More

    ಪಕ್ಷದ ರಾಜ್ಯಾಧ್ಯಕ್ಷರೇ ಟ್ರಕ್​ ಕ್ಲೀನರ್ ಥರ ನಟಿಸಿ ಭ್ರಷ್ಟಾಚಾರ ಬಯಲಿಗೆಳೆದ್ರು!

    ಪಣಜಿ: ಪೊಲೀಸರು ಕೆಲವೊಮ್ಮೆ ಮಾರುವೇಷದಲ್ಲಿ ಹೋಗಿ ಕಳ್ಳತನವನ್ನು ಪತ್ತೆ ಹಚ್ಚುವುದನ್ನು ಕೇಳಿರುತ್ತೇವೆ. ಆದರೆ ಇಲ್ಲೊಂದು ಕಡೆ ಪಕ್ಷವೊಂದರ ರಾಜ್ಯಾಧ್ಯಕ್ಷರೇ ಟ್ರಕ್​ ಕ್ಲೀನರ್ ಥರ ಲಾರಿಯಲ್ಲಿ ಸಂಚರಿಸಿ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ.

    ಕರ್ನಾಟಕದ ಕಾರವಾರದಿಂದ ಗೋವಾದ ಗಡಿಯವರೆಗೂ ಟ್ರಕ್ ಕ್ಲೀನರ್ ಥರ ಲಾರಿಯಲ್ಲಿ ಸಂಚರಿಸಿದ ಇವರು, ಚೆಕ್​ಪೋಸ್ಟ್​ಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ. ಅಂದಹಾಗೆ ಇಂಥದ್ದೊಂದು ಕೆಲಸವನ್ನು ಮಾಡಿರುವುದು ಗೋವಾದ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅಮಿತ್ ಪಾಲ್ಯೇಕರ್​.

    ಬುಧವಾರ ರಾತ್ರಿ ನಾನು ಕಾರವಾರದಿಂದ ಟ್ರಕ್​ನಲ್ಲಿ ಕ್ರೀನರ್ ಥರ ಸಂಚರಿಸಿದ್ದು, ಗೋವಾ ಕರ್ನಾಟಕ ಗಡಿಯ ಪೊಲ್ಲೆಂ ಚೆಕ್​ಪೋಸ್ಟ್​ನಲ್ಲಿ ಲಂಚ ಪಡೆಯುತ್ತಿರುವುದನ್ನು ನೋಡಿದೆ. ರಾಜ್ಯಕ್ಕೆ ಪ್ರವೇಶಿಸುವ ಅಂತಾರಾಜ್ಯ ಸರಕು ಸಾಗಣಿಕಾ ವಾಹನಗಳಿಂದ 20ರಿಂದ 2 ಸಾವಿರ ರೂ. ವರೆಗೂ ಲಂಚ ವಸೂಲಿ ಮಾಡಲಾಗುತ್ತಿದೆ ಎಂದು ಅವರು ಇಂದು ಸುದ್ದಿಗೋಷ್ಠಿ ಮಾಡಿ ಹೇಳಿದ್ದಾರೆ.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ನಾನು ಕ್ಲೀನರ್ ಥರ ಸಂಚರಿಸಿದಾಗ ಅಬಕಾರಿ, ಪೊಲೀಸ್ ಮತ್ತು ಆರ್​ಟಿಒ ಅಧಿಕಾರಿಗಳು ಗೋವಾಗೆ ಪ್ರವೇಶಿಸುವ ಸರಕು ಸಾಗಣಿಕೆ ವಾಹನಗಳಿಂದ ಹೇಗೆಲ್ಲ ಲಂಚ ಸ್ವೀಕರಿಸುತ್ತಾರೆ ಎಂಬುದನ್ನು ಗಮನಿಸಿದೆ. ಸರಕು ಹಾಗೂ ತೂಕಕ್ಕೆ ತಕ್ಕಂತೆ ಅಧಿಕಾರಿಗಳು 20ರಿಂದ 2 ಸಾವಿರ ರೂ. ವರೆಗೂ ಲಂಚ ವಸೂಲಿ ಮಾಡುತ್ತಿದ್ದಾರೆ. ಒಂದು ವೇಳೆ ಲಂಚ ನೀಡದಿದ್ದರೆ ತಪಾಸಣೆ ನೆಪದಲ್ಲಿ ಟ್ರಕ್ ಚಾಲಕರಿಗೆ ಕಿರುಕುಳ ನೀಡಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

    ಲಂಚ ನೀಡಿದರೆ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿಲ್ಲ. ಇದರಿಂದ ಭದ್ರತೆಗೂ ಧಕ್ಕೆ ಬರುವ ಸಾಧ್ಯತೆ ಇದೆ ಎಂದಿದ್ದಾರೆ. ಅದರಲ್ಲೂ ಕೆಲವು ಅಧಿಕಾರಿಗಳು ನಾವು ಪ್ರಶ್ನೆ ಮಾಡತೊಡಗಿದಾಗ ಹತ್ತಿರದ ಕಾಡಿನ ಪ್ರದೇಶಕ್ಕೆ ಓಡಿಹೋಗಿದ್ದಾರೆ, ಅವರು ಹಾಗೇಕೆ ಮಾಡಿದರು ಎಂಬುದಾಗಿಯೂ ಅಮಿತ್ ಪ್ರಶ್ನೆ ಮಾಡಿದ್ದಾರೆ.

    ಇದನ್ನೂ ಓದಿ: ಯುವಕರೇಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಅಚ್ಚರಿಯೇ?: 70 ಗಂಟೆ ಕೆಲಸ.. ಮೂರ್ತಿ ವರ್ಸಸ್ ಮೂರ್ತಿ…

    ಈ ಲಂಚದ ಹಣವೆಲ್ಲ ಯಾರ ಕಿಸೆಗೆ ಹೋಗುತ್ತಿವೆ, ಒಂದುವೇಳೆ ಹಿರಿಯ ಅಧಿಕಾರಿಗಳಿಗೆ ಅದು ತಲುಪುತ್ತಿಲ್ಲ ಎಂದಾದರೆ ಯಾಕೆ ತಪಾಸಣೆ ನಡೆಯುತ್ತಿಲ್ಲ. ನಾವು ಪರಿಶೀಲನೆ ಮಾಡುತ್ತಿದ್ದಾಗ ಅಧಿಕಾರಿಯೊಬ್ಬರು ಮೇಡಮ್​ ಒಬ್ಬರಿಗೆ ಕರೆ ಮಾಡಿ, ನಂಬರ್ ಡಿಲೀಟ್ ಮಾಡಿದರು. ಯಾರು ಆ ಮೇಡಂ? ಎಂದು ಹಲವು ಸಂಗತಿಗಳನ್ನು ಅಮಿತ್ ಬಯಲು ಮಾಡಿದ್ದಾರೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಸಾರಿಗೆ ಸಚಿವ ಮೌವಿನ್ ಗೊಡಿನ್ಹೊ ಅವರಿಗೆ ತಿಳಿಯದೇ ಇವೆಲ್ಲ ನಡೆಯಲು ಸಾಧ್ಯವಿಲ್ಲ ಎಂದೂ ಅವರು ಆರೋಪಿಸಿದ್ದಾರೆ.

    ಸಿಎಂ ಸಿದ್ದರಾಮಯ್ಯ ಹೇಳಿದ್ದು ಸುಳ್ಳು!; ಆ ಮಗುವಿನ ವಿಚಾರದಲ್ಲಿ ಮಧ್ಯಪ್ರವೇಶಿಸಿದ ರಾಜ್ಯ ಬಿಜೆಪಿ ಹೀಗಂದಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts