'ಮಿಸ್​ ಇಂಡಿಯಾ' ಚಿತ್ರದ ಓಟಿಟಿ ರೈಟ್ಸ್​ ಎಷ್ಟಕ್ಕೆ ಮಾರಾಟವಾಯ್ತು ಹೇಳಿ?

Miss India - Final
Published on

ಕರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆಯೇ, ಚಿತ್ರಪ್ರದರ್ಶನ ಸದ್ಯ ಶುರುವಾಗುವ ಹಾಗೆ ಕಾಣುತ್ತಿಲ್ಲ. ಇದರಿಂದ ಚಿತ್ರಮಂದಿರಗಳಲ್ಲೇ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಬೇಕು ಎಂದು ಕಾಯುತ್ತಿರುವವರೆಲ್ಲಾ ಓವರ್ ದಿ ಟಾಪ್​ (ಓಟಿಟಿ) ಮೊರೆ ಹೋಗುತ್ತಿದ್ದಾರೆ.

ಈಗಾಗಲೇ ಅನುಷ್ಕಾ ಶೆಟ್ಟಿ ಅಭಿನಯದ 'ನಿಶ್ಯಬ್ಧಂ' ಚಿತ್ರವು ಓಟಿಟಿಗೆ ಮಾರಾಟವಾಗಿದೆ ಎಂಬ ಸುದ್ದಿಯೊಂದು ಬಂದಿದೆ. ಇತ್ತೀಚೆಗಷ್ಟೇ ನಾನಿ ಅಭಿನಯದ 'ವಿ' ಎಂಬ ಚಿತ್ರ ಸಹ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸುದ್ದಿ ಬಂದಿತ್ತು. ಇದೀಗ ಕೀರ್ತಿ ಸುರೇಶ್​ ಅಭಿನಯದ 'ಮಿಸ್​ ಇಂಡಿಯಾ' ಸಹ ನೆಟ್​ಫ್ಲಿಕ್ಸ್​ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

'ಮಿಸ್​ ಇಂಡಿಯಾ' ಚಿತ್ರವು ಈ ವರ್ಷದ ಆರಂಭದಲ್ಲೇ ಬಿಡುಗಡೆಯಾಗಬೇಕಿತ್ತು. ಸ್ವಲ್ಪ ತಡವಾಗಿದ್ದರಿಂದ, ಅಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಯಿತು. ಲಾಕ್​ಡೌನ್​ ತೆರವಾದರೂ ಕರೊನಾ ಹಾವಳಿಯಿಂದ ಚಿತ್ರ ಪ್ರದರ್ಶನ ಶುರುವಾಗಿಲ್ಲ. ಸದ್ಯ ಶುರುವಾಗುವ ಹಾಗೂ ಕಾಣುತ್ತಿಲ್ಲ. ಹಾಗಾಗಿ, ರೆಡಿ ಇರುವ ಚಿತ್ರವನ್ನು ಸುಮ್ಮನೆ ಇಟ್ಟುಕೊಂಡು ಕೂರುವ ಬದಲು ಅದನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಯೋಚಿಸಿದ್ದು ನೆಟ್​ಫ್ಲಿಕ್ಸ್​ಗೆ ಮಾರಿದೆ.

ಅಂದಹಾಗೆ, ನೆಟ್​ಫ್ಲಿಕ್ಸ್​ನವರು ಈ ಚಿತ್ರವನ್ನು ಎಷ್ಟು ಮೊತ್ತಕ್ಕೆ ಖರೀದಿಸಿದ್ದಾರೆ ಗೊತ್ತಾ? ಬರೋಬ್ಬರಿ 9.50 ಕೋಟಿ ಎಂದು ಹೇಳಲಾಗುತ್ತಿದೆ. ಇದಕ್ಕಿಂತ ಹೆಚ್ಚು ಮೊತ್ತವನ್ನು ಹೀರೋಗಳ ಚಿತ್ರಗಳಿಗೆ ಕೊಟ್ಟು ಖರೀದಿಸಲಾಗಿದೆ. ಆದರೆ, ಜನಪ್ರಿಯ ನಾಯಕಿಯೊಬ್ಬರ ಚಿತ್ರವೊಂದನ್ನು ಇಷ್ಟೊಂದು ಮೊತ್ತ ಕೊಟ್ಟು ಖರೀದಿಸುತ್ತಿರುವುದು ದಕ್ಷಿಣ ಭಾರತದಲ್ಲಿ ಇದೇ ಮೊದಲು ಎಂದು ಹೇಳಲಾಗುತ್ತಿದೆ.

ಇದಕ್ಕೂ ಮುನ್ನ ಕೀರ್ತಿ ಅಭಿನಯದ 'ಪೆಂಗ್ವಿನ್​' ಎಂಬ ಚಿತ್ರ ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಿತ್ತು. ಆದರೆ, ಆ ಚಿತ್ರಕ್ಕೆ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಸಿಗಲಿಲ್ಲ. ಹೀಗಿರುವಾಗಲೂ ನೆಟ್​ಫ್ಲಿಕ್ಸ್​, 9.5 ಕೋಟಿ ರೂಗಳನ್ನು ಕೊಟ್ಟು 'ಮಿಸ್​ ಇಂಡಿಯಾ' ಚಿತ್ರವನ್ನು ಖರೀದಿಸಿದ್ದು, ಹಲವರ ಹುಬ್ಬೇರಿಸಿದೆ.

ಈ ಚಿತ್ರವನ್ನು ನರೇಂದ್ರನಾಥ್​ ಎನ್ನುವವರು ನಿರ್ದೇಶನ ಮಾಡಿದ್ದು, ಎಸ್​.ಎಸ್​. ತಮನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರ ಯಾವಾಗ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಎಂದು ಸದ್ಯದ್ಲಲೇ ಅಧಿಕೃತವಾಗಿ ಘೋಷಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net