿಸಲು ನೆರವಾಗಬೇಕು ಎಂದು ಸಿಎಂ ನಿನ್ನೆ ಪ್ರಧಾನಿಯನ್ನುದ್ದೇಶಿಸಿ ಮನವಿ ಮಾಡಿಕೊಂಡಿದ್ದರು.

    ಇದನ್ನೂ ಓದಿ: ಸಾಫ್ಟ್​ವೇರ್​ ಉದ್ಯೋಗ: ಫ್ರೆಷರ್ಸ್​ಗೆ ಭಾರತದಲ್ಲೇ ಕಡಿಮೆ ಸಂಬಳ, ಜಾಸ್ತಿ ಕೆಲಸ!

    ಇದೇ ವಿಚಾರವಾಗಿ ಈಗ ರಾಜ್ಯ ಬಿಜೆಪಿ ತನ್ನ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದೆ. ಮುಖ್ಯಮಂತ್ರಿಯಂಥ ಘನತೆವೆತ್ತ ಸ್ಥಾನದಲ್ಲಿ ಕೂತು ಈ ರೀತಿ ಸುಳ್ಳು ಸುದ್ದಿಗಳ ವರದಿಗಾರ ಆಗಿರುವುದು ಆ ಸ್ಥಾನಕ್ಕೂ ಶೋಭೆಯಲ್ಲ ಎಂದು ಬಿಜೆಪಿ ಟೀಕಿಸಿದೆ.

    ಇದನ್ನೂ ಓದಿ: ಫ್ರೆಷರ್ಸ್​ಗೆ ಹೋಲಿಸಿದ್ರೆ ಇನ್​ಫೊಸಿಸ್ ಸಿಇಒ ಸಂಬಳ 2,200 ಪಟ್ಟು ಹೆಚ್ಚು!; ಅವರು ಎಷ್ಟು ಗಂಟೆ ಕೆಲಸ ಮಾಡ್ತಾರೆ?

    ‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ’ ಚಿಕಿತ್ಸೆಗೆ ಬಳಸುವ ಎಲ್ಲಾ ರೀತಿಯ ಔಷಧಗಳಿಗೆ ಆಮದು ಸುಂಕ ವಿನಾಯಿತಿಯನ್ನು 2021ರ ಅಕ್ಟೋಬರ್ 1ರಿಂದಲೇ ನೀಡಲಾಗುತ್ತಿದೆ. ಜತೆಗೆ ಎಲ್ಲಾ ರೀತಿಯ ಅಪರೂಪದ ಕಾಯಿಲೆಗಳಿಗೆ ಅಗತ್ಯವಾದ ಔಷಧಗಳಿಗೂ ಮಾರ್ಚ್ 2023ರಿಂದ ವಿನಾಯಿತಿ ನೀಡಲಾಗುತ್ತಿದೆ ಎಂಬುದೂ ತಮ್ಮ ಗಮನದಲ್ಲಿರಲಿ. ಜಿಲ್ಲಾ ಆರೋಗ್ಯಾಧಿಕಾರಿಯಿಂದ ಅದಕ್ಕೆ ಸಂಬಂಧಿಸಿದ ಪತ್ರ ಬೇಕಷ್ಟೇ, ಅದಂತೂ ತಮ್ಮ ಸರ್ಕಾರದ ಕಡೆಯಿಂದಲೇ ಆಗಬೇಕಾದ ಕೆಲಸ ಎಂದು ಬಿಜೆಪಿ ಹೇಳಿದೆ.

    ಅಲ್ಲದೆ, ಕೇಂದ್ರ ಸರ್ಕಾರದ ಯೋಜನೆಗಳನ್ನೆಲ್ಲ ತಾವು ಹೀಗೆಯೇ ನಿಮ್ಮ ಕಡೆಯ ನಿರ್ಲಕ್ಷ್ಯದಿಂದಾಗಿ ಜನರಿಗೆ ತಲುಪಿಸುತ್ತಲೇ ಇಲ್ಲ. ಇನ್ನಾದರೂ ಎಚ್ಚೆತ್ತು ಗಮನವಹಿಸಿ ಸರ್ಕಾರ ನಿರ್ವಹಿಸಿ ಎಂದು ಬಿಜೆಪಿ ಸಿದ್ದರಾಮಯ್ಯ ಅವರನ್ನುದ್ದೇಶಿಸಿ ಹೇಳಿದೆ.

    ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಬಾಲಕನ ಹುಟ್ಟುಹಬ್ಬದ ಮುನ್ನಾದಿನವೇ ಸಂಸಾರ ಸರ್ವನಾಶ; ಸಮಾಧಿ ಮೇಲೆ ಬರ್ತ್​ಡೇ ಗಿಫ್ಟ್​​ಗಳನ್ನಿಟ್ಟ ಅಜ್ಜ-ಅಜ್ಜಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts