More

    ಐಪಿಎಲ್​ನಲ್ಲಿ ಮತ್ತೊಂದು ವಿವಾದಾತ್ಮಕ ತೀರ್ಪು; ಔಟ್​ ಇದ್ದರೂ ನಾಟೌಟ್​ ಎಂದ ಅಂಪೈರ್

    ಹೈದರಾಬಾದ್: ಇಲ್ಲಿನ ರಾಜೀವ್​ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ 50ನೇ ಐಪಿಎಲ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಮಡವು ರಾಜಸ್ಥಾನ ರಾಯಲ್ಸ್​ ವಿರುದ್ಧ 1 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಬಾರಿಯ ಐಪಿಎಲ್​ನಲ್ಲಿ ಅಂಪೈರಿಂಗ್​ ಹಾಗೂ ಟಾಸ್​ ವಿವಾದ ಸಾಕಷ್ಟು ಸದ್ದು ಮಾಡುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಮತ್ತೊಂದು ಘಟನೆ ನಡೆದಿದೆ.

    ಘಟನೆಯ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ರನ್​ಔಟ್​ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರ್​ ಸಂಗಕ್ಕರ ಹಾಗೂ ಅಂಪೈರ್​ಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

    ಇದನ್ನೂ ಓದಿ: ಸಂತ್ರಸ್ತೆ ನಾಪತ್ತೆ ಪ್ರಕರಣ; ರೇವಣ್ಣಗೆ ಮತ್ತೊಂದು ಸಂಕಷ್ಟ, ಓರ್ವನನ್ನು ವಶಕ್ಕೆ ಪಡೆದ ಪೊಲೀಸರು

    ವೈರಲ್​ ಆಗಿರುವ ಫೋಟೋ-ವಿಡಿಯೋ ನೋಡುವುದಾದರೆ 15ನೇ ಓವರ್​ನಲ್ಲಿ ಬ್ಯಾಟಿಂಗ್​ ಮಾಡುವ ವೇಳೆ ಆವೇಶ್​ ಖಾನ್​ ಎಸೆದ ಚೆಂಡನ್ನು ಎಸ್​ಆರ್​ಎಚ್​ ಬ್ಯಾಟ್ಸ್​ಮನ್​ ಟ್ರಾವಿಸ್​​ ಹೆಡ್​ ಮುನ್ನುಗಿ ಬಾರಿಸಲು ಹೋಗಿ ವಿಫಲರಾಗುತ್ತಾರೆ. ಈ ವೇಳೆ ಬ್ಯಾಟ್ಸ್​ಮನ್​ ಕ್ರೀಸ್​ ಬಿಟ್ಟಿರುವುದನ್ನು ಗಮನಿಸಿದ ವಿಕೆಟ್​ ಕೀಪರ್​ ಸಂಜು ಸ್ಯಾಮ್ಸನ್​ ಕೂಡಲೇ ಚೆಂಡನ್ನು ವಿಕೆಟ್​ನತ್ತ ಎಸೆಯುತ್ತಾರೆ.

    ಕೂಡಲೇ ಬಾಲ್​​ ವಿಕೆಟ್​ಗೆ ಬೀಳುತ್ತದೆ ಮತ್ತು ರಾಜಸ್ಥಾನ ರಾಯಲ್ಸ್​ ಆಟಗಾರರು ರನ್​​ಔಟ್​ಗಾಗಿ ಅಂಪೈರ್ ಬಳಿ ಮನವಿ ಮಾಡುತ್ತಾರೆ. ಇದನ್ನು ಪರಿಶೀಲಿಸಿದ ಮೂರನೇ ಅಂಪೈರ್​ ನಾಟೌಟ್​ ಎಂದು ತೀರ್ಪು ನೀಡುತ್ತಾರೆ. ಇದಕ್ಕೆ ಒಪ್ಪದ ಆಟಗಾರರು ಹಾಗೂ ಕೋಚ್​ ಕುಮಾರ್​ ಸಂಗಕ್ಕರ ಅಂಪಯರ್​ ಬಳಿ ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡುತ್ತಾರೆ. ಆದರೆ, ಇದಕ್ಕೆ ಅಂಪೈರ್​ ಒಪ್ಪುವುದಿಲ್ಲ. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಅಂಪೈರ್​ ನಡೆಗೆ ಕಿಡಿಕಾರಿದ್ದು, ಕೂಡಲೇ ಅವರನ್ನು ಕೆಲಸದಿಂದ ವಜಾ ಮಾಡುವಂತೆ ಆಗ್ರಹಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts