More

    ಯುಪಿಎ ಬಿಟ್ಟುಹೋದ ಸವಾಲುಗಳನ್ನು ಎನ್​ಡಿಎ ಮೆಟ್ಟಿನಿಂತಿದೆ; ಶ್ವೇತಪತ್ರ ಮಂಡಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಹಾಲಿ ನಡೆಯುತ್ತಿರುವ ಬಜೆಟ್​ ಅಧಿವೇಶನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಲೋಕಸಭೆಯಲ್ಲಿ 59 ಪುಟಗಳ ಶ್ವೇತಪತ್ರವನ್ನು ಮಂಡಿಸಿದ್ದಾರೆ. ಹಿಂದಿನ ಸರ್ಕಾರ ಸೃಷ್ಟಿಸಿದ ಸವಾಲುಗಳನ್ನು ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಶ್ವೇತಪತ್ರದಲ್ಲಿ ಉಲ್ಲೇಖಿಸಲಾಗಿದೆ.

    59 ಪುಟಗಳ ಶ್ವೇತಪತ್ರ ಮಂಡಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್​ 2004ರಿಂದ 2014ರವರೆಗೆ 10 ವರ್ಷ ಯುಪಿಎ ಅಧಿಕಾರದಲ್ಲಿತ್ತು. ಇದಾದ ನಂತರ 2014ರಿಂದ 2024, ಇಲ್ಲಿವರೆಗೆ 10 ವರ್ಷ ಎನ್​ಡಿಎ ಆಡಳಿತ ಇದೆ. ಈ ಎರಡೂ ಆಡಳಿತದಲ್ಲಿ ಆರ್ಥಿಕ ನಿರ್ವಹಣೆ ಹೇಗಿತ್ತು, ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂದು ವಿವರಿಸಿ ಸರ್ಕಾರ ಶ್ವೇತಪತ್ರ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

    2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಆ ಸಂದರ್ಭದಲ್ಲಿ ದೇಶದ ಆರ್ಥಿಕತೆಯು ತೀರಾ ದುರ್ಬಲ ಸ್ಥಿತಿಯಲ್ಲಿತ್ತು. ಸಾರ್ವಜನಿಕ ಹಣಕಾಸು ಸಂಸ್ಥೆಗಳು ಶೋಚನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದವು. ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಯುಪಿಎ ಆಡಳಿತದ ಬಹಳಷ್ಟು ವೈಫಲ್ಯಗಳನ್ನು ಸವಾಲಾಗಿ ಸ್ವೀಕರಿಸಿದ ನಂತರ ಕೈಗೊಂಡ ಕಠಿಣ ನಿರ್ಧಾರಗಳಿಂದಾಗಿ ಕಳೆದ ಒಂದು ದಶಕದಲ್ಲಿ ದೇಶವನ್ನು ಎನ್‌ಡಿಎ ಸಾಧನೆಯ ಹಾದಿಯಲ್ಲಿ ಕೊಂಡೊಯ್ಯುತ್ತಿದೆ.

    ಇದನ್ನೂ ಓದಿ: ನಾನು ಮುಂಬೈ ಇಂಡಿಯನ್ಸ್ ಬಗ್ಗೆ ಚಿಂತಿತನಾಗಿದ್ದೇನೆ; ಹಾರ್ದಿಕ್​ ನಾಯಕತ್ವದ ಬಗ್ಗೆ ಆತಂಕ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ

    ಸಂಕಷ್ಟದ ಸ್ಥಿತಿಯಲ್ಲಿ, ಹಂತ ಹಂತವಾಗಿ ದೇಶದ ಆರ್ಥಿಕತೆ ಹಾಗೂ ಆಡಳಿತ ಯಂತ್ರವನ್ನು ಉತ್ತಮ ಸ್ಥಿತಿಗೆ ತರಲು ತೀವ್ರವಾಗಿ ಪ್ರಯಾಸಪಡಲಾಗಿದೆ. ಆರ್ಥಿಕ ಚುಟವಟಿಕೆ ಸುಗಮಗೊಳಿಸಲು ಯುಪಿಎ ಸರ್ಕಾರ ಸಂಪೂರ್ಣ ವಿಫಲವಾಗಿತ್ತು. ಯುಪಿಎ ಸರ್ಕಾರವು ಹೆಚ್ಚು ಸುಧಾರಣೆಗಳಿಗೆ ಸಿದ್ಧವಾದ ಆರೋಗ್ಯಕರ ಆರ್ಥಿಕತೆಯನ್ನು ಆನುವಂಶಿಕವಾಗಿ ಪಡೆದಿದೆ, ಆದರೆ ತನ್ನ ಹತ್ತು ವರ್ಷಗಳಲ್ಲಿ ಅದನ್ನು ನಿಷ್ಕ್ರಿಯಗೊಳಿಸಿದೆ. 2004 ರಲ್ಲಿ, ಯುಪಿಎ ಸರ್ಕಾರವು ತನ್ನ ಅವಧಿಯನ್ನು ಪ್ರಾರಂಭಿಸಿದಾಗ, ಆರ್ಥಿಕತೆಯು 8 ಪ್ರತಿಶತದಷ್ಟು ಬೆಳವಣಿಗೆಯನ್ನು ಹೊಂದಿತ್ತು.

    ರಾಜಕೀಯವಾಗಿ ಮತ್ತು ನೀತಿ ನಿರೂಪಣೆಯಲ್ಲಿ ಸದೃಢತೆ ತರುವ ಮೂಲಕ ಮೋದಿ ಸರ್ಕಾರವು, ಉತ್ತಮ ಆರ್ಥಿಕತೆಗಾಗಿ ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಂಡಿತು. ನಮ್ಮ ಸರ್ಕಾರವು ಉತ್ತಮ ಆರ್ಥಿಕ ಅಡಿಪಾಯದ ಜತೆಗೆ ಸದೃಢತೆಯನ್ನು ತಂದಿದೆ. ಕಳೆದ 10 ವರ್ಷಗಳನ್ನು ಗಮನಿಸಿದರೆ, ಹಿಂದಿನ ಸರ್ಕಾರ ಸೃಷ್ಟಿಸಿದ ಸವಾಲುಗಳನ್ನು ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾಗಿದ್ದೇವೆ.

    ಎನ್​​ಡಿಎ ಸರ್ಕಾರದ ಆರ್ಥಿಕ ನಿರ್ವಹಣೆ ಹಾಗೂ ಉತ್ತಮ ಆಡಳಿತದಿಂದಾಗಿ 2014ರ ಹಿಂದಿನ ಯುಗದಲ್ಲಿನ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲಲಾಗಿದೆ. 2047ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕಾಗಿರುವುದಿಂದ ಅನೇಕ ಕ್ರಮ ಕೈಗೊಳ್ಳಲಾಗಿದೆ. ಯುದ್ಧ ವಿಮಾನಗಳು, ಜಲಾಂತರ್ಗಾಮಿ ನೌಕೆಗಳು ಸೇರಿದಂತೆ ವಿವಿಧ ಉಪಕರಣಗಳ ನವೀಕರಣ ಮತ್ತು ಸ್ವಾಧೀನಕ್ಕೆ ಯುಪಿಎ ಸರ್ಕಾರದಿಂದ ವಿಳಂಬವಾಗಿರುವುದಾಗಿ ನಿರ್ಮಲಾ ಸೀತಾರಾಮನ್​ ಮಂಡಿಸಿರುವ ಶ್ವೇತಪತ್ರದಲ್ಲಿ ಉ್ಲಲೇಖಿಸಲಾಗಿದೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts