More

    ಕಾಫಿ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದಾಕೆ ಇಂದು ಬಹುಬೇಡಿಕೆಯ ನಟಿ; ಒಂದು ಚಿತ್ರದಿಂದ ರಾತ್ರೋರಾತ್ರಿ ಸೂಪರ್​ಸ್ಟಾರ್​ ಆದ ಕಥೆಯಿದು

    ಮುಂಬೈ: ಸಾಮಾನ್ಯವಾಗಿ ಸ್ಟಾರ್​ ನಟರ ಮಕ್ಕಳು ದೊಡ್ಡ ಆಫರ್​ಗಳನ್ನಯ ಕೈಯಲ್ಲಿ ಇಟ್ಟುಕೊಂಡು ಚಿತ್ರರಂಗವನ್ನು ಪ್ರವೇಶಿಸುತ್ತಾರೆ. ಇವರಿಗಾಗಿಯೇ ಖ್ಯಾತ ನಿರ್ಮಾಪಕರು ಹಾಗೂ ನಿರ್ದೇಶಕರು ಸಿನಿಮಾ ಮಾಡಲು ಮುಂದಾಗುತ್ತಾರೆ. ಕೆಲವರಿಗೆ ಲಕ್​ ಕೈ ಹಿಡಿದರೆ ಇನ್ನೂ ಕೆಲವರಿಗೆ ಅದೃಷ್ಟ ಅಷ್ಟಾಗಿ ಖುಲಾಯಿಸುವುದಿಲ್ಲ. ಆದರೆ, ಇಲ್ಲೊಬ್ಬ ನಟಿ ಬಾಲಿವುಡ್​ನಲ್ಲಿ ನಡೆದು ಬಂದ ರೀತಿ ಮಾತ್ರ ಎಲ್ಲರ ಹುಬ್ಬೇರುವಂತೆ ಮಾಡಿದೆ.

    ಹಿಂದಿ ಚಿತ್ರರಂಗದ ಹಿರಿಯ ನಟನ ಮಗಳಾಗಿದ್ದರು ಸಹ ಕುಟುಂಬದವರ ಸಹಾಯವಿಲ್ಲದೆ ಈ ನಟಿ ಬಾಲಿವುಡ್​ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ನಟಿಸಿದ ಮೊದಲ ಚಿತ್ರ ಫ್ಲಾಪ್​ ಆದರೂ ನಟಿ ಎದೆಗುಂದದೆ 3 ವರ್ಷದ ಬಳಿಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದು ಯಶಸ್ವಿಯಾದರು. ಪ್ರಸಿದ್ಧ ನಟನ ಪುತ್ರಿಯ ಹೆಸರು ಸಾಕಷ್ಟು ಜನಪ್ರಿಯವಾಗಿದ್ದು, ಒಂದೇ ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ಆದರು ಎಂದು ಹೇಳಿದರೆ ತಪ್ಪಾಗಲಾರದು.

    ಇದೀಗ ನಾವು ಹೇಳಲು ಹೊರಟಿರುವ ನಟಿ ಯಾರೆಂದರೆ 2013ರಲ್ಲಿ ಆಶಿಕಿ-2 ಚಿತ್ರದಲ್ಲಿ ಆರೋಹಿ ಪಾತ್ರ ಮಾಡುವ ಮೂಲಕ ರಾತ್ರೋ ರಾತ್ರಿ ಫೇಮಸ್​ ಆದ ಶ್ರದ್ಧಾ ಕಪೂರ್​ ಅವರ ಬಗ್ಗೆ. ಬಾಲಿವುಡ್​ನ ಹಿರಿಯ ನಟ ಶಕ್ತಿ ಕಪೂರ್ ಅವರ ಪುತ್ರಿಯಾಗಿರುವ ಇವರು ನಟನೆ ಮಾತ್ರವಲ್ಲದೆ ಗಾಯನದಲ್ಲೂ ಪ್ರಖ್ಯಾತಿ ಪಡೆದಿದ್ದಾರೆ.

    Shraddha Kapoor

    ಇದನ್ನೂ ಓದಿ: ಮನಮೋಹನ್​ ಸಿಂಗ್​ ಅವರ ಅಧಿಕಾರವಧಿಯನ್ನು ಜನ ಈಗಲೂ ನೆನಪಿಸಿಕೊಳ್ಳತ್ತಾರೆ: ಮಲ್ಲಿಕಾರ್ಜುನ ಖರ್ಗೆ

    ನಟನೆಯತ್ತ ಒಲವು ಹೊಂದಿದ್ದರೂ, ಶ್ರದ್ಧಾ ಕಪೂರ್ ಚಲನಚಿತ್ರ ಜಗತ್ತಿಗೆ ಪ್ರವೇಶಿಸುವ ಮೊದಲು ವಿದೇಶದಲ್ಲಿ ಕಾಫಿ ಶಾಪ್​ ಒಂದರಲ್ಲಿ ಕೆಲಸ ಮಾಡುತ್ತ ವ್ಯಾಸಂಗ ಮಾಡುತ್ತಿದ್ದರು. 16ನೇ ವಯಸ್ಸಿಗೆ ಅವರಿಗೆ ಸಲ್ಮಾನ್​ ಖಾನ್​ ಚಿತ್ರದಲ್ಲಿ ನಟಿಸಲು ಆಫರ್​ ಸಹ ಬಂದಿತ್ತಂತೆ. ಆದರೆ, ಓದಬೇಕಾಗಿರುವ ಕಾರಣ ಚಿತ್ರದಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಹೇಳಿ ಶ್ರದ್ಧಾ ಆಫರ್​ ತಿರಸ್ಕರಿಸಿದ್ದರಂತೆ.

    ಪ್ರತಿ ಚಿತ್ರಕ್ಕೆ 5-7 ಕೋಟಿ ರೂಪಾಯಿ ಚಾರ್ಜ್ ಮಾಡುವ ಶ್ರದ್ಧಾ ಕಪೂರ್​ ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 123 ಕೋಟಿ ಎಂದು ಅಂದಾಜಿಸಲಾಗಿದೆ. ಅಮರ್​ ಕೌಶಿಕ್​ ನಿರ್ದೇಶನದ ವರುಣ್​ ಧವನ್​, ರಾಜ್​ಕುಮಾರ್​ ರಾವ್​ ನಟನೆಯ ಸ್ತ್ರೀ-2 ಚಿತ್ರದ ಚಿತ್ರೀಕರಣದಲ್ಲಿ ಶ್ರದ್ಧಾ ಕಪೂರ್​ ಬ್ಯುಸಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts