More

    ಒಂದು ಕಾಲದಲ್ಲಿ ಅಸಿಸ್ಟೆಂಟ್​ ಆಗಿ ಕೆಲಸ ಮಾಡುತ್ತಿದ್ದ ನಟ ಇಂದು 2900 ಕೋಟಿ ರೂ. ಒಡೆಯ

    ಮುಂಬೈ: ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿಯುವ ಪ್ರತಿಯೊಬ್ಬರಿಗೂ ಲಕ್​ ಕೈ ಹಿಡಿಯುವುದಿಲ್ಲ. ಕೆಲವರು ಅನೇಕ ಫ್ಲಾಪ್​ ಚಿತ್ರಗಳನ್ನು ನೀಡಿದರು ಸಹ ಅವರನ್ನು ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಅದೇ ರೀತಿ ಒಮ್ಮೆ ಜಾಕಿ ಶ್ರಾಫ್ ಅವರ ‘ಫಲಕ್’ ಚಿತ್ರದಲ್ಲಿ ಸಹಾಯಕರಾಗಿ ಕೆಲಸ ಮಾಡಿದ ನಟ ಇಂದು ಒಂದು ಚಿತ್ರಕ್ಕೆ ನೂರು ಕೋಟಿ ರೂಪಾಯಿ ಚಾರ್ಜ್​​ ಮಾಡುತ್ತಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

    ಕಮಲ್ ಹಾಸನ್ ಮತ್ತು ರಣಬೀರ್ ಕಪೂರ್ ಅವರಂತಹ ಸ್ಟಾರ್‌ಗಳು ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಅದೃಷ್ಟ ಪರೀಕ್ಷೆಗಿಳಿದು ಸ್ಟಾರ್​ ಪಟ್ಟ ಗಿಟ್ಟಿಸಿಕೊಂಡರು. ಇಂದು ನಾವು ಮಾತನಾಡುತ್ತಿರುವ ನಟ ಒಂದು ಚಿತ್ರದಲ್ಲಿ ನಟಿಸಲು 100 ಕೋಟಿ ರೂ. 100 ಕೋಟಿ ಚಾರ್ಜ್ ಮಾಡಿದ ಮೊದಲ ಬಾಲಿವುಡ್ ಸೂಪರ್​ಸ್ಟಾರ್​ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

    ತಮ್ಮ ವೃತ್ತಿಜೀವನದ ಆರಂಭದಲ್ಲಿ, ನಟ ಜಾಕಿ ಶ್ರಾಫ್ ಅವರ ಬಟ್ಟೆ ಮತ್ತು ಶೂಗಳನ್ನು ನೋಡಿಕೊಳ್ಳುತ್ತಿದ್ದರು, ಆದರೆ ಇಂದು ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಗಳಲ್ಲಿ ಒಬ್ಬರಾಗಿರುವ ನಟ ಅದು ಬೇರೆ ಯಾರು ಅಲ್ಲ ಅದು ಸಲ್ಮಾನ್​ ಖಾನ್​. ಈ ವಿಚಾರವನ್ನು ನಟ ಜಾಕಿ ಶ್ರಾಫ್​ ಅವರೇ ಬಹಿರಂಗಪಡಿಸಿದ್ದರು.

    ಸಲ್ಮಾನ್​ ಖಾನ್​ ನನ್ನ ಕಿರಿಯ ಸಹೋದರನಿದ್ದಂತೆ. ಸಲ್ಮಾನ್ ಖಾನ್ ತಮ್ಮ ತಂದೆ ಸಲೀಂ ಖಾನ್ ಅವರ ‘ಫಲಕ್’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಹೇಗೆ ಕೆಲಸ ಮಾಡುತ್ತಿದ್ದರು. 1998ರಲ್ಲಿ ತೆರೆಕಂಡ ‘ಫಲಕ್’ ಸಿನಿಮಾದ ಶೂಟಿಂಗ್ ವೇಳೆ ನನ್ನ ಬಟ್ಟೆ, ಬೂಟುಗಳನ್ನು ನೋಡಿಕೊಳ್ಳುತ್ತಿದ್ದ ಸಲ್ಮಾನ್​ ಮೊದಲು ಮಾಡೆಲ್ ಆಗಿ, ನಂತರ ಸಹಾಯಕ ನಿರ್ದೇಶಕನಾಗಿ ನನಗೆ ಗೊತ್ತಿದೆ.

    jackie Khan

    ಇದನ್ನೂ ಓದಿ: ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ “ವಿಜಯವಾಣಿ” ವರದಿ; ಗ್ಯಾರಂಟಿಗಳ ನೈಜಸ್ಥಿತಿ ಬಿಡಿಸಿಟ್ಟ ಮಾಜಿ ಪ್ರಧಾನಿ

    ನನ್ನ ಹಾಗೂ ಸಲ್ಮಾನ್​ ನಡುವಿನ ಸ್ನೇಹ ಬೇರೆಯದ್ದೆ ಎಂದು ಹೇಳಬಹುದಾಗಿದೆ . ಏಕೆಂದರೆ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಚಿತ್ರಗಳನ್ನು ನಾನು ನಿರ್ಮಾಪಕರಿಗೆ ತೋರಿಸುತ್ತಿದ್ದೆ. ಅಂತಿಮವಾಗಿ ಕೆ.ಸಿ ಬೊಕಾಡಿಯಾ ಅವರ ಸೋದರಮಾವ ಮೈನೇ ಪ್ಯಾರ್ ಕಿಯಾ ಚಿತ್ರದ ಮೂಲಕ ಸಲ್ಮಾನ್​ ಖಾನ್​ ಅವರಿಗೆ ಬ್ರೇಕ್​ ನೀಡಿದ್ದರು. ಆದರೆ, ನಾನು ಈ ವಿಚಾರವನ್ನು ಇಲ್ಲಯವರೆಗೂ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ.

    ಸಲ್ಮಾನ್ ಖಾನ್ ತಮ್ಮ ನಟನಾ ವೃತ್ತಿಯನ್ನು ‘ಬಿವಿ ಹೋ ತೋ ಐಸಿ’ ಚಿತ್ರದ ಮೂಲಕ ಪ್ರಾರಂಭಿಸಿದರು, ಇದರಲ್ಲಿ ಅವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು, ಆದರೆ ನಾಯಕ ನಟನಾಗಿ ಅವರ ಚಿತ್ರ ‘ಮೈನೆ ಪ್ಯಾರ್ ಕಿಯಾ’ ಬ್ಲಾಕ್ಬಸ್ಟರ್ ಆಗಿತ್ತು, ನಂತರ ಅವರು ಹಿಂತಿರುಗಿ ನೋಡಲಿಲ್ಲ.

    ಸಲ್ಮಾನ್ ಖಾನ್ ಅವರು ‘ಹಮ್ ಆಪ್ಕೆ ಹೈ ಕೌನ್’, ‘ಸುಲ್ತಾನ್’, ‘ಬಜರಂಗಿ ಭಾಯಿಜಾನ್’, ‘ಕಿಕ್’, ಮತ್ತು ‘ಏಕ್ ಥಾ ಟೈಗರ್’ ನಂತಹ ಅನೇಕ ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, 2016 ರ ‘ಸುಲ್ತಾನ್’ ಚಿತ್ರಕ್ಕಾಗಿ 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎಂದು ಸುದ್ದಿಯಾಗಿತ್ತು ಮತ್ತು ಭಾರತ ಚಿತ್ರರಂಗದಲ್ಲೇ ಮೊದಲ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸಲ್ಮಾನ್​ ಖಾನ್​ ಒಟ್ಟು ಆಸ್ತಿ ಮೌಲ್ಯ 2900 ಸಾವಿರ ಕೋಟಿ ರೂ. ಎಂದು ತಿಳಿದು ಬಂದಿದ್ದು, ಶ್ರೀಮಂತ ನಟರ ಪೈಕಿ ಇವರು ಕೂಡ ಒಬ್ಬರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts