ಲವ್ ​ಮಾಕ್​ಟೇಲ್​ ತೆಲುಗು ರಿಮೇಕ್​ಗೆ ಶೀರ್ಷಿಕೆ ಫಿಕ್ಸ್; ಮುಹೂರ್ತಕ್ಕೆ ದಿನಾಂಕವೂ ನಿಗದಿ

ಗಗಗ
Published on

ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ ಲವ್ ಮಾಕ್​ಟೇಲ್​ ಸಿನಿಮಾ ಟಾಲಿವುಡ್​ನಲ್ಲೂ ರಿಮೇಕ್​ ಆಗುತ್ತಿದೆ. ಕನ್ನಡದ ನಿರ್ದೇಶಕ ನಾಗಶೇಖರ್​ ತೆಲುಗು ಅವತರಣಿಕೆಯನ್ನು ನಿರ್ದೇಶಿಸುತ್ತಿದ್ದಾರೆ. ಮೂಲ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಸತ್ಯದೇವ್​ ನಿಭಾಯಿಸುತ್ತಿದ್ದಾರೆ. ಮಿಲನಾ ಪಾತ್ರವನ್ನು ತಮನ್ನಾ ಭಾಟಿಯಾ ಮಾಡುತ್ತಿದ್ದಾರೆ. ಇದೀಗ ಇದೇ ಸಿನಿಮಾ ಬಗ್ಗೆ ಹೊಸ ಮಾಹಿತಿಯೊಂದು ಲಭ್ಯವಾಗಿದೆ.

ಸಿನಿಮಾ ಘೋಷಣೆ ಆದ ಬಳಿಕ ಈ ಚಿತ್ರದ ಶೀರ್ಷಿಕೆ ಏನಿರಬಹುದೆಂಬ ಕುತೂಹಲ ಎಲ್ಲರಲ್ಲಿತ್ತು. ಇದೀಗ ಆ ಕೌತುಕಕ್ಕೆ ತೆರೆಬಿದ್ದಿದ್ದು, ಚಿತ್ರದ ಟೈಟಲ್ ಅಧಿಕೃವಾಗಿ ಘೋಷಣೆ ಆಗಿದೆ. ‘ಗುರ್ತುಂದಾ ಶೀತಾಕಾಲಂ’ ಎಂದು ಶೀರ್ಷಿಕೆ ಫಿಕ್ಸ್ ಮಾಡಲಾಗಿದ್ದು, ಮುಹೂರ್ತಕ್ಕೆ ದಿನಾಂಕವನ್ನೂ ನಿಗದಿ ಮಾಡಲಾಗಿದೆ.

ಆಗಸ್ಟ್ 27ರಂದು ಹೈದರಾಬಾದ್​ನ ತಾಜ್ ಕೃಷ್ಣ ಹೊಟೇಲ್​ನಲ್ಲಿ ಸರಳ ಮುಹೂರ್ತ ನೆರವೇರಲಿದ್ದು, ಸೆಪ್ಟೆಂಬರ್​ ಮೂರನೇ ವಾರದಿಂದ ಸಿನಿಮಾ ಶೂಟಿಂಗ್​ಗೆ ಚಾಲನೆ ನೀಡಲಿದೆ ಚಿತ್ರತಂಡ. ನಿರ್ದೇಶನದ ಜತೆಗೆ ನಿರ್ಮಾಣದಲ್ಲಿಯೂ ನಿರ್ದೇಶಕ ನಾಗಶೇಖರ್​ ಪಾಲುದಾರಿಕೆ ಹೊಂದಿದ್ದು, ಭಾವನಾ ರವಿ ಸಾಥ್​ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net