More

    2,000 ಸಾವಿರ ರೂ. ಮುಖಬೆಲೆಯೆ ನೋಟು ಹಿಂಪಡೆದ RBI

    ನವದೆಹಲಿ: ಚಲಾವಣೆಯಲ್ಲಿರುವ 2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್​​ ಬ್ಯಾಂಕ್(RBI)​ ನಿರ್ಧರಿಸಿದೆ.

    ಕಾನೂನಾತ್ಮಕವಾಗಿ ಈ ನೋಟುಗಳು ಸಿಂಧುವಾಗಿ ಮುಂದುವರಿಯಲಿವೆ ಎಂದು ಆರ್​ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಹಾಲಿ 2,000 ಮುಖಬೆಲೆಯ ನೋಟುಗಳನ್ನು ಹೊಂದಿರುವವರು ಬ್ಯಾಂಕುಗಳಿಗೆ ಮರಳಿಸಲು ಸೆಪ್ಟೆಂಬರ್​ 30ರವೆರೆಗೆ ಕಾಲಾವಕಾಶ ನೀಡಿದೆ.

    ನೋಟು ಬಳಕೆಯಲ್ಲಿ ಕುಸಿತ

    ಈ ಕುರಿತು ಪ್ರಕಟಣೆಯನ್ನು ಹೊರಡಿಸಿರುವ ಆರ್​ಬಿಐ ಇತರ ಮುಖಬೆಲೆಯೆ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾದ ಕಾರಣ 2,000 ಸಾವಿರ ರೂಪಾಯಿಯನ್ನು ಪರಿಚಯಿಸಲಾಗಿತ್ತು.

    2018-19ರಲ್ಲಿ 2,000 ಸಾವಿರ ರೂಪಾಯಿ ಮುಖಬೆಲೆಯೆ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ. ಬ್ಯಾಂಕುಗಳಲ್ಲಿ 2017ರಲ್ಲಿ ಶೇ.89 ರಷ್ಟು ನೋಟುಗಳನ್ನು ಮಾರ್ಚ್​ಕ್ಕಿಂತ ಮೊದಲು ನೀಡಲಾಗಿತ್ತು.

    ಚಲಾವಣೆಯಲ್ಲಿರುವ ಈ ನೋಟುಗಳು ಮೌಲ್ಯವು 6.73 ಲಕ್ಷ ಕೋಟಿ ರೂಪಾಯಿಯಿಂದ 3.62 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ. ಅಂದರೆ ಶೇ.37.3 ರಿಂದ 10.8%ಗೆ ಇಳಿದಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts