ಐಶ್ವರ್ಯ ರೈ ನೋಟವನ್ನೇ ಹೋಲುವ ಜೇನುಗಣ್ಣಿನ ಸುಂದರಿ! ಕಣ್ಮನ ಸೆಳೆದ ವೈರಲ್ ಬೆಡಗಿಯ ಹೊಸ ಫೋಟೋಸ್​ | Mona Lisa

ವಿಜಯವಾಣಿ - 2025-02-01T194335.854
Published on

Mona Lisa: ಕೆಲವು ವಾರಗಳ ಹಿಂದೆಯಷ್ಟೇ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ತನ್ನ ಸುಂದರ ಕಣ್ಣುಗಳಿಂದಲೇ ಜನರನ್ನು ಆಕರ್ಷಿಸಿದ ರುದ್ರಾಕ್ಷಿ ಮಾರುವ ಮೊನಾಲಿಸಾ, ಇದೀಗ ಬಾಲಿವುಡ್​ ಅಂಗಳಕ್ಕೂ ಕಾಲಿಟ್ಟ ಸಂಗತಿ ಅನೇಕರನ್ನು ಅಚ್ಚರಿಗೆ ದೂಡಿದೆ ಎಂಬುದರಲ್ಲಿ ಅನುಮಾನವೇ ಬೇಡ. ಮಹಾಕುಂಭಮೇಳದಲ್ಲಿ ಭಾಗಿಯಾದ ಐಐಟಿ ಬಾಬಾ, ಮಮತಾ ಕುಲಕರ್ಣಿ ಸೇರಿದಂತೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದಾರೆ. ಅಂತಹವರ ಪೈಕಿ ಸದ್ಯ ಮೊನಾಲಿಸಾ ಮುಂಚೂಣಿಯಲ್ಲಿದ್ದಾರೆ.

ಜೇನುಗಣ್ಣಿನ ಸುಂದರಿ

ಮಹಾಕುಂಭ ಮೇಳಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಭಕ್ತಾಧಿಗಳಿಗೆ ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿದ್ದ ಮೊನಾಲಿಸಾ, ನೆಟ್ಟಿಗರ ಕಣ್ಣಿಗೆ ಜೇನುಗಣ್ಣಿನ ಸುಂದರಿಯಾಗಿ ಕಂಡಿದ್ದೇ ತಡ, ಒಂದು ರಾತ್ರಿ ಕಳೆಯುವುದರೊಳಗೆ ಆಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮಿಂಚಿದಳು. ಜೇನುಗಣ್ಣಿನ ಸುಂದರಿಯನ್ನು ವಿಡಿಯೋದಲ್ಲಿ ನೋಡಿದ ನೆಟ್ಟಿಗರು ಆಕೆಯನ್ನು ನೇರವಾಗಿಯೇ ನೋಡಬೇಕು ಎಂಬ ತವಕದಲ್ಲಿ ನೇರವಾಗಿ ಕುಂಭಮೇಳಕ್ಕೆ ಭೇಟಿ ನೀಡಿದರು. ಈ ವೇಳೆ ತಮಗೊಂದು ಫೋಟೋ ನೀಡುವಂತೆ ಆಕೆ ಬೆನ್ನತ್ತಿದ ಕೆಲವರು, ಮೊನಾಲಿಸಾಗೆ ಮಾನಸಿಕವಾಗಿ ಹಿಂಸೆ ನೀಡಿದರು. ಇದು ಆಕೆಯ ವ್ಯಾಪಾರಕ್ಕೂ ತೊಂದರೆ ಉಂಟುಮಾಡಿತು.

ಐಶ್ವರ್ಯ ರೈಗೆ ಹೋಲಿಕೆ

ಸದ್ಯ ಇದನ್ನೆಲ್ಲ ಮೀರಿ ಬಾಲಿವುಡ್​ನಲ್ಲಿ ಹೊಸ ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿರುವ ಮೊನಾಲಿಸಾ, ತನ್ನ ನೈಜ ಸೌಂದರ್ಯದಿಂದಲೇ ಇಂದಿಗೂ ಅನೇಕರನ್ನು ಸೆಳೆಯುತ್ತಿದ್ದಾರೆ. ಬಾಲಿವುಡ್​ ಬ್ಯೂಟಿ, ಹಿರಿಯ ನಟಿ ಐಶ್ವರ್ಯ ರೈ ಅವರಂತೆಯೇ ಮೊನಾಲಿಸಾ ಕಣ್ಣುಗಳಿವೆ ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ. ಇದೆಲ್ಲದರ ಬೆನ್ನಲ್ಲೇ ಜೇನುಗಣ್ಣಿನ ಸುಂದರಿಯ ಇತ್ತೀಚಿನ ಫೋಟೋಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ನೋಡುಗರನ್ನು ಒಂದು ನಿಮಿಷ ಭಾರೀ ಅಚ್ಚರಿಗೆ ದೂಡಿದೆ.

ಫೋಟೋ ಅಸಲಿಯೇ?​

ಮಹಾಕುಂಭ ಮೇಳದಲ್ಲಿ ಕಾಣಿಸಿದ್ದ ಮೊನಾಲಿಸಾ ಈಗ ಮಾಯ. ಅದಕ್ಕೆ ಇತ್ತೀಚಿನ ಫೋಟೋಗಳೇ ಸಾಕ್ಷಿ. ಈ ಫೋಟೋಗಳಲ್ಲಿ ಮೊನಾಲಿಸಾ ಥೇಟ್​ ಐಶ್ವರ್ಯ ರೈ ಅವರಂತೆ ಕಾಣಿಸಿದ್ದಾರೆ. ವೈರಲ್​ ಫೋಟೋಗಳನ್ನು ನೋಡಿದ ರೈ ಅಭಿಮಾನಿಗಳು, ಮೊನಾಲಿಸಾ ಲುಕ್​ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಕಪ್ಪು ಉಡುಪನ್ನು ಧರಿಸಿರುವ ಮೊನಾಲಿಸಾ, ಕೂದಲನ್ನು ಹಾರಾಡಿಸಿಕೊಂಡು, ಅದಕ್ಕೆ ಬೌನ್ಸಿ ಲುಕ್ ನೀಡಿರುವುದು ಚಿತ್ರಗಳಲ್ಲಿ ಕಾಣಬಹುದಾಗಿದೆ. ಮೇಕಪ್​ನಲ್ಲಿ ಜೇನುಗಣ್ಣಿನ ಸುಂದರಿ ಮತ್ತಷ್ಟು ಆಕರ್ಷಕವಾಗಿ ಕಾಣಿಸಿದ್ದು ನೆಟ್ಟಿಗರ ಹುಬ್ಬೇರಿಸಿದ್ದೇ ಆದರೂ ಫೋಟೋ ಬಗ್ಗೆ ಅನುಮಾನಗಳು ಮೂಡಿವೆ. ಕೆಲವರು ಇದು ರಿಯಲ್​ ಎಂದರೆ, ಇನ್ನೂ ಕೆಲವರು ಇದು ಫೇಕ್ ಎಂದು ವಾದಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net