More

    MI ನಾಯಕತ್ವ ಬಿಕ್ಕಟ್ಟು; ಮತ್ತೊಂದು ಹಂತ ತಲುಪಿದ ರೋಹಿತ್​-ಹಾರ್ದಿಕ್​ ನಡುವಿನ ಕಿತ್ತಾಟ

    ಮುಂಬೈ: 17ನೇ ಆವೃತ್ತಿ ಐಪಿಎಲ್​ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಬಿಸಿಸಿಐ ಹಾಗೂ ತಂಡಗಳು ಟೂರ್ನಿಗೆ ಸಿದ್ದತೆಗಳನ್ನು ಆರಂಭಿಸಿವೆ. ಆದರೆ, ಮುಂಬೈ ಇಂಡಿಯನ್ಸ್​ ತಂಡದಲ್ಲಿ ಯಾಕೋ ಎಲ್ಲವೂ ಸರಿ ಇಲ್ಲ ಎಂಬಂತೆ ಕಾಣುತ್ತಿದೆ. ಈ ಹಿಂದೆ ನಾಯಕತ್ವದ ವಿಚಾರವಾಗಿ ಸದ್ದು ಮಾಡಿದ್ದ ರೋಹಿತ್​ ಹಾಗೂ ಹಾರ್ದಿಕ್​ ನಡುವಿನ ಕಿತ್ತಾಟ ಇದೀಗ ಮತ್ತೊಂದು ಬೇರೊಂದು ವಿಷಯಕ್ಕೆ ಎಲ್ಲರ ಗಮನ ಸೆಳೆದಿದೆ.

    ಕೆಲ ದಿನಗಳ ಹಿಂದೆ ಖಾಸಗಿ ಕಾರ್ಯಕ್ರಮ ಒಂದರ ಸಂದರ್ಶನದಲ್ಲಿ ಮಾತನಾಡಿದ ಮುಂಬೈ ಇಂಡಿಯನ್ಸ್​ ಮುಖ್ಯ ಕೋಚ್​ ಮಾರ್ಕ್​ ಬೌಷರ್​ ಸಹ ಫ್ರಾಂಚೈಸಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಬಳಿಕ ರೋಹಿತ್​ ಪತ್ನಿ ರಿತಿಕಾ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಮೂಲಕ ತಿರುಗೇಟು ನೀಡಿದ್ದರು.

    ಇದೀಗ ಕೇಳಿ ಬಂದಿರುವ ಹೊಸ ವಿಚಾರ ಏನೆಂದರೆ ರೋಹಿತ್​ ಶರ್ಮಾ ಹಾಗೂ ಹಾರ್ದಿಕ್​ ಪಾಂಡ್ಯ ಇಬ್ಬರು ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅನ್​ಫಾಲೋ ಮಾಡಿದ್ದಾರೆ ಎಂದು ಕೇಳಿ ಬರುತ್ತಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಒಂದನ್ನು ಹುಟ್ಟು ಹಾಕಿದ್ದು, ರೋಹಿತ್​ ಹಾಗೂ ಹಾರ್ದಿಕ್​ ಅಭಿಮಾನಿಗಳ ನಡುವಿನ ಮಾತಿನ ಚಕಮಕಿಗೆ ಕಾರಣವಾಗಿದೆ.

    ಇದನ್ನೂ ಓದಿ: ಪೂನಂ ಪಾಂಡೆ ಬಗ್ಗೆ ಕೇಳಿಬಂತು ಮತ್ತೊಂದು ಸುದ್ದಿ; ಇದು ನಿಜ ಆದ್ರೆ ಈಕೆಗೆ ಜನ​ ಬಯ್ಯೋದು ಪಕ್ಕಾ

    ಕೆಲವರು ಮೊದಲು ಈ ಕೆಲಸವನ್ನು ಹಾರ್ದಿಕ್​ ಮಾಡಿರುತ್ತಾರೆ ಎಂದು ಕಮೆಂಟ್​ ಮಾಡಿದರೆ ಹಲವರು ಹೊಟ್ಟೆಕಿಚ್ಚಿನಿಂದ ರೋಹಿತ್​ ಈ ಕೆಲಸ ಮಾಡಿರಬಹುದು ಎಂದು ಕಿಡಿಕಾರಿದ್ದಾರೆ. ಕೆಲವರು ಈ ಇಬ್ಬರು ಒಬ್ಬರನ್ನೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈವರೆಗೆ ಫಾಲೋ ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ, ಈ ವಿಚಾರ ಮುಂದಿನ ದಿನಗಳಲ್ಲಿ ಯಾವ ಮಟ್ಟಕ್ಕೆ ಹೋಗಿ ತಲುಪಲಿದೆ ಎಂದು ಕಾದು ನೋಡಬೇಕಿದೆ.

    ಈಗಾಗಲೇ ಹಾರ್ದಿಕ್​ ಪಾಂಡ್ಯರನ್ನು ಮುಂಬರುವ ಆವೃತ್ತಿಗೆ ತಂಡದ ನಾಯಕನನ್ನಾಗಿ ಮಾಡುವ ಮೂಲಕ ಮುಂಬೈ ಇಂಡಿಯನ್ಸ್​ ಸಾಕಷ್ಟು ಖಂಡನೆಗೆ ಗುರಿಯಾಗಿದ್ದು, ಇದರ ಪರಿಣಾಮ ಸಾಮಾಜಿಕ ಜಾಲತಾಣದ ಮೇಲೆ ಬೀರಿದೆ. ತಂಡದ ನಾಯಕತ್ವ ವಹಿಸಿಕೊಂಡಿರುವ ಹಾರ್ದಿಕ್​ ಪಾಂಡ್ಯ ರೋಹಿತ್​ ಶರ್ಮಾರಂತೆ ಯಶಸ್ವಿ ನಾಯಕನಾಗಲಿದ್ದಾರಾ ಎಂದು 17ನೇ ಆವೃತ್ತಿಯ ಐಪಿಎಲ್​ ಮುಕ್ತಾಯದ ವೇಳೆಗೆ ತಿಳಿದು ಬರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts