Marriage Websites : ಇಂದು ನಮ್ಮ ದೇಶದಲ್ಲಿ ಮದುವೆಗಾಗಿ ಮ್ಯಾಟ್ರಿಮೋನಿಯಲ್ ವೆಬ್ಸೈಟ್ಗಳನ್ನು ಅವಲಂಬಿಸಿರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಅನೇಕ ಮಂದಿ ಈ ವೆಬ್‌ಸೈಟ್‌ಗಳ ಮೂಲಕ ತಮಗೆ ಸೂಕ್ತವಾದ ಜೀವನ ಸಂಗಾತಿಯನ್ನು ಕಂಡುಕೊಳ್ಳುವುದರೊಂದಿಗೆ ಹೊಸ ಜೀವನವನ್ನು ಆರಂಭಿಸುತ್ತಿದ್ದಾರೆ. ಈ ವೆಬ್‌ಸೈಟ್‌ಗಳ ಒಂದು ವಿಶೇಷ ಏನೆಂದರೆ, ನಿಶ್ಚಿತ ವಿವಾಹಗಳಲ್ಲಿಯೂ ಸಹ ವಧು-ವರರು ಪರಸ್ಪರ ಮುಕ್ತವಾಗಿ ಮಾತನಾಡಬಹುದು ಮತ್ತು ತಮ್ಮ ಇಷ್ಟಾನಿಷ್ಟಗಳನ್ನು ಹಂಚಿಕೊಳ್ಳಬಹುದು.

ಆದರೆ, ಯಾವುದೇ ವಲಯ ಅಥವಾ ಕ್ಷೇತ್ರವನ್ನಾಗಲಿ ತಮ್ಮ ವಂಚನೆಯ ಸಂಭಾವ್ಯ ಮೂಲವನ್ನಾಗಿ ಪರಿವರ್ತಿಸುತ್ತಿರುವ ಸೈಬರ್ ವಂಚಕರ ಗುಂಪು ಇದೀಗ ಮ್ಯಾಟ್ರಿಮೋನಿಯಲ್ ವೆಬ್ಸೈಟ್ಗಳನ್ನು ತಪ್ಪು ರೀತಿಯಲ್ಲಿ ಬಳಸುತ್ತಿದೆ ಎಂದು ಕೇರಳ ಪೊಲೀಸರು ಎಚ್ಚರಿಸಿದ್ದಾರೆ. ಅಲ್ಲದೆ, ಅಂತಹ ವಂಚಕರೊಂದಿಗೆ ಜನರು ಎಚ್ಚರಿಕೆಯಿಂದ ಸಂವಹನ ನಡೆಸುವಂತೆ ಕರೆ ನೀಡಿದ್ದಾರೆ.
ಒಂದು ಸೈಬರ್ ವಂಚಕರ ಗುಂಪು ಈ ಸೈಟ್ಗಳ ಮೂಲಕ ಹಣಕಾಸಿನ ವಂಚನೆಗಳನ್ನು ಎಸಗುತ್ತಿವೆ. ನಿಮಗೆ ಯಾವುದೇ ಸಂದೇಹಗಳಿದ್ದರೆ, ನೀವು ಪೊಲೀಸರ ಸಹಾಯವನ್ನು ಪಡೆಯಬೇಕು ಎಂದು ಕೇರಳ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಟ್ರಂಪ್ಗೆ ಬ್ಯೂಟಿಫುಲ್; ಭಾರತೀಯರಿಗೆ ಕಂಟಕ; ತಲೆನೋವು ತಂದ ಶೇಕಡ 5 ಹೊಸ ತೆರಿಗೆ
ಸಾಮಾಜಿಕ ಜಾಲತಾಣದಂತೆಯೇ ಈ ಮ್ಯಾಟ್ರಿಮೋನಿಯಲ್ ವೆಬ್ಸೈಟ್ಗಳಲ್ಲೂ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವ ಮೂಲಕ ಮೊದಲು ಸಂಬಂಧ ಸ್ಥಾಪಿಸಲು ಯತ್ನಿಸುತ್ತಾರೆ. ಅದು ಯಶಸ್ವಿಯಾದ ನಂತರ ಮದುವೆ ಪ್ರಸ್ತಾಪಗಳು ಮತ್ತು ವಿವಾಹ ಸಮಾಲೋಚನೆಯಂತಹ ವಿಷಯಗಳಿಗೆ ಮುಂದಾಗುತ್ತಾರೆ. ಇದಾದ ನಂತರ, ಅವರು ಹಣಕಾಸಿನ ಅಗತ್ಯಗಳ ನೆಪದಲ್ಲಿ ಹಣವನ್ನು ಕೇಳುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ತುರ್ತು ಸಹಾಯದ ಹೆಸರಿನಲ್ಲಿ ಹಣವನ್ನು ಕೇಳಲಾಗುತ್ತದೆ. ಹಣವನ್ನು ಪಾವತಿಸಿದ ನಂತರ, ತಮ್ಮ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತಾರೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.
ಆದ್ದರಿಂದ, ನಿಮಗೆ ನೇರವಾಗಿ ಪರಿಚಯವಿಲ್ಲದ ಯಾರಿಗಾದರೂ ಹಣ ನೀಡುವ ಮೂಲಕ ವಂಚನೆಗೆ ಬಲಿಯಾಗದಂತೆ ಕೇರಳ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಇದು ಕೇವಲ ಕೇರಳ ರಾಜ್ಯದಲ್ಲಿ ಮಾತ್ರವಲ್ಲ ಎಲ್ಲ ರಾಜ್ಯಗಳಲ್ಲೂ ಈ ಸೈಬರ್ ವಂಚಕರ ಜಾಲವಿದೆ. ಹೀಗಾಗಿ, ಇಂತಹ ವಂಚಕರು ಕಂಡುಬಂದಲ್ಲಿ ಸ್ಥಳೀಯ ಸೈಬರ್ ಪೊಲೀಸರನ್ನು ಸಂಪರ್ಕಿಸುವಂತೆ ಕರೆ ನೀಡಲಾಗಿದೆ. (ಏಜೆನ್ಸೀಸ್)
ನಾನು ಬಲವಂತ ಮಾಡಿಲ್ಲ… ಅಳಿಯ ರವಿ ಮೋಹನ್ ಆರೋಪಕ್ಕೆ ಆರತಿ ತಾಯಿ ಸುಜಾತಾ ಸ್ಪಷ್ಟನೆ! Ravi Mohan