ಮೇಕಪ್​ಮ್ಯಾನ್​ಗೆ ಭಾವುಕ ವಿದಾಯ ಹೇಳಿದ ರಮೇಶ್ ಅರವಿಂದ್​

Untitled
Published on

ಬಹುಭಾಷಾ ನಟ ರಮೇಶ್ ಅರವಿಂದ್​ ಬಹುಕಾಲದ ಸ್ನೇಹಿತನನ್ನು ಕಳೆದುಕೊಂಡಿದ್ದಾರೆ. ಮೇಕಪ್​ ಆರ್ಟಿಸ್ಟ್​ ಆಗಿ ಕಳೆದ 20 ವರ್ಷಗಳಿಂದ ರಮೇಶ್​ ಅವರ ಜತೆಗಿದ್ದ ಸೂರಿಬಾಬು ಭಾನುವಾರ ನಿಧನರಾಗಿದ್ದಾರೆ.

ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಟ ರಮೇಶ್​, ನೆಚ್ಚಿನ ಮೇಕಪ್​ ಮ್ಯಾನ್​ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅವರ ಜತೆಗಿನ ಹಲವು ಫೋಟೋಗಳನ್ನು ಶೇರ್​ ಮಾಡಿಕೊಂಡು ಅವರ ಬಗ್ಗೆ ಒಂದಷ್ಟು ಸಾಲು ಬರೆದುಕೊಂಡಿದ್ದಾರೆ.

‘ಸೂರಿಬಾಬು 20 ವರ್ಷಗಳಿಂದ ನನ್ನ ಮೇಕ್ಅಪ್ ಮ್ಯಾನ್. ಅತ್ಯುತ್ತಮ ಕೆಲಸಗಾರ. ಶ್ರಮ ಜೀವಿ. ನಿಷ್ಠಾವಂತ. ನಾನು ನಟಿಸಿದ ಪ್ರತಿ ಶಾಟ್ ಹಿಂದೆ ಅವರ 'ಟಚ್ ಅಪ್' ಇರುತ್ತಿತ್ತು. ನಿನ್ನೆ ಹೈದೆರಾಬಾದ್ನಲ್ಲಿ, ನಮ್ಮನ್ನ ಬಿಟ್ಟು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದಿದ್ದಾರೆ.

ಸದ್ಯ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್​ ಇರದ ಕಾರಣ ಸೂರಿಬಾಬು ಕಳೆದ ಕೆಲ ತಿಂಗಳಿಂದ ಹೈದರಾಬಾದ್​ನಲ್ಲಿಯೇ ವಾಸವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net