More

    ನಾನು ಮುಂಬೈ ಇಂಡಿಯನ್ಸ್ ಬಗ್ಗೆ ಚಿಂತಿತನಾಗಿದ್ದೇನೆ; ಹಾರ್ದಿಕ್​ ನಾಯಕತ್ವದ ಬಗ್ಗೆ ಆತಂಕ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ

    ಮುಂಬೈ: 17ನೇ ಆವೃತ್ತಿ ಐಪಿಎಲ್​ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಒಂದಿಲ್ಲೊಂದು ಕಾರಣಕ್ಕೆ ಜನರ ಗಮನ ಸೆಳೆಯುತ್ತಿದ್ದು, ಟೂರ್ನಿ ಆರಂಭಕ್ಕೂ ಮುನ್ನ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಐದು ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ ರೋಹಿತ್​ ಶರ್ಮಾರನ್ನು ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯಗೆ ತಂಡದ ಸಾರಥ್ಯವನ್ನು ವಹಿಸಿತ್ತು. ಫ್ರಾಂಚೈಸಿಯ ಈ ನಿರ್ಧಾರಕ್ಕೆ ಹಿಟ್​ಮ್ಯಾನ್​ ಅಭಿಮಾನಿಗಳು ಬಹಿರಂಗವಾಗಿ ಕಿಡಿಕಾರಿದ್ದರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅನ್​ಫಾಲೋ ಮಾಡಿದ್ದರು.

    ಈ ವಿಚಾರ ಹಳೆಯದಾದರೂ ಇದರ ಬಗ್ಗೆ ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರರೊಬ್ಬರು ಮಾತನಾಡಿದ್ದಾರೆ. ಮುಂಬೈ ಇಂಡಿಯನ್ಸ್​ ನಾಯಕನಾಗಿ ಹಾರ್ದಿಕ್​ ಪಾಂಡ್ಯ ಎದುರಿರುವ ಸವಾಲುಗಳು ಮತ್ತು ರೋಹಿತ್​ ಶರ್ಮಾ ಹಾರ್ದಿಕ್​ ನಾಯಕತ್ವದಡಿ ಆಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

    ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಆಕಾಶ್​ ಚೋಪ್ರಾ ಈ ಬಗ್ಗೆ ಮಾತನಾಡಿದ್ದು, ಮುಂಬೈ ಇಂಡಿಯನ್ಸ್​ ಮುಖ್ಯ ಕೋಚ್​ ಮಾರ್ಕ್​ ಬೌಷರ್​ ಹೇಳಿಕೆ, ರಿತಿಕಾ ಕಮೆಂಟ್​ ಇವೆಲ್ಲವೂ ತಂಡದಲ್ಲಿ ಆಂತರಿಕ ಭಿನ್ನಾಭಿಪ್ರಾಯವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ರಜೆಗೆ ಬಂದಿದ್ದ ಯೋಧನ ಮೇಲೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ; ಹೈಕೋರ್ಟ್​ ಮೆಟ್ಟಿಲೇರಿತು ಪ್ರಕರಣ

    ಇತ್ತೀಚಿಗೆ ನಾನು ಮಾರ್ಕ್​ ಬೌಷರ್​ ಅವರ ಸಂದರ್ಶನವನ್ನು ನೋಡುತ್ತಿದ್ದೆ. ಅಲ್ಲಿ ರೋಹಿತ್​ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿದ ಬಗ್ಗೆ ಕೇಳಲಾಯಿತು. ಅದರ ಬಗ್ಗೆ ತಮ್ಮದೇ ಶೈಲಿಯಲ್ಲಿ ಬೌಷರ್​ ಸ್ಪಷ್ಟನೆಯನ್ನು ನೀಡುತ್ತಾರೆ. ಆದರೆ, ಕ್ಷಣಾರ್ಧದಲ್ಲೇ ರಿತಿಕಾ ಮಾಡಿದ ಕಮೆಂಟ್​ ಎಲ್ಲೆಡೆ ವೈರಲ್​ ಆಯಿತು. ರೋಹಿತ್​ ಪತ್ನಿ ಮಾಡಿರುವ ಕಮೆಂಟ್​ ಆದರಿಂದ ಇದು ವೈರಲ್​ ಆಗಬೇಕಿತ್ತು. ಆದರೆ, ಈ ಹೇಳಿಕೆ ಹಲವು ಆಸ್ಪದಗಳಿಗೆ ದಾರಿ ಮಾಡಿ ಕೊಡುವ ಸಾಧ್ಯತೆ ಇದೆ ಎಂದಿದ್ದಾರೆ.

    ಆದರೆ, ಈಗ ಆತಂಕ ಪಡಲು ಕಾರಣವೇನೆಂದರೆ ಐಪಿಎಲ್​ ಇತಿಹಾಸದಲ್ಲಿ ಉತ್ತಮ ರೆಕಾರ್ಡ್​ ಹೊಂದಿರುವ ಮುಂಬೈ ಇಂಡಿಯನ್ಸ್​ ಅನ್ನು ಮುನ್ನಡೆಸಲು ಹಾರ್ದಿಕ್​ ಪಾಂಡ್ಯ ಅವರ ಮುಂದೆ ದೊಡ್ಡ ಸವಾಲಿದೆ. ಒಂದು ವೇಳೆ ಹಾರ್ದಿಕ್​ ಪಾಂಡ್ಯ ಒಟ್ಟಾಗಿ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದೆ ಈಗ ಪ್ರಶ್ನೆಯಾಗಿ ಕುಳಿತಿದೆ ಎಂದು ಆಕಾಶ್​ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts