VIDEO: 81ರ ಇಳಿವಯಸಲ್ಲೂ ಅಜ್ಜಿಯ ಪುಷ್​ ಅಪ್ಸ್​ ನೋಡಿ!; ಇವರು ಬಾಲಿವುಡ್​ ನಟನ ತಾಯಿ!

milind-soman-mother-pushups-jpg
Published on

ಬಾಲಿವುಡ್​ ನಟ ಮಿಲಿಂದ್​ ಸೋಮನ್​ ಫಿಟ್​ನೆಸ್​ಗೆ ಹೆಸರಾದವರು. ಇದೀಗ ಇದೇ ನಟನ ತಾಯಿ ಸಹ ಫಿಟ್​ನೆಸ್​ ಬಗ್ಗೆ ಯುವಕರಿಗೆ ಪಾಠ ಮಾಡಿದ್ದಾರೆ. ಅದ್ಯಾವ ರೀತಿ ಅಂದರೆ, ತಮ್ಮ 81ನೇ ಜನ್ಮದಿನದ ಪ್ರಯುಕ್ತ ಪುಷ್​ ಅಪ್ಸ್ ಹೊಡೆದು, ಯುವಕರೇ ನಾಚುವಂತೆ ಮಾಡಿದ್ದಾರೆ!

ಉಷಾ ಸೋಮನ್​ಗೆ 81ರ ಇಳಿವಯಸ್ಸು. ಈ ಇಳಿವಯಸಲ್ಲೂ ಅವರನ್ನು ಸೋಲಿಸುವುದು ಕಷ್ಟ. ಓಟಕ್ಕೂ ಸೈ, ಒಂಟಿಗಾಲಿನ ಓಟಕ್ಕೂ ಜೈ.. ಪುಷ್​​ ಅಪ್ಸ್​ ಸಹ ಇವರಿಗೆ ಸಲೀಸು. ಇನ್ನು ಮಿಲಿಂದ್​ ಸೋಮನ್​ ಅವರ ಸೋಷಿಯಲ್​ ಮೀಡಿಯಾ ಖಾತೆಗಳು ತೆರೆದರೆ ಅಲ್ಲಿ ಅಮ್ಮನ ವಿಡಿಯೋಗಳೇ ಹೆಚ್ಚು ಕಾಣಿಸುತ್ತವೆ. ನಿತ್ಯ ಅಮ್ಮ ಮಾಡುವ ವರ್ಕೌಟ್​ಗಳನ್ನು ಶೇರ್​ ಮಾಡಿಕೊಂಡು, ಇತರರಿಗೂ ಸ್ಫೂರ್ತಿ ತುಂಬುತ್ತಿದ್ದಾರೆ ಮಿಲಿಂದ್​.

‘ಜುಲೈ 3ಕ್ಕೆ ಬರೋಬ್ಬರಿ 81 ವರ್ಷ ಆಯ್ತು. ಲಾಕ್​ಡೌನ್​ನಲ್ಲಿ ಜನ್ಮದಿನ ಆಚರಿಸಿಕೊಳ್ಳಲಾಗುತ್ತಿದೆ. 15 ಪುಷ್​ಅಪ್ಸ್ ಹೊಡೆಯುವುದೇ ಪಾರ್ಟಿ. ಬಾದಾಮ್​ ಕೇಕ್​ ಸಿದ್ಧವಾಗಿದೆ. ಹ್ಯಾಪಿ ಬರ್ತಡೇ ಆಯಿ. ಸದಾ ನಗುತ್ತೀರಿ‘ ಎಂದು ಮಿಲಿಂದ್​ ಟ್ವಿಟ್​ ಮಾಡಿ ಅಮ್ಮನಿಗೆ ಶುಭಾಶಯ ತಿಳಿಸಿದ್ದಾರೆ.

ಸದ್ಯ ಈ ವಿಡಿಯೋಗಳನ್ನು ವೀಕ್ಷಣೆ ಮಾಡುವ ನೆಟ್ಟಿಗರು, ಅಮ್ಮನ ಫಿಟ್ನೆಸ್​ಗೆ ಫಿದಾ ಆಗಿದ್ದಾರೆ. ಬಾಲಿವುಡ್​ನ ಶಿಲ್ಪಾ ಶೆಟ್ಟಿ, ಅರ್ಜುನ್​ ರಾಂಪಾಲ್​ ಸೇರಿ ಸಾಕಷ್ಟು ಕಲಾವಿದರು ಸಲಾಂ ಎಂದಿದ್ದಾರೆ. (ಏಜೆನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net