

ಬೆಂಗಳೂರು: ಲಾಕ್ಡೌನ್ನಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿರುವುದರಿಂದ, ನಟ-ನಟಿಯರು ತಮ್ಮ ಸಂಭಾವನೆ ಕಡಿತಗೊಳಿಸಬೇಕು ಎಂಬ ಅಭಿಪ್ರಾಯ ಎಲ್ಲಾ ಚಿತ್ರರಂಗಗಳಲ್ಲೂ ಕೇಳಿ ಬರುತ್ತಿದೆ. ಈ ಪ್ರಸ್ತಾಪವನ್ನು ನಿರ್ವಪಕರು ಮತ್ತು ನಿರ್ದೇಶಕರು ಮಾಡುತ್ತಿದ್ದಾರೆಯೇ ಹೊರತು, ಯಾವ ನಟ-ನಟಿಯರು ಸಹ ಮುಂದೆ ಬಂದು ಸಂಭಾವನೆಯನ್ನು ಕಡಿತಗೊಳಿಸುತ್ತಿರುವುದಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.
ಇದೀಗ ರಾಕುಲ್ ಪ್ರೀತ್ ಸಿಂಗ್ ಅಂಥದ್ದೊಂದು ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನಿತಿನ್ ಅಭಿನಯದ ತೆಲುಗು ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸುವುದಕ್ಕೆ ಒಪ್ಪಿಕೊಂಡಿರುವ ಅವರು, ತಮ್ಮ ಸಂಭಾವನೆಯಲ್ಲಿ ಅರ್ಧದಷ್ಟನ್ನು ಕಡಿತಗೊಳಿಸಿದ್ದಾರೆ ಎಂಬ ಸುದ್ದಿಯೊಂದು ಟಾಲಿವುಡ್ನಲ್ಲಿ ಒಂದೆರಡು ದಿನಗಳಿಂದ ಹರಿದಾಡುತ್ತಿದೆ. ಸದ್ಯ ರಾಕುಲ್, ಪ್ರತಿ ಚಿತ್ರಕ್ಕೆ ಒಂದೂವರೆ ಕೋಟಿ ಸಂಭಾವನೆಯನ್ನು ಪಡೆಯುತ್ತಿದ್ದಾರಂತೆ. ಆದರೆ, ಇದೀಗ ಲಾಕ್ಡೌನ್ನಿಂದ ಚಿತ್ರರಂಗದ ಪರಿಸ್ಥಿತಿ ಹದಗೆಟ್ಟಿರುವುದರಿಂದ ಮತ್ತು ನಿರ್ವಪಕರು ಹಣಕಾಸಿನ ವಿಷಯದಲ್ಲಿ ಪರದಾಡುತ್ತಿರುವುದರಿಂದ, ಅವರು ಈ ತೀರ್ವನಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಎಲ್ಲರೂ ಸಂಭಾವನೆ ಕಡಿತಗೊಳಿಸುವುದಕ್ಕೆ ಹಿಂದೇಟು ಹಾಕುತ್ತಿರುವಾಗಲೇ ರಾಕುಲ್ ಪ್ರೀತ್ ಸಿಂಗ್ ಇಂಥದ್ದೊಂದು ದಿಟ್ಟ ನಿರ್ಧಾರಕ್ಕೆ ಬಂದಿದ್ದು, ಅವರ ಈ ಕೆಲಸ, ಬೇರೆ ನಟ-ನಟಿಯರಿಗೆ ಮಾದರಿಯಾಗುತ್ತದಾ ಎಂದು ಕಾದು ನೋಡಬೇಕಿದೆ.