More

    ಅಂದು 100 ರೂಪಾಯಿ ಹಿಡಿದು ಮನೆ ಬಿಟ್ಟು ಹೋದಾತ ಇಂದು 200 ಕೋಟಿ ರೂ. ಆಸ್ತಿಯ ಒಡೆಯ!

    ಕೋಲ್ಕತ: ಮನುಷ್ಯನಿಗೆ ಜೀವನದಲ್ಲಿ ಏನನ್ನಾದರೂ ಸಾಧಿಸುವ ಹಂಬಲವಿದ್ದರೆ ಶಿಕ್ಷಣ ಕೊರತೆ ಮತ್ತು ಬಡತನವನ್ನು ಮೆಟ್ಟಿನಿಂತು ಸಾಧನೆಯ ಶಿಖರವನ್ನು ಏರಬಹುದು ಮತ್ತು ವಿಜೇತರಾಗಬಹುದು. ಶ್ರೇಷ್ಠ ಜೀವನ ನಡೆಸಬೇಕೆಂಬ ಹಂಬಲ ಮತ್ತು ಪರಿಶ್ರಮವಿದ್ದರೆ ಯಾವುದೇ ಸಮಸ್ಯೆಗಳು ನಮ್ಮನ್ನು ತಡೆಯಲಾರವು. ಸಂಕಲ್ಪ ಬಲವಾಗಿದ್ದರೆ ಎಂತಹ ಅಡೆತಡೆಗಳು ಎದುರಾದರೂ ಜಯಶಾಲಿಯಾಗಿ ನಿಲ್ಲಬಹುದು. ಎಷ್ಟೋ ಮಂದಿ ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದಿದ್ದಾರೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಪಶ್ಚಿಮ ಬಂಗಾಳದ ಮಲಯ್ ದೇಬನಾಥ್. ಕೇವಲ 100 ರೂಪಾಯಿಯೊಂದಿಗೆ ಗ್ರಾಮವನ್ನು ತೊರೆದವರು ಇಂದು 200 ಕೋಟಿ ರೂಪಾಯಿಯ ಒಡೆಯರಾಗಿದ್ದಾರೆ. ನಾವೀಗ ದೇಬನಾಥ್​ ಅವರ ಯಶೋಗಾಥೆ ಏನೆಂದು ನೋಡೋಣ.

    ಮಲಯ್ ದೇಬನಾಥ್​ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಆರು ವರ್ಷ ವಯಸ್ಸಾಗಿದ್ದಾಗ ಅವರ ಕುಟುಂಬದ ವ್ಯವಹಾರವೂ ಬೆಂಕಿ ಅವಘಡದಿಂದ ಸರ್ವನಾಶವಾಯಿತು. ಆದರೆ, ಅವರ ವ್ಯವಹಾರಕ್ಕೆ ಬೆಂಕಿ ಬೀಳಲು ಒಂದು ಕಾರಣವಿದೆ. ರಾಜಕೀಯ ದ್ವೇಷದಿಂದ ಇದು ನಡೆಯಿತು ಎನ್ನಲಾಗಿದೆ. ಈ ಘಟನೆಯ ಬಳಿಕ ದೇಬನಾಥ್​ ಕುಟುಂಬ ಬಹಳ ಸಂಕಷ್ಟವನ್ನು ಎದುರಿಸಬೇಕಾಯಿತು. ಆದರೆ, ಇದೇ ಕೊರಗಿನಲ್ಲಿ ಕೂರದೇ ದೇಬನಾಥ್​ ಕುಟುಂಬ ಮತ್ತೆ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿದರು. ಆದರೆ, ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿತು.

    ಆರ್ಥಿಕ ಸಂಕಷ್ಟದಿಂದ ಹೊರಬರಲು ದೇಬನಾಥ್ ಅವರು ಮೊದಲು ತಮ್ಮ ಹಳ್ಳಿಯಲ್ಲಿ ಒಂದು ಟೀ ಸ್ಟಾಲ್ ಪ್ರಾರಂಭಿಸಿ, ಕುಟುಂಬಕ್ಕೆ ಆಸರೆಯಾದರು. ದ್ವಿತೀಯ ಪಿಯುಸಿ ಮುಗಿಯುವವರೆಗೂ ಟೀ ವ್ಯಾಪಾರ ಮುಂದುವರಿಸಿದ್ದರು. ಇಲ್ಲಿಯೇ ಉಳಿದುಕೊಂಡರೆ ನಮ್ಮ ಜೀವನದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಭಾವಿಸಿದ ದೇಬನಾಥ್, ದ್ವಿತೀಯ ಪಿಯುಸಿ ಮುಗಿದ ಬೆನ್ನಲ್ಲೇ ಶಾಲೆ ಬಿಟ್ಟು ತಾಯಿಯಿಂದ 100 ರೂಪಾಯಿ ಪಡೆದು ದೆಹಲಿಗೆ ತೆರಳಿದರು. ಅಲ್ಲಿ ಕೇಟರಿಂಗ್ ಕೆಲಸ ಮಾಡಿ ತನ್ನ ಖರ್ಚಿಗೆ ತಕ್ಕಂತೆ ಸಂಪಾದಿಸಿದರು. ಹೋಟೆಲ್‌ನಲ್ಲಿ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಮತ್ತು ಟೇಬಲ್‌ಗಳನ್ನು ಒರೆಸುವುದು ಮುಂತಾದ ಎಲ್ಲ ಕೆಲಸಗಳನ್ನೂ ದೇಬನಾಥ್​ ಮಾಡಿದರು. ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿ ಮೆಚ್ಚುಗೆ ಗಳಿಸಿದರು. ಆ ಸಮಯದಲ್ಲಿ ದೇಬನಾಥ್​ಗೆ 500 ರೂ. ಸಂಬಳ ನೀಡಲಾಗುತ್ತಿತ್ತು. ದೇಬನಾಥ್​ ಕೆಲಸವನ್ನು ಮೆಚ್ಚಿ ಮಾಲೀಕರು 3,000 ರೂ.ಗೆ ಹೆಚ್ಚಿಸಿದರು. ದಿನಕ್ಕೆ 18 ಗಂಟೆ ದುಡಿದು, ಎಲ್ಲ ಹಣವನ್ನು ಕುಟುಂಬಕ್ಕೆ ಕಳುಹಿಸುತ್ತಿದ್ದರು.

    ಕಷ್ಟಪಟ್ಟು ದುಡಿದು ಇವೆಂಟ್ ಮ್ಯಾನೇಜ್​ಮೆಂಟ್ ಕಂಪನಿಯ ಸೂಪರ್​ವೈಸರ್​ ಹುದ್ದೆಗೆ ಏರಿದರು. ಅದೇ ಸಮಯದಲ್ಲಿ ಹೋಟೆಲ್ ಮ್ಯಾನೇಜ್​ಮೆಂಟ್ ಕೋರ್ಸ್ ಮಾಡಲು ಯೋಚಿಸಿದರು. ಕೆಲಸ ಮಾಡುತ್ತಲೇ ಹೋಟೆಲ್ ಮ್ಯಾನೇಜ್​ಮೆಂಟ್​ನಲ್ಲಿ ಇಂಡಿಯನ್ ಟೂರಿಸಂ ಡೆವಲಪ್ಮೆಂಟ್ ಕಾರ್ಪೊರೇಷನ್ ಕೋರ್ಸ್ ಮುಗಿಸಿದರು. ಕೆಲಸ ಮಾಡುವಾಗಲೇ ಎಲ್ಲರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದ್ದರು. ಇದಾದ ಬಳಿಕ ತಮ್ಮದೇ ಆದ ಅಡುಗೆ ಕಂಪನಿಯನ್ನು ಸ್ಥಾಪಿಸಿದರು. ದೇಬನಾಥ್ ಅವರು ಕ್ಯಾಟರರ್ಸ್ ಮತ್ತು ಡೆಕೊರೇಟರ್ಸ್ ಎಂಬ ಕಂಪನಿಯನ್ನು ಸ್ಥಾಪಿಸಿದರು. ಸಂಸ್ಥೆಯು ಕಠಿಣ ಪರಿಶ್ರಮದಿಂದ ಉತ್ತಮ ಯಶಸ್ಸನ್ನು ಸಾಧಿಸಿದೆ. ಅಲ್ಲದೆ, ಉತ್ತಮ ಲಾಭವನ್ನೂ ತಂದುಕೊಟ್ಟಿದೆ.

    ಮಲಯ್ ದೇಬನಾಥ್ ಒಡೆತನದ ಕಂಪನಿಯು ದೆಹಲಿ, ಪುಣೆ, ಜೈಪುರ, ಅಜ್ಮೀರ್ ಮತ್ತು ಗ್ವಾಲಿಯರ್ ಸೇರಿದಂತೆ 35 ಕ್ಕೂ ಹೆಚ್ಚು ಸೇನಾ ಮೆಸ್‌ಗಳನ್ನು ನಿರ್ವಹಿಸುತ್ತದೆ. 100 ರೂಪಾಯಿಯೊಂದಿಗೆ ಮನೆಯಿಂದ ಹೊರಬಂದ ಅವರು ಇಂದು ಉತ್ತರ ಬಂಗಾಳದಲ್ಲಿ ಚಹಾ ತೋಟಗಳು ಸೇರಿದಂತೆ ಸುಮಾರು 200 ಕೋಟಿ ಆಸ್ತಿ ಹೊಂದಿದ್ದಾರೆ. ತಾವು ಶ್ರೀಮಂತರಾಗಲು ಎಲ್ಲ ಕಷ್ಟಗಳನ್ನು ದೇಬನಾಥ್​ ಮೆಟ್ಟಿ ನಿಂತರು. ನಿರಂತರವಾಗಿ ಕೆಲಸ ಮಾಡಿದರು ಮತ್ತು ಜೀವನದಲ್ಲಿ ಗೆದ್ದರು. ಮಲಯ್ ದೇಬನಾಥ್ ಅವರ ಜೀವನದ ಪಯಣ ಇಂದು ಯುವಜನತೆಗೆ ಸ್ಫೂರ್ತಿದಾಯಕವಾಗಿದೆ. (ಏಜೆನ್ಸೀಸ್​)

    ಒಂದೇ ಬೈಕ್​ನಲ್ಲಿ ಏಳು ಮಂದಿ! ಭಾವುಕರಾಗಿ ಟ್ವೀಟ್​ ಮಾಡಿದ ಹುಬ್ಬಳ್ಳಿ ಹುಲಿ ವಿಶ್ವನಾಥ್​ ಸಜ್ಜನರ್

    ನನ್ನ ಕೂದಲಿನ ಬಗ್ಗೆ ನಿಮಗೇಕೆ ಚಿಂತೆ! ಟ್ರೋಲ್​ ಮಾಡುವವರಿಗೆ ಖಡಕ್​ ತಿರುಗೇಟು ಕೊಟ್ಟ ಪ್ರಾಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts