More

    ಹಾಟ್ ಡ್ರೆಸ್ ತೊಟ್ಟು ಟ್ರೋಲ್​ ಆದ ಗರ್ಭಿಣಿ ಅಮಲಾ ಪೌಲ್‌

    ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್​ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್​ ಅಭಿನಯದ ಸೂಪರ್​ ಹಿಟ್​ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್​ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಈ ನಟಿ ಸದ್ಯ ಆಡುಜೀವಿತಂ ಚಿತ್ರದಲ್ಲಿ ಪೃಥ್ವಿರಾಜ್​ ಸುಕುಮಾರನ್​ಗೆ ನಾಯಕಿಯಾಗಿ ನಟಿಸಿದ್ದಾರೆ. ಆದರೆ, ನಟಿ ಬಟ್ಟೆ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದ್ದು, ನೆಟ್ಟಿಗರು ಕಾಲೆಳೆದಿದ್ದಾರೆ.

    ಕಳೆದ ವರ್ಷ ಅಕ್ಟೋಬರ್​ 26ರಂದು 32ನೇ ಹುಟ್ಟುಹಬ್ಬ ಆಚರಿಸಿಕೊಂಡ ಅಮಲಾ, ಅದೇ ದಿನ ತಮ್ಮ ಬಾಯ್​ಫ್ರೆಂಡ್ ಜಗತ್​ ದೇಸಾಯಿ ಅವರನ್ನು​ ಪರಿಚಯಿಸುವ ಮೂಲಕ ತಾವು ಮತ್ತೊಮ್ಮೆ ಪ್ರೀತಿಯ ಬಲೆಯಲ್ಲಿ ಬಿದ್ದಿರುವುದನ್ನು ಅಧಿಕೃತವಾಗಿ ಬಹಿರಂಗಪಡಿಸಿದರು. ಪ್ರವಾಸೋದ್ಯಮ ಮತ್ತು ಆತಿಥ್ಯ ವಿಭಾಗದಲ್ಲಿ ಕೆಲಸ ಮಾಡುವ ಜಗತ್​ ದೇಸಾಯಿ ಜತೆ ಕಳೆದ ನವೆಂಬರ್​ 05ರಂದು ಹಸೆಮಣೆ ಏರಿದ್ದರು.

    ಮದುವೆಯಾದ ಕೆಲ ದಿನಗಳಿಗೆ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದ ಅಮಲಾ ತಾನು ತಾಯಿಯಾಗುತ್ತಿರುವ ಖುಷಿಯನ್ನು ಇನ್​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದರು. ಬೇಬಿ ಬಂಪ್​ ಫೋಟೋ ಶೇರ್​ ಮಾಡುವುದರ ಜತೆಗೆ 1+1 ನಿನ್ನೊಂದಿಗೆ 3 ಆಗಿದೆ ಎಂಬುದು ನನಗೀಗ ತಿಳಿದಿದೆ ಅಂತಾ ಅಮಲಾ ಬರೆದುಕೊಳ್ಳುವ ಮೂಲಕ ತಾಯಿಯಾಗುತ್ತಿರುವ ಸಂಗತಿಯನ್ನು ತಿಳಿಸಿದ್ದರು.

    ಇದನ್ನೂ ಓದಿ: CAA ಅಂದರೆ ಮೊದಲು ಏನೆಂದು ತಿಳಿದುಕೊಳ್ಳಿ, ನಂತರ ಮಾತನಾಡಿ: ನಟಿ ಕಂಗನಾ

    ಚೊಚ್ಚಲ ಮಗುವಿನ ಆಗಮನಕ್ಕೆ ಎದುರು ನೋಡುತ್ತಿರುವ ಅಮಲಾ ತಾವು ನಟಿಸಿರುವ ಸಿನಿಮಾಗೂ ಪ್ರಚಾರಕ್ಕೆ ನಟಿ ಸಾಥ್ ನೀಡುತ್ತಿದ್ದಾರೆ. ಇತ್ತೀಚಿಗೆ ನಡೆದ ಚಿತ್ರದ ಟ್ರೈಲರ್​ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ನಟಿಯನ್ನು ಕಂಡು ಹಲವರು ನೆಗಟಿವ್​ ಕಮೆಂಟ್​ ಮಾಡಿದ್ದಾರೆ. ಟ್ರೈಲರ್​ ಲಾಂಚ್​ ಇವೆಂಟ್​ಗೆ ಆಗಮಿಸಿದ ನಟಿ ಕಡುನೀಲಿ ಬಣ್ಣದ ಸ್ಲೀವ್‌ಲೆಸ್ ಡ್ರೆಸ್ ಧರಿಸಿ ಬಂದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಟಿಯನ್ನು ಟೀಕಿಸಿ ಕಮೆಂಟ್​ ಮಾಡಲು ಶುರು ಮಾಡಿದ್ದಾರೆ.

    ಇದೆಂಥಾ ಡ್ರೆಸ್ ಬೆಡ್‌ನಿಂದ ಎದ್ದ ಕೂಡಲೇ ಬಾತ್‌ರೂಮ್‌ಗೆ ಹಾಕಿಕೊಂಡು ಹೋಗುವ ಡ್ರೆಸ್, ನಾನು ಇಷ್ಟು ದಿನ ಅಮಲಾ ಅಭಿಮಾನಿಯಾಗಿದ್ದೆ. ಈಗ ಅಭಿಮಾನಿಯಲ್ಲ ಎಂದು ಹಲವರು ಕಮೆಂಟ್​ ಮಾಡುವ ನಟಿಯ ಡ್ರೆಸ್ಸಿಂಗ್​ ಸ್ಟೈಲ್​ಅನ್ನು ಟೀಕಿಸಿದ್ದಾರೆ. ನಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಆಗುತ್ತಿದ್ದರು ನಟಿ ಕ್ಯಾರೆ ಎನ್ನದೇ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

    ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ನಿರ್ದೇಶನದ ಆಡುಜೀವಿತಂ ಚಿತ್ರವು ಕೆಲಸ ಅರಸಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ  ಆಧರಿಸಿ ಮಾಡಿರುವ ಸಿನಿಮಾ ಆಗಿದೆ. 2008ರಲ್ಲಿ ಬೆನ್ಯಾಮಿನ್ ಬರೆದ ಅದೇ ಹೆಸರಿನ ಮಲಯಾಳಂ ಕಾದಂಬರಿ ಆಧರಿಸಿ ಆಡುಜೀವಿತಂ ಚಿತ್ರ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts