ಅಪ್ರಾಪ್ತ ವಯಸ್ಕ ವಿದ್ಯಾರ್ಥಿಯೊಂದಿಗೆ ಸರಸ​​; ಶಿಕ್ಷಕಿಗೆ 50 ವರ್ಷ ಸಜೆ

Love Affair
Published on

ನವದೆಹಲಿ: ವಿವಾಹಿತ ಶಿಕ್ಷಕಿಯೊಬ್ಬರು ಅಪ್ರಾಪ್ತ ವಯಸ್ಕ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದಕ್ಕಾಗಿ ನ್ಯಾಯಾಲಯ ಆಕೆಗೆ 50 ವರ್ಷಗಳ ಶಿಕ್ಷೆ ವಿಧಿಸಿರುವ ಘಟನೆ ವರ್ಜಿನಿಯಾದಲ್ಲಿ ನಡೆದಿದೆ. ಹೆನ್ರಿಕೊ ಕೌಂಟಿಯ ಹಂಗೇರಿ ಕ್ರೀಕ್ ಮಿಡಲ್ ಸ್ಕೂಲ್‌ನ ಶಿಕ್ಷಕಿ ಮೇಗನ್ ಪಾಲಿನ್ ಜೋರ್ಡಾನ್ (25), 50 ವರ್ಷ ಶಿಕ್ಷೆಗೆ ಗುರಿಯಾಗಿರುವ ಶಿಕ್ಷಕಿ ಎಂದು ತಿಳಿದು ಬಂದಿದೆ.

ಪ್ರಕರಣದ ಹಿನ್ನಲೆ

2022-2023ರ ಅವಧಿಯಲ್ಲಿ ಜೋರ್ಡಾನ್‌ ಮಾಧ್ಯಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಪಾಲಿನ್​ ಜೋರ್ಡಾನ್​ ಅದೇ ಶಾಲೆಯ ಅಪ್ರಾಪ್ತ ವಯಸ್ಯ ವಿದ್ಯಾರ್ಥಿಯೊಂದಿಗೆ ಸಂಬಂಧ ಹೊಂದಿದ್ದಳು. ಆಗಿಂದಾಗೆ ವಿದ್ಯಾರ್ಥಿಯ ಮನೆಗೆ ಹೋಗಿ ಈಕೆ ಲೈಂಗಿಕ ಕ್ರಿಯೆಯನ್ನು ಸಹ ನಡೆಸುತ್ತಿದ್ದಳು. ಈಕೆಯ ಕಾಟ ತಾಳಲಾರದೆ ವಿದ್ಯಾರ್ಥಿ ನಡೆದ ಬಗ್ಗೆ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದು, ದೂರು ದಾಖಲಿಸಿದ್ದಾರೆ.

US teacher

ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಪತ್ತೆಯಾದ ಸಾಕ್ಷ್ಯಾಧಾರಗಳ್ನು ಆಧಾರವಾಗಿಟ್ಟುಕೊಂಡು ಶಿಕ್ಷಕಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಆಕೆ ನಡೆದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತಪ್ಪೊಪ್ಪಿಕೊಂಡಿದ್ದಾಳೆ. ಬಳಿಕ ಸ್ಥಳೀಯ ಕೋರ್ಟ್‌ ವರ್ಜೀನಿಯಾ ಕೋಡ್ ಅಡಿಯಲ್ಲಿ, 17 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಲೈಂಗಿಕ ಚಟುವಟಿಕೆಗೆ ಕಾನೂನು ಬದ್ಧವಾಗಿ ಅನುಮತಿ ನೀಡಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಧೀಶರು ಶಿಕ್ಷಕಿಗೆ 50 ವರ್ಷಗಳ ಶಿಕ್ಷೆಯನ್ನು ವಿಧಿಸಿದ್ದಾರೆ. =

ಇದೇ ಮೊದಲಲ್ಲ

ಯುಎಸ್‌ನಲ್ಲಿ ಈ ರೀತಿಯ ಘಟನೆಗಳು ಇದೇ ಮೊದಲೇನಲ್ಲ. ಕಳೆದ ತಿಂಗಳು ಅರ್ಕಾನ್ಸಾಸ್‌ನಲ್ಲಿ ಶಿಕ್ಷಕಿ ಒಬ್ಬಳು ಹೈಸ್ಕೂಲ್‌ ಹುಡುಗನೊಂದಿಗೆ 30 ಬಾರಿ ಸೆಕ್ಸ್‌ ಮಾಡಿದ್ದಳು. ನಂತರ ವಿದ್ಯಾರ್ಥಿಯಿಂದ ದೂರವಾಗಿದ್ದಳು, ಮತ್ತೆ ವಿದ್ಯಾರ್ಥಿಯನ್ನು ಸಂಪರ್ಕಿಸಿದಾಗ ಆತ ದುರು ನೀಡಿದ್ದ. ಅಲ್ಲದೇ 33 ವರ್ಷದ ಮಹಿಳೆ ಹಲವು ವಿದ್ಯಾರ್ಥಿಗಳೊಂದಿಗೆ ಈ ರೀತಿ ಲೈಂಗಿಕ ಸಂಭೋಗ ನಡೆಸಿರುವುದಾಗಿ ತನಿಖೆ ವೇಳೆ ಕಂಡುಬಂದಿತ್ತು. ಇದರಿಂದ ಆಕೆಯನ್ನು ತಪ್ಪಿತಸ್ಥಳೆಂದು ಪರಿಗಣಿಸಿ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net