More

    ನನ್ನ ಕೂದಲಿನ ಬಗ್ಗೆ ನಿಮಗೇಕೆ ಚಿಂತೆ! ಟ್ರೋಲ್​ ಮಾಡುವವರಿಗೆ ಖಡಕ್​ ತಿರುಗೇಟು ಕೊಟ್ಟ ಪ್ರಾಚಿ

    ಲಖನೌ: ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯದಷ್ಟೇ ಕೆಟ್ಟದ್ದೂ ಇದೆ. ಇದು ಕೆಲವರಿಗೆ ಉದ್ಯೋಗ ಮತ್ತು ಮನರಂಜನೆ ನೀಡುತ್ತದೆ. ಅದೇ ಸಮಯದಲ್ಲಿ ಇದು ಕೆಲವರಿಗೆ ನೋವುಂಟು ಮಾಡುತ್ತದೆ. ಅದರಲ್ಲೂ ಮಹಿಳೆಯರ ಮೇಲಿನ ಅಸಭ್ಯ ಪೋಸ್ಟ್‌ಗಳು ನಿತ್ಯವೂ ಹರಿದಾಡುತ್ತದೆ. ನಿಂದನೆ ಹಾಗೂ ಟ್ರೋಲ್​ಗಳಂತೂ ಸಹಜವಾಗಿದೆ. ಮಹಿಳೆಯರ ಸೌಂದರ್ಯದ ಮೇಲಂತೂ ಟ್ರೋಲಿಂಗ್ ನಡೆಯುತ್ತಲೇ ಇರುತ್ತವೆ.

    ಇತ್ತೀಚೆಗೆ ಉತ್ತರ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಹತ್ತನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಆದರೆ, ಕೆಲವರು ಆಕೆಯ ಸಾಧನೆಯನ್ನು ಪ್ರಶಂಸಿಸದೇ ಪುರುಷರಂತೆ ಮುಖದಲ್ಲಿ ಕೂದಲು ಮತ್ತು ಮೀಸೆ ಇರುವ ಒಂದೇ ಕಾರಣಕ್ಕೆ ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ. ಇದೀಗ ತನ್ನ ವಿರುದ್ಧದ ಟ್ರೋಲ್​ಗಳಿಗೆ ವಿದ್ಯಾರ್ಥಿನಿ ಸರಿಯಾಗಿ ತಿರುಗೇಟು ನೀಡಿದ್ದಾರೆ.

    ಇತ್ತೀಚೆಗೆ ಬಿಡುಗಡೆಯಾದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತರ ಪ್ರದೇಶದ 10ನೇ ತರಗತಿ ವಿದ್ಯಾರ್ಥಿನಿ ಪ್ರಾಚಿ ನಿಗಮ್ ಉತ್ತಮ ಸಾಧನೆ ಮಾಡಿದ್ದಾರೆ. ಸೀತಾಪುರ ಮೂಲದ ಪ್ರಾಚಿ ನಿಗಮ್ 600 ಅಂಕಗಳಿಗೆ 591 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್​ ಆಗಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಮುಖದಲ್ಲಿ ಬೇಡದ ಕೂದಲು ಇದ್ದಿದ್ದರಿಂದ ಆಕೆಯ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೆಲವರು ವಿಕೃತಿ ಮೆರೆದಿದ್ದಾರೆ. ಅದೇ ಸಮಯದಲ್ಲಿ, ಪ್ರಾಚಿಗೆ ಅಪಾರ ಬೆಂಬಲವೂ ದೊರೆತಿದೆ. ಇದೀಗ ಪ್ರಾಚಿ ಟ್ರೋಲ್​ಗಳಿಗೆ ಖಡಕ್​ ಆಗಿ ಉತ್ತರ ನೀಡಿದ್ದಾರೆ.

    ನನ್ನ ಕುಟುಂಬ, ಸ್ನೇಹಿತರು ಹಾಗೂ ಶಿಕ್ಷಕರೇ ನನ್ನ ಮುಖದ ಬಗ್ಗೆ ಕಾಮೆಂಟ್ ಮಾಡಲಿಲ್ಲ. ಆದರೆ, ರಾಜ್ಯಕ್ಕೆ ಟಾಪರ್​ ಆದ ಬಳಿಕ ಕೆಲವರು ನನ್ನ ಫೋಟೋ ನೋಡಿ ಟ್ರೋಲ್ ಮಾಡುತ್ತಿದ್ದಾರೆ. ಅದೆಲ್ಲದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಕೂದಲಿನ ಬಗ್ಗೆ ನಿಮಗೇಕೆ ಚಿಂತೆ. ನನ್ನ ಕೂದಲಿನ ಬಗ್ಗೆ ನಾನು ಯೋಚನೆ ಮಾಡುವುದಿಲ್ಲ. ನನಗೆ ಅಂಕಗಳೇ ಮುಖ್ಯ. ಇಂಜಿನಿಯರ್ ಆಗಬೇಕೆಂಬುದು ನನ್ನ ಗುರಿ ಎಂದಿದ್ದಾರೆ.

    ಇನ್ನು ಪ್ರಾಚಿ ನಿಗಮ್ ಅವರನ್ನು ಸಾಕಷ್ಟು ಮಂದಿ ಬೆಂಬಲಿಸಿದ್ದು, ಎಲ್ಲರು ಶುಭ ಹಾರೈಸುತ್ತಿದ್ದಾರೆ. ತನ್ನ ಬೆಂಬಲಕ್ಕೆ ನಿಂತವರಿಗೆ ಪ್ರಾಚಿ ಕೂಡ ಧನ್ಯವಾದಗಳನ್ನು ತಿಳಿಸಿದ್ದಾರೆ. (ಏಜೆನ್ಸೀಸ್​)

    ರಾಜ್ಯಕ್ಕೆ ಟಾಪರ್​ ಆದ್ರೂ ಈ ಹುಡುಗಿಯ ಸಂಭ್ರಮ ಕಿತ್ತುಕೊಂಡ ಟ್ರೋಲ್ಸ್​! ಕೊನೆಗೆ ಗೆದ್ದಿದ್ದು ಮಾತ್ರ ಒಳ್ಳೆಯತನ

    ಸಾಂಬಾರ್​ನಲ್ಲಿ ಪತ್ತೆಯಾಯ್ತು ಹಾವು! ಸತ್ತಿದೆ ಅಂದುಕೊಂಡವರಿಗೆ ಕಾದಿತ್ತು ಶಾಕ್​, ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts