More

    ನಿಮ್ಮನ್ನು ಯಾರಾದರೂ ವಾಟ್ಸ್​ಆ್ಯಪ್​ನಲ್ಲಿ ಬ್ಲಾಕ್ ಮಾಡಿದ್ದರೆ ತಿಳಿದುಕೊಳ್ಳುವುದು ಹೇಗೆ?

    ಬೆಂಗಳೂರು: ಸೋಷಿಯಲ್ ಮೀಡಿಯಾ ಹಾಗೂ ಮೆಸೇಜಿಂಗ್ ಆ್ಯಪ್​ಗಳ ಮೂಲಕ ಪರಿಚಯವಾಗುವುದು, ಪರಿಚಯ ಸ್ನೇಹವಾಗುವುದು ಹಾಗೂ ಕೆಲವೊಮ್ಮೆ ಸ್ನೇಹ ಪ್ರೀತಿ ಕೂಡ ಆಗಿ ಪರಿವರ್ತನೆ ಆಗುವುದು ಎಷ್ಟು ಸಹಜವೋ ಹಾಗೇ ಬ್ಲಾಕ್​ಗೆ ಒಳಗಾಗುವುದು ಕೂಡ ಅಷ್ಟೇ ಸಹಜ.

    ಮೆಸೇಜಿಂಗ್ ಆ್ಯಪ್​ಗಳ ಪೈಕಿ ಅತ್ಯಂತ ಹೆಚ್ಚು ಜನ ಬಳಕೆ ಮಾಡುತ್ತಿರುವುದೆಂದರೆ ಫೇಸ್​ಬುಕ್​ನ ಮಾತೃಸಂಸ್ಥೆ ಮೆಟಾ ಮಾಲೀಕತ್ವದ ವಾಟ್ಸ್​ಆ್ಯಪ್​. ಸ್ಮಾರ್ಟ್​ಫೋನ್ ಹೊಂದಿರುವ ಬಹುತೇಕ ಎಲ್ಲರೂ ವಾಟ್ಸ್​ಆ್ಯಪ್ ಅಕೌಂಟ್ ಹೊಂದಿರುತ್ತಾರೆ ಎಂದರೂ ಅತಿಶಯೋಕ್ತಿ ಅನಿಸದು. ಏಕೆಂದರೆ ಅಷ್ಟರಮಟ್ಟಿಗೆ ವಾಟ್ಸ್​ಆ್ಯಪ್ ಜನಪ್ರಿಯತೆ ಹೊಂದಿದೆ.

    ಆದರೆ ಕೆಲವೊಮ್ಮೆ ವಾಟ್ಸ್​ಆ್ಯಪ್​ನಲ್ಲಿ ಬ್ಲಾಕ್​ಗೆ ಒಳಗಾಗುವುದು ಕೂಡ ಇರುತ್ತದೆ. ಅಷ್ಟಕ್ಕೂ ಯಾರೋ ಬ್ಲಾಕ್​ ಮಾಡಿದಾಗ ಬ್ಲಾಕ್​ಗೆ ಒಳಗಾದವರಿಗೆ ಯಾವುದೇ ನೋಟಿಫಿಕೇಷನ್ ಬರುವುದಿಲ್ಲ ಇಲ್ಲವೇ ಬ್ಲಾಕ್​ಗೆ ಒಳಗಾಗಿದ್ದನ್ನು ತಿಳಿದುಕೊಳ್ಳುವ ಖಚಿತ ಮಾರ್ಗವೂ ಇಲ್ಲ. ಅದಾಗ್ಯೂ ಬ್ಲಾಕ್​ಗೆ ಒಳಗಾಗಿದ್ದನ್ನು ಕೆಲವೊಂದು ಸಂಗತಿಗಳಿಂದ ತಿಳಿದುಕೊಳ್ಳಬಹುದಾಗಿದೆ.

    ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: ಇನ್ನೂ 15 ದಿನ ನಿತ್ಯ 2,600 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಆದೇಶ!

    ಯಾರಿಂದಲಾದರೂ ಬ್ಲಾಕ್​ಗೆ ಒಳಗಾಗಿದ್ದಲ್ಲಿ ಅಂಥವರ ಲಾಸ್ಟ್ ಸೀನ್ ಹಾಗೂ ಆನ್​ಲೈನ್ ಮಾಹಿತಿ ಗೋಚರಿಸುವುದಿಲ್ಲ. ಅಂಥವರ ಡಿಪಿ ಸೇರಿದಂತೆ ಪ್ರೊಫೈಲ್ ಅಪ್​ಡೇಟ್ಸ್​ ಗೊತ್ತಾಗುವುದಿಲ್ಲ. ಅಂಥವರಿಗೆ ಯಾವುದೇ ಮೆಸೇಜ್ ಕಳಿಸಿದಾಗ ಸಿಂಗಲ್ ಟಿಕ್ ಬರುತ್ತವೆ ವಿನಃ ಡಬಲ್ ಕ್ಲಿಕ್ ಕಾಣಿಸುವುದಿಲ್ಲ. ಅಂಥವರ ಸಂಖ್ಯೆಗೆ ಕರೆ ಮಾಡಿದರೂ ಕನೆಕ್ಟ್ ಆಗುವುದಿಲ್ಲ.

    ಇದನ್ನೂ ಓದಿ: ಇನ್ನೊಂದೆರಡು ವರ್ಷ ಅತಿಯಾಗಿ ಕೆಲಸ ಮಾಡಬೇಡಿ: ಆರೋಗ್ಯ ಸಚಿವರ ಸಲಹೆ!

    ಮೊದಲೇ ಹೇಳಿದ ಹಾಗೆ ಬ್ಲಾಕ್​ ಆಗಿದ್ದನ್ನು ತಿಳಿಯಲು ಖಚಿತ ಮಾರ್ಗವಿಲ್ಲ. ಮೇಲೆ ಹೇಳಿದ ಸಂಗತಿ ಬೇರೆ ಕಾರಣಗಳಿಗೂ ಆಗಿರುವ ಸಾಧ್ಯತೆ ಇರುತ್ತದೆ. ಅವರು ಆನ್​ಲೈನ್ ಮತ್ತು ಲಾಸ್ಟ್​ ಸೀನ್ ಅಪ್​ಡೇಟ್ ಹೈಡ್ ಮಾಡಿದ್ದಲ್ಲಿ ಅದು ಗೊತ್ತಾಗುವುದಿಲ್ಲ. ನೆಟ್​ ವರ್ಕ್ ಸಮಸ್ಯೆ ಇದ್ದಾಗ ಕಳಿಸಿದ್ದ ಮೆಸೇಜ್ ಸಿಂಗಲ್ ಟಿಕ್ ತೋರಿಸುತ್ತಿರುತ್ತದೆ. ಅದಾಗ್ಯೂ ಒಂದೇ ಕಾಂಟ್ಯಾಕ್ಟ್​ನಲ್ಲಿ ಈ ಎಲ್ಲ ಸಂಗತಿ ಒಟ್ಟಿಗೆ ಅಥವಾ ಇದರಲ್ಲಿನ ಬಹುತೇಕವು ಒಟ್ಟಿಗೆ ಸಂಭವಿಸಿದಲ್ಲಿ ಅಂಥ ಕಾಂಟ್ಯಾಕ್ಟ್​ನಿಂದ ಬ್ಲಾಕ್​ಗೆ ಒಳಗಾಗಿದ್ದು ಖಚಿತ ಎಂದೆನ್ನಬಹುದು.

    ಸಾಫ್ಟ್​ವೇರ್​ ಉದ್ಯೋಗ: ಫ್ರೆಷರ್ಸ್​ಗೆ ಭಾರತದಲ್ಲೇ ಕಡಿಮೆ ಸಂಬಳ, ಜಾಸ್ತಿ ಕೆಲಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts