ಟ್ರಂಪ್​ಗೆ ಬ್ಯೂಟಿಫುಲ್; ಭಾರತೀಯರಿಗೆ ಕಂಟಕ; ತಲೆನೋವು ತಂದ ಶೇಕಡ 5 ಹೊಸ ತೆರಿಗೆ

Donald Trump

ಅಮೆರಿಕದಲ್ಲಿರುವ ಭಾರ ತೀಯರು ಸ್ವದೇಶದಲ್ಲಿರುವ ತಮ್ಮ ಮನೆಗಳಿಗೆ ಕಳಿಸುವ ಹಾಗೂ ತಾಯ್ನಾಡಿನಲ್ಲಿ ಹೂಡಿಕೆ ಮಾಡುವ ದುಡ್ಡಿನ ಮೇಲೆಯೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇಕಡ 5ರಷ್ಟು ತೆರಿಗೆ ವಿಧಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಹೊಸ ವಿಧೇಯಕವೊಂದನ್ನು ಇತ್ತೀಚೆಗೆ ಅಲ್ಲಿನ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಇದು ಭಾರತೀಯರಿಗೆ ಮಾತ್ರ ಸೀಮಿತವಲ್ಲ, ಅಲ್ಲಿ ನೆಲೆಸಿರುವ ಬೇರೆ ದೇಶಗಳ ನಾಗರಿಕರಿಗೂ ಅನ್ವಯವಾಗುತ್ತದೆ. ಆದರೆ ಹೆಚ್ಚಿನ ಪರಿಣಾಮ ಆಗುವುದು ಭಾರತೀಯರಿಗೇ. ಏಕೆಂದರೆ ಮನೆಗೆ ಹಣ ಕಳಿಸುವವರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚು. ಭಾರತದಲ್ಲಿ ನೆಲೆಸಿರುವ ಲಕ್ಷಾಂತರ ಕುಟುಂಬಗಳ ಖರ್ಚುವೆಚ್ಚದ ಮೇಲೆ ಇದರಿಂದ ನೇರ ಪರಿಣಾಮ ಆಗಲಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್​ಐ) ಅಭಿಪ್ರಾಯಪಟ್ಟಿದೆ.

blank

ಭಾರತೀಯರ ಮೇಲೆ ಏಕೆ ಹೆಚ್ಚು ಪರಿಣಾಮ?: ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಸಂಖ್ಯೆ ದೊಡ್ಡದು. ಭಾರತದ ವಿದೇಶಾಂಗ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಅಮೆರಿಕದಲ್ಲಿ ಸುಮಾರು 54 ಲಕ್ಷ ಭಾರತೀಯರಿದ್ದಾರೆ. ಅವರಲ್ಲಿ ಬಹುತೇಕರು ಎಚ್1ಬಿ, ಎಲ್-1, ತಾತ್ಕಾಲಿಕ ಕೆಲಸದ ವೀಸಾ ಮೇಲೆ ಇರುವ ಅಥವಾ ಗ್ರೀನ್ ಕಾರ್ಡ್ ಪಡೆದೂ ಇನ್ನೂ ನಾಗರಿಕತ್ವ ಪಡೆಯದ ಜನರು. ಭಾರತೀಯ ರಿಸರ್ವ್ ಬ್ಯಾಂಕಿನ ಮಾಹಿತಿ ಪ್ರಕಾರ, 2023-24ರಲ್ಲಿ ಭಾರತಕ್ಕೆ ಅವರು ಕಳಿಸಿದ ಮೊತ್ತ ಸುಮಾರು 32 ಶತಕೋಟಿ ಡಾಲರ್ (ಅಂದಾಜು 2.76 ಲಕ್ಷ ಕೋಟಿ ರೂ.). ಪ್ರಸ್ತಾವಿತ ನಿಯಮ ಅನ್ವಯವಾದರೆ ಭಾರತೀಯರು 1.6 ಶತಕೋಟಿ ಡಾಲರ್ (ಸುಮಾರು 13,361 ಕೋಟಿ ರೂ.) ತೆರಿಗೆಯನ್ನು ಪ್ರತಿ ವರ್ಷ ಕಟ್ಟಬೇಕಾಗುತ್ತದೆ. ಅದಲ್ಲದೆ ಕಡಿಮೆ ಮೊತ್ತ ಕಳಿಸುವವರಿಗೂ ಯಾವುದೇ ರಿಯಾಯ್ತಿ ಅಥವಾ ವಿನಾಯ್ತಿ ಇಲ್ಲ. ಅಂದರೆ ತಂದೆ-ತಾಯಿಯ ದೈನಂದಿನ ಬದುಕಿಗಾಗಿ ಹಣ ಕಳಿಸುವ, ಭಾರತದ ರಿಯಲ್ ಎಸ್ಟೇಟ್​ನಲ್ಲಿ ಸಣ್ಣ ಪ್ರಮಾಣದ ಹೂಡಿಕೆ ಮಾಡುವ, ಮ್ಯೂಚುವಲ್ ಫಂಡ್​ಗಳಲ್ಲಿ ತಮ್ಮ ಉಳಿತಾಯದ ಹಣವನ್ನು ತೊಡಗಿಸುವ ಸಾಮಾನ್ಯರೂ ಶೇ. 5ರಷ್ಟು ತೆರಿಗೆಯನ್ನೇ ತೆರಬೇಕಾಗುತ್ತದೆ. ವರ್ಗಾವಣೆ ಮಾಡುವ ಕೇಂದ್ರದಲ್ಲಿಯೇ ಇಷ್ಟು ತೆರಿಗೆಯನ್ನು ಮುರಿದುಕೊಳ್ಳಲಾಗುತ್ತದೆ. ಉದಾಹರಣೆಗೆ, ಪ್ರತಿ ತಿಂಗಳು ಭಾರತದಲ್ಲಿರುವ ತನ್ನ ಕುಟುಂಬಕ್ಕೆ 300 ಡಾಲರ್ ಕಳಿಸುವ ಸಾಮಾನ್ಯ ಭಾರತೀಯ ಕಾರ್ವಿುಕ ಪ್ರತಿ ಬಾರಿಯೂ ಹೆಚ್ಚುವರಿಯಾಗಿ 15 ಡಾಲರ್ ತೆರಬೇಕಾಗುತ್ತದೆ ಎನ್ನುತ್ತಾರೆ ವಿಶ್ಲೇಷಕರು.

ಪ್ರತಿಭಟನೆ ಸಾಧ್ಯತೆ: ಅಮೆರಿಕದಲ್ಲಿ ವಲಸಿಗರ ಹಕ್ಕುಗಳ ಸಂಘಟನೆಗಳಿದ್ದು, ಎಲ್ಲ ದೇಶಗಳ ಕೋಟ್ಯಂತರ ಜನ ಅದರ ಸದಸ್ಯರಾಗಿದ್ದಾರೆ. ಟ್ರಂಪ್ ಕ್ರಮದ ವಿರುದ್ಧ ಬಲವಾಗಿ ಪ್ರತಿಭಟಿಸಲು ಅವರೆಲ್ಲ ಸಿದ್ಧರಾಗುತ್ತಿದ್ದಾರೆ. ಈ ವಿಷಯವನ್ನು ಈ ಸಂಘಟನೆಗಳ ವಕ್ತಾರ ಮಿ ಬೋಲ್ಸಿಲ್ಲೊ ಖಚಿತಪಡಿಸಿದ್ದಾರೆ.

Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank