blank

ಕ್ಯಾಮೆರಾ ಮುಂದೆ ಮೂತ್ರ ವಿಸರ್ಜಿಸಲು ಡೈರೆಕ್ಟರ್​ ಕೇಳಿದಾಗ ಖುಷಿಯಿಂದ ಒಪ್ಪಿದ್ದೆ: ಸ್ಟಾರ್​ ನಟಿಯ ಅಚ್ಚರಿ ಹೇಳಿಕೆ! Janki Bodiwala

Janki Bodiwala

Janki Bodiwala : ಚಿತ್ರೀಕರಣದ ಸಮಯದಲ್ಲಿ ಕ್ಯಾಮೆರಾ ಮುಂದೆ ಮೂತ್ರ ವಿಸರ್ಜನೆ ಮಾಡಬಹುದೇ ಎಂದು ನಿರ್ದೇಶಕರು ನನ್ನ ಬಳಿ ಕೇಳಿದ್ದರು ಅಂತ ಗುಜರಾತ್​​ ಚಿತ್ರರಂಗದ ಸ್ಟಾರ್​ ನಟಿ ಜಾನಕಿ ಬೋಡಿವಾಲಾ ಅವರು ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

blank

ಅಂದಹಾಗೆ, ಜಾನಕಿ ಬೋಡಿವಾಲಾ ಅವರು ಅಜಯ್ ದೇವಗನ್ ನಟನೆಯ ಸೈತಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ವಿಕಾಸ್ ಬಾಲ್ ನಿರ್ದೇಶನದ ಸೈತಾನ್ ಚಿತ್ರವು 2024ರಲ್ಲಿ ಬಿಡುಗಡೆಯಾಯಿತು. ಅಲ್ಲದೆ, ಬಾಕ್ಸ್​ ಆಫೀಸ್​ನಲ್ಲಿ ಭಾರಿ ಯಶಸ್ಸು ಸಹ ಕಂಡಿತು. ಇದರಲ್ಲಿ ಅಜಯ್ ದೇವಗನ್ ಮಾತ್ರವಲ್ಲದೆ, ಮಾಧವನ್, ಜ್ಯೋತಿಕಾ ಮತ್ತು ಜಾನಕಿ ಬೋಡಿವಾಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

 

View this post on Instagram

 

A post shared by Jb (@jankibodiwala)

ಅಂದಹಾಗೆ, ಸೈತಾನ್ ಸಿನಿಮಾ ಗುಜರಾತಿ ಹಾರರ್ ಚಿತ್ರ ವಾಶ್​ನ ರಿಮೇಕ್ ಆಗಿತ್ತು. ಜಾನಕಿ ಬೋಡಿವಾಲಾ ಕೂಡ ಗುಜರಾತಿ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಾಶ್ ಚಿತ್ರೀಕರಣದ ಸಮಯದಲ್ಲಿ ನಡೆದ ಕಹಿ ಘಟನೆಯನ್ನು ಜಾನಕಿ ಇದೀಗ ಬಹಿರಂಗಪಡಿಸಿದ್ದಾರೆ.

‘ವಾಶ್’ ಚಿತ್ರೀಕರಣದ ಸಮಯದಲ್ಲಿ ಜಾನಕಿ ಹಲವಾರು ಕಾರ್ಯಾಗಾರಗಳಿಗೆ ಹಾಜರಾಗಿದ್ದರು. ಸಿನಿಮಾ ಮತ್ತು ಅದರ ದೃಶ್ಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗ ನಿರ್ದೇಶಕರು ಕ್ಯಾಮೆರಾ ಮುಂದೆ ನಿಜವಾಗಿಯೂ ಮೂತ್ರ ವಿಸರ್ಜಿಸಬಹುದೇ ಎಂದು ಕೇಳಿದ್ದರು ಎಂದಿದ್ದಾರೆ.

ಇದನ್ನೂ ಓದಿ: ನಾನು ಬಲವಂತ ಮಾಡಿಲ್ಲ… ಅಳಿಯ ರವಿ ಮೋಹನ್​ ಆರೋಪಕ್ಕೆ ಆರತಿ ತಾಯಿ ಸುಜಾತಾ ಸ್ಪಷ್ಟನೆ! Ravi Mohan

ಫಿಲ್ಮ್‌ಫೇರ್‌ ಮಾಧ್ಯಮದೊಂದಿಗೆ ಮಾತನಾಡಿದ ಜಾನಕಿ ಬೋಡಿವಾಲಾ, ನಾನು ಗುಜರಾತಿ ಆವೃತ್ತಿಯನ್ನು ಮಾಡಿದ್ದೇನೆ. ನಿರ್ದೇಶಕ ಕೃಷ್ಣದೇವ್ ಯಾಜ್ಞಿಕ್ ತುಂಬಾ ಒಳ್ಳೆಯ ವ್ಯಕ್ತಿ. ನಾವು ಚಿತ್ರಕ್ಕಾಗಿ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾಗ, ಅವರು ನನ್ನನ್ನು ಕೇಳಿದರು, ನೀವು ನಿಜವಾಗಿಯೂ ಮೂತ್ರ ವಿಸರ್ಜನೆ ದೃಶ್ಯವನ್ನು ಮಾಡಬಹುದೇ? ಎಂದಿದ್ದರು. ನೀವು ಅದನ್ನು ಮಾಡಿದರೆ, ಅದು ದೊಡ್ಡ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಅದನ್ನು ಕೇಳಿ ನನಗೆ ಸಂತೋಷವಾಯಿತು. ಏಕೆಂದರೆ ಒಬ್ಬ ನಟಿಯಾಗಿ, ನನಗೆ ಅದನ್ನು ಪರದೆಯ ಮೇಲೆ ಮಾಡಲು ಅವಕಾಶ ಸಿಗುತ್ತಿದೆ. ಇದುವರೆಗೆ ಯಾರೂ ಮಾಡದ ನಟನೆ ಅಂತ ಖುಷಿಯಾಯಿತು.

ನಿಜ ಜೀವನದಲ್ಲಿ ಮಾಡಲು ಸಾಧ್ಯವಾಗದ ಕೆಲಸಗಳನ್ನು ಈ ಚಿತ್ರದಲ್ಲಿ ಮಾಡಲು ಸಾಧ್ಯವಾದ ಕಾರಣ ನನಗೆ ಸಂತೋಷವಾಯಿತು. ಮೂತ್ರ ವಿಸರ್ಜಿಸುವ ದೃಶ್ಯ ನನ್ನ ನೆಚ್ಚಿನ ದೃಶ್ಯ ಮತ್ತು ಅದಕ್ಕಾಗಿಯೇ ನಾನು ಚಿತ್ರ ಮಾಡಲು ಒಪ್ಪಿಕೊಂಡೆ. ಮೂತ್ರ ವಿಸರ್ಜಿಸುವ ದೃಶ್ಯವನ್ನು ಚಿತ್ರೀಕರಿಸುವುದು ಅಸಾಧ್ಯವೆಂದು ನಿರ್ದೇಶಕರು ಭಾವಿಸಿದ್ದರು. ಆದರೆ, ಜಾನಕಿ ಮಾತ್ರ ಚಿತ್ರದ ಬಗ್ಗೆ ಉತ್ಸುಕರಾಗಿದ್ದರಂತೆ. ಈ ದೃಶ್ಯವನ್ನು ನಂತರದಲ್ಲಿ ಮಾಡಲು ಸಾಧ್ಯವಾಗಲಿಲ್ಲ ಏಕೆಂದರೆ ಅದಕ್ಕೆ ಬಹಳಷ್ಟು ರೀಟೇಕ್‌ಗಳು ಬೇಕಾಗಿದ್ದವು. ಆ ದೃಶ್ಯವನ್ನು ಸೆಟ್‌ನಲ್ಲಿ ಚಿತ್ರೀಕರಿಸುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿತ್ತು ಎಂದು ಜಾನಕಿ ಹೇಳಿದರು.

ಜಾನಕಿ ಬೋಡಿವಾಲ ಯಾರು?

ಜಾನಕಿ ಬೋಡಿವಾಲಾ ಜನಪ್ರಿಯ ಗುಜರಾತಿ ನಟಿ. ಅವರು ಗುಜರಾತಿ ಚಲನಚಿತ್ರ ‘ಚೆಲೋ ದಿವಾಸ್’ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದರ ನಂತರ, ಅವರು ‘ಓ! ತಾರೆ’, ‘ತಂಬೂರೋ’, ‘ಚುಟ್ಟಿ ಜಶೆ ಛಕ್ಕ’, ‘ತಾರಿ ಮಾತೆ ಒನ್ಸ್ ಮೋರ್’ ಮತ್ತು ‘ನಡಿ ದೋಷ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ‘ವಾಶ್’ ಸಿನಿಮಾ ಸೂಪರ್‌ಹಿಟ್ ಆದ ನಂತರ ಹಿಂದಿ ಸಿನಿಮಾ ‘ಸೈತಾನ್’ಗೆ ಆಯ್ಕೆಯಾದರು. (ಏಜೆನ್ಸೀಸ್​)

 

View this post on Instagram

 

A post shared by Jb (@jankibodiwala)

ನಾನು ಬಲವಂತ ಮಾಡಿಲ್ಲ… ಅಳಿಯ ರವಿ ಮೋಹನ್​ ಆರೋಪಕ್ಕೆ ಆರತಿ ತಾಯಿ ಸುಜಾತಾ ಸ್ಪಷ್ಟನೆ! Ravi Mohan

KKR ವಿರುದ್ಧದ ಪಂದ್ಯ ರದ್ದಾದ್ರೂ RCB ಪ್ಲೇಆಫ್‌ ಎಂಟ್ರಿ ಇನ್ನೂ ಖಚಿತವಾಗಿಲ್ಲ: ಇಂದು ಇದು ನಡೆಯಲೇಬೇಕು!

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank