Street Juices : ಅನೇಕ ಮಂದಿ ವಿವಿಧ ರೀತಿಯ ಹಣ್ಣಿನ ಜ್ಯೂಸ್‌ಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ಬೇಸಿಗೆಯಲ್ಲಿ ಈ ಜ್ಯೂಸ್ಗಳಿಗೆ ಭಾರಿ ಬೇಡಿಕೆ ಇರುತ್ತದೆ. ಬೇಸಿಗೆಯ ಶಾಖವನ್ನು ನಿಯಂತ್ರಿಸಿ, ತಮ್ಮ ದೇಹವನ್ನು ತಂಪಾಗಿರಿಸಲು ಅನೇಕ ಮಂದಿ ತಂಪಾದ ಹಣ್ಣಿನ ಜ್ಯೂಸ್ ಮೊರೆ ಹೋಗುತ್ತಾರೆ. ಹೀಗಾಗಿಯೇ ಇಂದು ಬೀದಿ ಬೀದಿಗಳಲ್ಲಿ ಜ್ಯೂಸ್ ಅಂಗಡಿಗಳನ್ನು ತೆರೆಯಲಾಗಿದೆ. ಬಹಳ ಕಡಿಮೆ ಬೆಲೆಯಲ್ಲಿಯೂ ಜ್ಯೂಸ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ, ಕೆಲವು ವಿಚಾರಗಳನ್ನು ಗಮನಿಸದೇ ಬೀದಿ ಬದಿಯಲ್ಲಿ ನೀವು ಸವಿಯುತ್ತಿರುವ ಜ್ಯೂಸ್ ತುಂಬಾ ಅಪಾಯಕಾರಿಯಾಗಿಯೂ ಇರಬಹುದು ಎಚ್ಚರ!

ವಾಸ್ತವವಾಗಿ, ಹೊರಗಡೆ ತಯಾರಿಸುವಂತಹ ತಂಪು ಪಾನೀಯಗಳಿಗೆ ಸೇರಿಸುವ ಐಸ್ ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ. ಈ ಜ್ಯೂಸ್‌ಗಳು ನಿಮ್ಮ ದೇಹವನ್ನು ಸ್ವಲ್ಪ ಮಟ್ಟಿಗೆ ತಂಪಾಗಿಸಿದರೂ ಅವು ದೀರ್ಘಕಾಲೀನ ಹಾನಿಯನ್ನುಂಟುಮಾಡುತ್ತವೆ. ಐಸ್ ಏಕೆ ಹಾನಿಕಾರಕ? ಐಸ್‌ನೊಂದಿಗೆ ಕೂಲ್ ಡ್ರಿಂಕ್ಸ್ ಕುಡಿಯುವುದರಿಂದಾಗುವ ಹಾನಿಗಳೇನು? ಈ ಕುರಿತು ಪುಣೆ ಮೂಲದ ಡಾ. ರೆಬೆಕ್ಕಾ ಪಿಂಟೊ ಎಂಬುವರು ತಮ್ಮ ಇನ್‌ಸ್ಟಾಗ್ರಾಂ ಪೇಜ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ರೆಬೆಕ್ಕಾ ಪಿಂಟೊ ಪ್ರಕಾರ, ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿದ ಐಸ್ ಆರೋಗ್ಯಕ್ಕೆ ಹಾನಿಕಾರಕ. ಏಕೆಂದರೆ, ಇದು ಬಹಳಷ್ಟು ಹಾನಿಕಾರಕ ಬ್ಯಾಕ್ಟೀರಿಯಾಗಳು, ರೋಗಕಾರಕಗಳು ಮತ್ತು ಮಾಲಿನ್ಯಕಾರಕಗಳನ್ನು ಹೊಂದಿರುತ್ತದೆ. ಈ ಐಸ್ ತಯಾರಿಸುವ ಸ್ಥಳವು ನೈರ್ಮಲ್ಯದಿಂದ ಕೂಡಿಲ್ಲ. ಇದನ್ನು ನೆಲದ ಮೇಲೆ ಸುರಿಯಲಾಗುತ್ತದೆ. ಐಸ್ ತಯಾರಿಸಲು ಟ್ಯಾಪ್ ನೀರನ್ನು ಬಳಸಲಾಗುತ್ತದೆ. ಆ ನೀರನ್ನು ಫಿಲ್ಟರ್ ಮಾಡಲಾಗುವುದಿಲ್ಲ. ಇದರಲ್ಲಿ ಬಹಳಷ್ಟು ಬ್ಯಾಕ್ಟೀರಿಯಾಗಳಿವೆ. ಸಂಸ್ಕರಿಸದ ನೀರಿನಿಂದ ತಯಾರಿಸಿದ ಕಚ್ಚಾ ಐಸ್, ಬ್ಯಾಕ್ಟೀರಿಯಾ ಮತ್ತು ಇ. ಕೋಲಿ ಮತ್ತು ನೊರೊವೈರಸ್‌ನಂತಹ ವೈರಸ್‌ಗಳನ್ನು ಹೊಂದಿರಬಹುದು. ಇವು ಜಠರಗರುಳಿನ ಕಾಯಿಲೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಹೊರಗೆ ಜ್ಯೂಸ್ ಕುಡಿಯುವಾಗ ಐಸ್ ಬಳಸದಿರುವುದು ಉತ್ತಮ ಎಂದು ಹೇಳಿದ್ದಾರೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ಪ್ರಾಮಾಣಿಕತೆ ಅಂದ್ರೆ ಏನು ಅಂತಾನೇ ಗೊತ್ತಿರದ 3 ರಾಶಿ ಚಿಹ್ನೆಗಳಿವು… ಇವರ ಬಗ್ಗೆ ಜಾಗರೂಕರಾಗಿರಿ! Zodiac Signs
ನಾನು ಬಲವಂತ ಮಾಡಿಲ್ಲ… ಅಳಿಯ ರವಿ ಮೋಹನ್ ಆರೋಪಕ್ಕೆ ಆರತಿ ತಾಯಿ ಸುಜಾತಾ ಸ್ಪಷ್ಟನೆ! Ravi Mohan