More

    ರೋಹಿತ್​ ಬ್ಯಾಟಿಂಗ್​ನತ್ತ ಹೆಚ್ಚು ಗಮನ ಹರಿಸಲಿ ಎಂಬ ಕಾರಣಕ್ಕೆ ನಾಯಕತ್ವದಿಂದ ಕೊಕ್​: ಮಾರ್ಕ್​ ಬೌಷರ್​

    ಮುಂಬೈ: ಮುಂಬೈ ಇಂಡಿಯನ್ಸ್​ ತಂಡದ ಯಶಸ್ವಿ ನಾಯಕನಾಗಿದ್ದರೂ ಈ ಬಾರಿಯ ಐಪಿಎಲ್​ ಆವೃತ್ತಿಯ ಆರಂಭಕ್ಕೂ ಮುನ್ನ ನಾಯಕತ್ವದಿಂದ ಕೆಳಗಿಳಿಸುವ ಮೂಲಕ ರೋಹಿತ್​ ಶರ್ಮಾಗೆ ಫ್ರಾಂಚೈಸಿ ಶಾಕ್​ ನೀಡಿದೆ. ಈ ಸುದ್ದಿ ಹಳೆಯದಾದರೂ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ಮುಂಬೈ ತಂಡದ ಕೋಚ್​ ಮಾರ್ಕ್ ಬೌಷರ್ ಆಡಿರುವ ಮಾತುಗಳು.

    ಖಾಸಗಿ ಸುದ್ದಿ ವಾಹಿನಿ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಾರ್ಕ್​ ಬೌಷರ್​ ರೋಹಿತ್​ ಹೆಚ್ಚು ರನ್​ ಗಳಿಸುವತ್ತ ಗಮನ ಹರಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಕಳೆದೆರಡು ಆವೃತ್ತಿಗಳಲ್ಲಿ ರೋಹಿತ್​ ಶರ್ಮಾ ಹೆಚ್ಚು ರನ್​ ಗಳಿಸದ ಕಾರಣ ಅವರನ್ನು ನಾಯಕತ್ವದಿಂದ ಫ್ರಾಂಚೈಸಿ ತೆಗೆದುಹಾಕಿದ್ದು, ಮುಂಬೈ ಇಂಡಿಯನ್ಸ್​ಗೆ ಇದೊಂದು ಕಠಿಣ ನಿರ್ಧಾರವಾಗಿತ್ತು. ಹಾರ್ದಿಕ್​ ಅವರನ್ನು ತಂಡಕ್ಕೆ ವಾಪಸ್​ ಕರೆತರಲು ನಮಗೆ ಉತ್ತಮ ಅವಕಾಶ ದೊರಕಿತ್ತು ಅದನ್ನು ಉಪಯೋಗಿಸಿಕೊಂಡಿದ್ದೇವೆ.

    ಇದನ್ನೂ ಓದಿ: ಆಟವಾಡುತ್ತ ಜೀವಂತ ಮೀನು ನುಂಗಿದ 11 ತಿಂಗಳ ಮಗು; ಶಸ್ತ್ರಚಿಕಿತ್ಸೆ ಮೂಲಕ ಪ್ರಾಣ ಉಳಿಸಿದ ವೈದ್ಯರು

    ನಾವು ಇನ್ನೂ ಅವರನ್ನು (ರೋಹಿತ್) ಒಬ್ಬ ಆಟಗಾರನಾಗಿ ಬಯಸುತ್ತೇವೆ, ಏಕೆಂದರೆ ಉತ್ತಮ ಮೌಲ್ಯವನ್ನು ಹೊಂದಿದ್ದಾರೆಂದು ನಮಗೆ ತಿಳಿದಿದೆ ನಾಯಕನೆಂಬ ಪ್ರಚಾರವಿಲ್ಲದೆ ಅವರು ಬ್ಯಾಟಿಂಗ್​ ಮಾಡುವುದನ್ನು ನೋಡಿ ಆನಂದಿಸುತ್ತೇವೆ. ಎರಡು ಸೀಸನ್‌ಗಳಲ್ಲಿ ನಾಯಕನಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿರುವ ರೋಹಿತ್​ ಶರ್ಮಾ ಅವರ ಕೊನೆಯ ಹಂತಕ್ಕೆ ಹೆಜ್ಜೆ ಹಾಕಲು ಇದು ಒಂದು ಅವಕಾಶ ಎಂದು ನಾವು ಭಾವಿಸಿದ್ದೇವೆ.

    ಇದು ಸಂಪೂರ್ಣವಾಗಿ ಕ್ರೀಡಾ ನಿರ್ಧಾರವಾಗಿದೆ. ನನ್ನ ಮಟ್ಟಿಗೆ, ಇದು ಕೇವಲ ಪರಿವರ್ತನೆಯ ಹಂತವಾಗಿದೆ, ಅನೇಕ ಜನರು ಭಾವನಾತ್ಮಕರಾಗಿದ್ದಾರೆ ಮತ್ತು ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ. ನಿರ್ಧಾರವು ಒಬ್ಬ ಆಟಗಾರನಾಗಿ, ಒಬ್ಬ ವ್ಯಕ್ತಿಯಾಗಿ ರೋಹಿತ್ ಅವರಿಂದ ಅತ್ಯುತ್ತಮ ಆಟವನ್ನು ಹೊರತರಲಿದೆ ಎಂದು ನಾನು ಭಾವಿಸುತ್ತೇನೆ. ಅವರು ಮೈದಾನಕ್ಕಿಳಿದು ಆಟವನ್ನು ಆನಂದಿಸಲು ಮತ್ತು ಉತ್ತಮ ರನ್‌ ಗಳಿಸಲು ಬಿಡಿ  ಎಂದು ಹೇಳಿದ್ದಾರೆ.

    ರೋಹಿತ್​ನಿಂದ ನಾನು ಕಲಿತ ವಿಷಯವೆಂದರೆ ಅವರು ಅದ್ಭುತ ವ್ಯಕ್ತಿ ಮತ್ತು ಅವರು ಯುಗಗಳಿಂದಲೂ ನಾಯಕರಾಗಿದ್ದಾರೆ ಮತ್ತು ಅವರು ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟೀಂ ಇಂಡಿಯಾದ ನಾಯಕತ್ವವನ್ನು ವಹಿಸಿರುವ ಅವರು ಹೆಚ್ಚು ಕಾರ್ಯಗತರಾಗಿರುತ್ತಾರೆ ಎಂದು ಮುಂಬೈ ಇಂಡಿಯನ್ಸ್​ ತಂಡದ ಮುಖ್ಯ ಕೋಚ್​​ ಮಾರ್ಕ್​ ಬೌಷರ್​ ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts