More

    ಪೂನಂ ಪಾಂಡೆ ಬಗ್ಗೆ ಕೇಳಿಬಂತು ಮತ್ತೊಂದು ಸುದ್ದಿ; ಇದು ನಿಜ ಆದ್ರೆ ಈಕೆಗೆ ಜನ​ ಬಯ್ಯೋದು ಪಕ್ಕಾ

    ನವದೆಹಲಿ: ಕಳೆದ ವಾರ ತಮ್ಮ ಸಾವಿನ ಸುದ್ದಿಯನ್ನು ಪ್ರಕಟಿಸುವ ಮೂಲಕ ಸುದ್ದಿಯಾಗಿದ್ದ ನಟಿ ಪೂನಂ ಪಾಂಡೆ ಇದೀಗ ಮತ್ತೊಂದು ವಿಚಾರಕ್ಕೆ ಎಲ್ಲರ ಗಮನ ಸೆಳೆದಿದ್ದಾರೆ. ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ರೀತಿ ಮಾಡಿದ್ದಾಗಿ ನಟಿ ಪೂನಂ ಪಾಂಡೆ ಸ್ಪಷ್ಟನೆ ನೀಡಿದ್ದರು. ಈ ಬೆನ್ನಲ್ಲೇ ಅವರ ಬಗ್ಗೆ ಮತ್ತೊಂದು ಫೇಕ್​ ನ್ಯೂಸ್ ಹಬ್ಬಿದ್ದು, ಈ ಬಗ್ಗೆ ಸರ್ಕಾರದ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

    ಗರ್ಭಕಂಠದ ಕ್ಯಾನ್ಸರ್​ನಿಂದ ಅನೇಕ ಮಹಿಳೆಯರು ಮೃತಪಡುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಪೂನಂ ಪಾಂಡೆ ಅವರು ತಮ್ಮದೇ ಸಾವಿನ ಸುದ್ದಿಯನ್ನು ಹಬ್ಬಿಸಿದರು. ನಂತರ ಇದರ ಹಿಂದಿನ ಉದ್ದೇಶವನ್ನು ಹೇಳಿಕೊಂಡಿದ್ದರು. ಈಗ ಅವರ ಬಗ್ಗೆ ಹೊಸ ಸುದ್ದಿ ಹರಿದಾಡಿದೆ.

    ಇದೀಗ ಕೇಂದ್ರ ಆರೋಗ್ಯ ಸಚಿವಾಲಯವು ಪೂನಂ ಪಾಂಡೆ ಅವರನ್ನು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ರಾಯಭಾರಿಯನ್ನಾಗಿ ಮಾಡಲಾಗಿದೆ. ಈ ಸಂಬಂಧ ಪೂನಂ ಅವರ ತಂಡ ಕೂಡ ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಇಳಿದಿತ್ತು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

    ಇದನ್ನೂ ಓದಿ: ಕೆಲವು ವಿಚಾರದಲ್ಲಿ ನನ್ನ ಫ್ಯಾಮಿಲಿಯನ್ನು ಟಾರ್ಗೆಟ್​ ಮಾಡಲಾಗಿತ್ತು; ಫ್ಯಾನ್​ವಾರ್​ ಕುರಿತು ಸಂಗೀತಾ ಹೇಳಿದ್ದೇನು

    ಇತ್ತ ಈ ಸುದ್ದಿ ವೈರಲ್​ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯವು ಈ ರೀತಿಯ ಯಾವುದೇ ಆಲೋಚನೆಗಳಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆದಿದೆ.

    ಪೂನಂ ಪಾಂಡೆ ನಿರ್ಧಾರಕ್ಕೆ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆದಿವೆ. ಅನೇಕ ಸೆಲೆಬ್ರಿಟಿಗಳು ಪೂನಂ ಬೆಂಬಲಕ್ಕೆ ನಿಂತಿದ್ದಾರೆ. ತಮ್ಮ ಸಾವಿನ ಸುದ್ದಿ ಹಬ್ಬಿಸಿ ಈ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕೆ ಭೇಷ್ ಎಂದಿದ್ದಾರೆ. ಕೆಲವರು ಅವರನ್ನು ಟೀಕೆ ಮಾಡಿದ್ದಾರೆ ಪೂನಂ ಪಾಂಡೆ ಉದ್ದೇಶ ಒಳ್ಳೆಯದೇ ಆಗಿದೆ. ಆದರೆ, ಇದಕ್ಕೆ ಅವರು ತುಳಿದ ಮಾರ್ಗ ಸರಿ ಇಲ್ಲ ಎಂದು ಅನೇಕರು ಕಿಡಿಕಾರಿದ್ದಾರೆ. ಈ ಸಂಬಂಧ ಪೂನಂ ಪಾಂಡೆ ವಿರುದ್ಧ ಪೊಲೀಸರು ಎಫ್​ಐಆರ್ ಕೂಡ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts