More

    ಕೇವಲ 24 ಗಂಟೆಯಲ್ಲಿ ಸುಶಾಂತ್​ ಕೊನೇ ಸಿನಿಮಾದ ಟ್ರೇಲರ್ ಸೃಷ್ಟಿಸಿತು ಹೊಸ ದಾಖಲೆ

    ಸುಶಾಂತ್​ ಸಿಂಗ್​ ರಜಪೂತ್ ಕೊನೇ ಸಿನಿಮಾ ದಿಲ್​ ಬೇಚಾರಾ ಚಿತ್ರದ ಟ್ರೇಲರ್​ ಸೋಮವಾರ ಸಂಜೆ ಬಿಡುಗಡೆಯಾಗಿದೆ. ಮುಖೇಶ್ ಛಾಬ್ರಾ ಭಾವುಕ ಪೋಸ್ಟ್ ಹಾಕಿಕೊಂಡು ಟ್ರೇಲರ್ ಲಿಂಕ್​ಅನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದರು. ಸುಶಾಂತ್​ ಸಾವಿನ ಹಿನ್ನೆಲೆಯಲ್ಲಿ ಈ ಚಿತ್ರ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿತ್ತು. ಏನಾದರಾಗಲಿ ಈ ಸಿನಿಮಾವನ್ನು ಸೂಪರ್​ ಹಿಟ್ ಮಾಡೋಣ ಎಂದು ಅಭಿಮಾನಿಗಳು ಟ್ವಿಟರ್​ನಲ್ಲಿ ಟ್ರೆಂಡ್​ ಮಾಡಿದ್ದರು. ಅದರಂತೆ ಬಿಡುಗಡೆಯಾದ ಟ್ರೇಲರ್​ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

    ಇದನ್ನೂ ಓದಿ: 50 ಪರ್ಸೆಂಟ್ ಡಿಸ್ಕೌಂಟ್; ಸಂಭಾವನೆ ಕಡಿತಕ್ಕೆ ರಾಕುಲ್​ ನಿರ್ಧಾರ

    ಕ್ಯಾನ್ಸರ್ ಪೀಡಿತೆ ಮತ್ತು ನಾಯಕನ ನಡುವಿನ ಕ್ಯೂಟ್​ ಲವ್​ ಸ್ಟೋರಿಯಂತೆ ಕಾಣುವ ಈ ಸಿನಿಮಾದಲ್ಲಿ ಸುಶಾಂತ್​ ಅದ್ಬುತ ಅಭಿನಯ ತೆರೆಮೇಲೆ ಕಾಣುತ್ತದೆ. ಬಿಡುಗಡೆಯಾದ 16 ಗಂಟೆಯಲ್ಲಿ ಈವರೆಗೂ 22 ಮಿಲಿಯನ್​ಗೂ ಅಧಿಕ ಬಾರಿ ಟ್ರೇಲರ್​ ವೀಕ್ಷಣೆ ಆಗಿದ್ದು, 50ಲಕ್ಷಕ್ಕೂ ಅಧಿಕ ಮಂದಿ ಟ್ರೇಲರ್​ ಲೈಕ್​ ಮಾಡಿದ್ದಾರೆ. ಈ ಮೂಲಕ ಹಾಲಿವುಡ್​ನ ಎವೆಂಜರ್ಸ್ ಎಂಡ್​ ಗೇಮ್ ಚಿತ್ರದ ಟ್ರೇಲರ್​ ದಾಖಲೆಯನ್ನು ದಿಲ್​ ಬೇಚಾರ ಮುರಿದಿದೆ. ಹಾಲಿವುಡ್ ಚಿತ್ರದ ಟ್ರೇಲರ್​ನ್ನು 24ಗಂಟೆಗಳಲ್ಲಿ 3.2 ಮಿಲಿಯನ್​ ಜನ  ಲೈಕ್​ ಮಾಡಿದ್ದರು. ಸುಶಾಂತ್​ ಚಿತ್ರದ ಟ್ರೇಲರ್​ನ್ನು 5 ಮಿಲಿಯನ್​ ಜನ ಮೆಚ್ಚಿಕೊಂಡಿದ್ದಾರೆ.  ಜುಲೈ 7ಕ್ಕೆ ಈ ಸಿನಿಮಾ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಬಿಡುಗಡೆಯಾಗಲಿದೆ.

    ಇದನ್ನೂ ಓದಿ: ‘ಅಕಟಕಟ’ಕ್ಕೆ ಬೈಕ್​ ರೇಸರ್​ ಶೋಗನ್ ಗ್ರೀನ್​ ಸಿಗ್ನಲ್​

    ಜಾನ್​ ಗ್ರೀನ್​ ಬರೆದ ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್ ಕಾದಂಬರಿಯಿಂದ ಪ್ರೇರಿತಗೊಂಡು ಈ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಮುಖೇಶ್​. ಸಂಜನಾ ಸಿಂಘ್ವಿ ಮೊದಲ ಬಾರಿ ನಾಯಕಿಯಾಗಿ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ.

    PHOTOS| ಥ್ರಿಲ್​ ನೀಡಲು ಅಪ್ಸರಾ ರೆಡಿ: ಹಾಟ್​ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಆರ್​ಜಿವಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts