ಕೌಟುಂಬಿಕ ಕಲಹ; ಬಿಡಿಸಲು ಬಂದ ಸ್ನೇಹಿತೆಯನ್ನು ಇರಿದು ಹತ್ಯೆ ಮಾಡಿದ ಪತಿ

Crime
Published on

ಥಾಣೆ: ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಕೌಟುಂಬಿಕ ಕಲಹಗಳು ಜಾಸ್ತಿಯಾಗುತ್ತಿದ್ದು ಈ ನಿಟ್ಟಿನಲ್ಲಿ ಸರ್ಕಾರಗಳು ಕ್ರಮಕೈಗೊಂಡರು ಯಾವುದೇ ಪ್ರಯೋಜನವಾಗುತ್ತಿಲ್ಲ.

ಇದೀಗ ಘಟನೆಯೊಂದರಲ್ಲಿ ತನ್ನ ಜೊತೆ ಮನೆಗೆ ಬರಲು ನಿರಾಕರಿಸಿದ ಪತ್ನಿಯ ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿ ಆಕೆಯ ಸ್ನೇಹಿತೆಯನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮೃತ ದುರ್ದೈವಿಯನ್ನು ಜ್ಯೋತಿ ಶಂಕರ್​ ಪಾಟೀಲ್​ ಎಂದು ಗುರುತಿಸಲಾಗಿದೆ.

ಸಹಾಯಕ್ಕೆ ಅಂಗಲಾಚಿದ ಮಹಿಳೆ

ಘಟನೆ ಥಾಣೆ ನಗೆದ ಮುಂಬ್ರಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಅಧಿಕಾರಿ ಮಾರ್ಷಲ್​ ರವೀಂದ್ರ ದೆಸ್ಲೆ ಗಸ್ತು ತಿರುಗುವ ವೇಳೆ ದಿವಾ ಅಗಸನ್​ ಪ್ರದೇಶದಲ್ಲಿ ಮಹಿಳೆ ಒಬ್ಬರು ರಕ್ತಸಿಕ್ತವಾಗಿ ಸಹಾಯಕ್ಕೆ ಅಂಗಲಾಚುತ್ತಿರುವದನ್ನು ಗಮನಿಸಿದ್ದಾರೆ.

ಈ ವೇಳೆ ಅಧಿಕಾರಿ ಆಕೆಯ ಬಳಿ ಹೋಗಿ ವಿಚಾರಿಸಿದಾಗ ತನ್ನ ಹೆಸರು ಕಿರಣ್​ ವಿಠ್ಠಲ್​ ಖಂಡ್ರೆ ಎಂದು ಹೇಳಿದ್ದು ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಧಿಕಾರಿ ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಕೌಟುಂಬಿಕ ಕಲಹ

ನಾಗೇಶ್​ ಬಾಲು ರೂಪಾಟೆ ಎಂಬುವವರ ಜೊತೆ ಕಿರಣ್​ ಅವರ ವಿವಾಹವಾಗಿದೆ. ಕೌಟುಂಬಿಕ ಕಲಹದ ಹಿನ್ನಲೆ ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕಿರಣ್​ ತನ್ನ ಸ್ನೇಹಿತೆ ಜ್ಯೋತಿ ಶಂಕರ್​ ಪಾಟೀಲ್​ ಎಂಬುವವರ ಮನೆಯಲ್ಲಿ ನೆಲೆಸಿದ್ದರು.

ಮೇ 15ರಂದು ಕಿರಣ್​ ಪತಿ ನಾಗೇಶ್​ ಜ್ಯೋತಿ ಅವರ ನಿವಾಸಕ್ಕೆ ರಾತ್ರಿ ಸುಮಾರು 12;30ರ ವೇಳೆಗೆ ಬಂದಿದ್ದಾನೆ. ಈ ವೇಳೆ ಆತ ತನ್ನ ಪತ್ನಿಗೆ ಮನೆಗೆ ಬರುವಂತೆ ಸೂಚಿಸಿ ಗಲಾಟೆ ತೆಗೆದಿದ್ದಾನೆ.

Stab

ಮನಸ್ಸೋ ಇಚ್ಛೆ ಹಲ್ಲೆ

ಪತಿಯ ಮಾತಿಗೆ ಒಪ್ಪದ ಪತ್ನಿ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ದಂಪತಿಗಳ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಕಿರಣ್​ ಕತ್ತು, ಕೈ, ಕಾಲು, ಹೊಟ್ಟೆ ಭಾಗಕ್ಕೆ ಇರಿಯಲು ಶುರು ಮಾಡಿದ್ದಾನೆ.

ಇದನ್ನು ನೋಡಿದ ಕಿರಣ್​ ಸ್ನೇಹಿತೆ ಜ್ಯೋತಿ ಆಕೆಯ ಸಹಾಯಕ್ಕೆ ಧಾವಿಸಿದ್ದಾಳೆ. ಈ ವೇಳೆ ಆರೋಪಿ ನಾಗೇಶ್​ ಆಕೆಯ ದೇಹದ ಭಾಗಗಳಿಗೆ ಚಾಕುವಿನಿಂದ ಮನಸ್ಸೋ ಇಚ್ಛೆ ಇರಿದಿದ್ದಾನೆ.

ಪೊಲೀಸರ ಮಿಂಚಿನ ಕಾರ್ಯಾಚರಣೆ

ವಿಱಯ ತಿಳಿದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ತೀವ್ರ ರಕ್ತಸ್ರಾವದಿಂದ ಜಯೋತಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಮತ್ತು ಕಿರಣ್​ ಪರಿಸ್ಥಿತಿ ಗಂಭೀರವಾಗಿರುವುದಾಗಿ ತಿಳಿಸಿದ್ದಾರೆ.

ವಿಚಾರ ತಿಳಿದು ಕಾರ್ಯಪ್ರವೃತ್ತರಾದ ಪೊಲೀಸರು ತಂಡವನ್ನು ರಚಿಸಿ ಆರೋಪಿ ನಾಗೇಶ್​ನನ್ನು ಘಟನೆ ನಡೆದ 2 ಘಂಟೆ ಒಳಗೆ ಬಂಧಿಸಿ ಜೈಲ್ಲಿಗಟ್ಟಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net