More

    ಕಮಲ್​ ಹಾಸನ್ ‘ಇಂಡಿಯನ್​ 2’ಗೆ ಘಟಾನುಘಟಿಗಳ ಸಾಥ್​; ನಾಳೆ ಯಾರ್ಯಾರು ಜೊತೆಯಾಗುತ್ತಿದ್ದಾರೆ?

    ಬೆಂಗಳೂರು: ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಇಂಡಿಯನ್ 2’ ಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ನಾಳೆ ಈ ಚಿತ್ರದ ಫಸ್ಟ್ ಗ್ಲಿಂಪ್ಸ್ ಹೊರಬೀಳಲಿದ್ದು, ಕಮಲ್ ಹಾಸನ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

    1996ರಲ್ಲಿ ಮೂಡಿಬಂದ ‘ಇಂಡಿಯನ್‌’ನ ಮುಂದುವರಿದ ಭಾಗವೇ ‘ಇಂಡಿಯನ್ 2’. ಖ್ಯಾತ ನಟ ಕಮಲ್ ಹಾಸನ್ ಆ ಚಿತ್ರದಲ್ಲಿ ಸೇನಾಪತಿ ಪಾತ್ರದಲ್ಲಿ ಮಿಂಚಿದ್ದರು. ಅದರ ಮುಂದುವರಿದ ಭಾಗವಾಗಿರುವ ‘ಇಂಡಿಯನ್-2’ ಚಿತ್ರದ ಇಂಟ್ರೋ ವೀಡಿಯೋ ನಾಳೆ ಬಿಡುಗಡೆ ಆಗಲಿದೆ.

    ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿರುವ ಈ ಇಂಟ್ರೋ ವಿಡಿಯೋಗೆ ಚಿತ್ರರಂಗದ ಘಟಾನುಘಟಿಗಳು ಜೊತೆಯಾಗಲಿದ್ದಾರೆ. ಅಂದರೆ ಒಂದೊಂದು ಭಾಷೆಯಲ್ಲಿ ಆಯಾ ಭಾಷೆಗಳ ಖ್ಯಾತ ನಟರು ಈ ವಿಡಿಯೋ ಬಿಡುಗಡೆ ಮಾಡಲಿದ್ದಾರೆ.

    ಕಮಲ್​ ಹಾಸನ್ 'ಇಂಡಿಯನ್​ 2'ಗೆ ಘಟಾನುಘಟಿಗಳ ಸಾಥ್​; ನಾಳೆ ಯಾರ್ಯಾರು ಜೊತೆಯಾಗುತ್ತಿದ್ದಾರೆ?

    ನಟ ಕಿಚ್ಚ ಸುದೀಪ್ ಅವರಿಂದ ಕನ್ನಡ, ಸೂಪರ್​ಸ್ಟಾರ್ ರಜಿನಿಕಾಂತ್ ತಮಿಳು, ನಟ ಆಮಿರ್ ಖಾನ್ ಹಿಂದಿ, ನಿರ್ದೇಶಕ ರಾಜಮೌಳಿ ತೆಲುಗು ಮತ್ತು ನಟ ಮೋಹನ್​ ಲಾಲ್​ ಮಲಯಾಳಂ ವಿಡಿಯೋ ಬಿಡುಗಡೆ ಮಾಡಲಿದ್ದಾರೆ.

    ಕಮಲ್​ ಹಾಸನ್ 'ಇಂಡಿಯನ್​ 2'ಗೆ ಘಟಾನುಘಟಿಗಳ ಸಾಥ್​; ನಾಳೆ ಯಾರ್ಯಾರು ಜೊತೆಯಾಗುತ್ತಿದ್ದಾರೆ?

    ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೇಂಟ್​ ಮೂವೀಸ್ ಬ್ಯಾನರ್​ನಡಿ ಇಂಡಿಯನ್-2 ನಿರ್ಮಾಣವಾಗಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭ್ರಷ್ಟಾಚಾರ ಮತ್ತು ಅಪರಾಧ ಚಟುವಟಿಕೆಗಳ ವಿರುದ್ಧ ನಿಲ್ಲುವ ಕಥಾಹಂದರವನ್ನು ಒಳಗೊಂಡಿದೆ.

    ಕಮಲ್​ ಹಾಸನ್ 'ಇಂಡಿಯನ್​ 2'ಗೆ ಘಟಾನುಘಟಿಗಳ ಸಾಥ್​; ನಾಳೆ ಯಾರ್ಯಾರು ಜೊತೆಯಾಗುತ್ತಿದ್ದಾರೆ?

    ಈ ಚಿತ್ರದಲ್ಲಿ ಸಿದ್ಧಾರ್ಥ್, ಕಾಜಲ್ ಅಗರ್​​ವಾಲ್​, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು, ವಿವೇಕ್, ಸಮುದ್ರಖನಿ, ಬಾಬಿ ಸಿಂಹ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್, ಮನೋಬಾಲಾ, ವೆನ್ನೆಲ ಕಿಶೋರ್, ದೀಪಾ ಶಂಕರ್ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ, ರವಿವರ್ಮನ್ ಮತ್ತು ರತ್ನವೇಲು ಅವರ ಸಿನಿಮಾಟೋಗ್ರಫಿ ಮತ್ತು ಎ. ಶ್ರೀಕರ್ ಪ್ರಸಾದ್ ಅವರ ಎಡಿಟಿಂಗ್ ಇರಲಿದೆ.

    ಬಾಲಕನ ಹುಟ್ಟುಹಬ್ಬದ ಮುನ್ನಾದಿನವೇ ಸಂಸಾರ ಸರ್ವನಾಶ; ಸಮಾಧಿ ಮೇಲೆ ಬರ್ತ್​ಡೇ ಗಿಫ್ಟ್​​ಗಳನ್ನಿಟ್ಟ ಅಜ್ಜ-ಅಜ್ಜಿ!

    ನಿಮ್ಮನ್ನು ಯಾರಾದರೂ ವಾಟ್ಸ್​ಆ್ಯಪ್​ನಲ್ಲಿ ಬ್ಲಾಕ್ ಮಾಡಿದ್ದರೆ ತಿಳಿದುಕೊಳ್ಳುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts