More

  ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಅರ್ಜುನ್​’ ಸಿನಿಮಾ ನಟಿ ಮೀರಾ

  ಮುಂಬೈ: ನಟ ದರ್ಶನ್‌ ಅಭಿನಯದ ಅರ್ಜುನ್‌ ಸಿನಿಮಾ ಮೂಲಕ ಜನ್ನಡಿಗರಿಗೆ ಚಿರಪರಿಚಿತರಾಗಿದ್ದ ನಟಿ ಮೀರಾ ಚೋಪ್ರಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆಯ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ರಕ್ಷಿತ್ ಕೇಜ್ರಿವಾಲ್​​ ಜೊತೆ ಸಪ್ತಪದಿ ತುಳಿದಿದ್ದಾರೆ.

  ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟಿ, ಎಂದೆಂದಿಗೂ ಸಂತೋಷ, ಜಗಳ, ನಗು, ಕಣ್ಣೀರು, ಮತ್ತು ನೆನಪುಗಳು ಈ ಜೀವಮಾನದಲ್ಲಿ ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಮದುವೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  Meera Chopra

  ಇದನ್ನೂ ಓದಿ: ಮುಂಬರುವ ಟಿ-20 ವಿಶ್ವಕಪ್​ನಿಂದ ವಿರಾಟ್​ ಕೊಹ್ಲಿಗೆ ಕೊಕ್​; ಕಾರಣ ಹೀಗಿದೆ

  ಮೀರಾ ಚೋಪ್ರಾ ಕಳೆದ ಮೂರು ವರ್ಷಗಳಿಂದ ಮುಂಬೈನ ರಕ್ಷಿತ್ ಕೇಜ್ರಿವಾಲ್​ ಎಂಬ ಉದ್ಯಮಿಯನ್ನು ಪ್ರೀತಿಸುತ್ತಿದ್ದರು ಎಂದು ವರದಿಯಾಗಿದೆ. ಈ ಪ್ರೀತಿ ಈಗ ದಾಂಪತ್ಯಕ್ಕೆ ತಿರುಗಿದೆ. ಜೈಪುರದ ಬ್ಯೂನಾ ವಿಸ್ಟಾ ಐಷಾರಾಮಿ ಗಾರ್ಡನ್ ರೆಸಾರ್ಟ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಚಿತ್ರರಂಗ ಹಾಗೂ ವಧು-ವರರ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

  ಮೀರಾ ಚೋಪ್ರಾ ಮೂಲತಃ ಮುಂಬೈ ಹುಡುಗಿ ಆಗಿದ್ರೂ ಅವರಿಗೆ ಕನ್ನಡಕ್ಕೆ ನಂಟಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ನಾಯಕಿ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡಿಗರಿಗೆ ಅರ್ಜುನ್ ಚಿತ್ರದ ನಟಿ ಅಂದರೆ ಮೀರಾ ಚೋಪ್ರಾ ನೆನಪಾಗುತ್ತಾರೆ. ಜೈಪುರ ಮತ್ತು ದೆಹಲಿ ಹೆದ್ದಾರಿ ಬಳಿಯಿರುವ ಐಷಾರಾಮಿ ರೆಸಾರ್ಟ್‌ವೊಂದರಲ್ಲಿ ಮೀರಾ ಮದುವೆ ನಡೆದಿದೆ. ಮೀರಾ ಮದುವೆ ಸಂಭ್ರಮದಲ್ಲಿ ಬಾಲಿವುಡ್ ನಟ-ನಟಿಯರು ಭಾಗಿಯಾಗಿದ್ದಾರೆ.

  See also  ನಮ್ಮದೇ ಮೊದಲ 'ದಸರಾ' ಎಂದ ಶರ್ಮಿಳಾ; ತೆಲುಗು ನಿರ್ಮಾಪಕರ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts