ಹೆಚ್ಚು ಉಪ್ಪು ತಿನ್ನುತ್ತಿದ್ದೀರಾ? ಇದರಿಂದ ದೇಹಕ್ಕಾಗುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಿ..

salt
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಕೆಲಸವಾಗಿದೆ. ಹೆಚ್ಚು ಉಪ್ಪು, ಸಿಹಿ ಅಥವಾ ಹುಳಿ ಆಹಾರವನ್ನು ಸೇವಿಸುವುದರಿಂದ ಅನೇಕ ದೀರ್ಘಕಾಲೀನ ಸಮಸ್ಯೆಗಳಿಗೆ ಕಾರಣವಾಗಬಹುದು. ಉಪ್ಪನ್ನು ಹೆಚ್ಚು ತಿನ್ನುವವರು ಬಹಳ ಮಂದಿ ಇದ್ದಾರೆ. ಅಂತಹವರಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇದೆ ಹೇಳಲಾಗಿದೆ.

ಇದನ್ನೂ ಓದಿ: ಕುಟುಂಬಸ್ಥರಿಗೆ ಹಣದಾಮಿಷವೊಡ್ಡಿ 14ರ ಬಾಲಕಿ ಜತೆಗೆ ವಿವಾಹವಾದ 42ರ ವ್ಯಕ್ತಿ: ಮುಂದೆ ನಡೆದಿದ್ದಿಷ್ಟು..

ಶಿಫಾರಸು ಮಾಡಿದ ದೈನಂದಿನ ಸರಾಸರಿಗಿಂತ ಹೆಚ್ಚು ಉಪ್ಪನ್ನು ಸೇವಿಸುವುದರಿಂದ ಬಿಪಿ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಯಸುವವರು ಉಪ್ಪನ್ನು ಮಿತವಾಗಿ ಸೇವಿಸುವುದು ಒಳ್ಳೆಯದು. ಜತೆಗೆ ಅತಿಯಾಗಿ ಉಪ್ಪನ್ನು ಸೇವಿಸುವುದರಿಂದ ರಕ್ತ ಪರಿಚಲನೆ ಸಮಸ್ಯೆ ಉಂಟಾಗುತ್ತದೆ. ಇದರಿಂದ ಹೃದಯಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗದ ಕಾರಣ ಹೃದಯಾಘಾತದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ಹೆಚ್ಚು ಉಪ್ಪು ತಿನ್ನುವುದರಿಂದ ನೀವು ಸಾಮಾನ್ಯಕ್ಕಿಂತ ಹೆಚ್ಚು ಮೂತ್ರ ವಿಸರ್ಜನೆಗೆ ಹೋಗಬೇಕಾಗಬಹುದಾಗಿದೆ. ಉಪ್ಪಿನಲ್ಲಿರುವ ಸೋಡಿಯಂನ್ನು ಹೊರಹಾಕಲು ದೇಹವು ಹೆಚ್ಚು ನೀರನ್ನು ತೆಗೆದುಕೊಳ್ಳುವುದರಿಂದ ಇದು ಸಂಭವಿಸುತ್ತದೆ. ಅಲ್ಲದೇ, ಉಪ್ಪಿನಲ್ಲಿರುವ ಹೆಚ್ಚಿನ ಸೋಡಿಯಂ ಅಂಶವು ಮೂತ್ರಪಿಂಡದಲ್ಲಿ ಸಂಗ್ರಹವಾಗುತ್ತ ಹೋಗಿ ಮೂತ್ರಪಿಂಡದ ಕಲ್ಲುಗಳು ಉಂಟಾಗಬಹುದಾಗಿದೆ.

ಇದನ್ನೂ ಓದಿ: ಗಂಡನಿಗಾಗಿ ಇಬ್ಬರು ಹೆಂಡತಿಯರು ಜಗಳ: ಕೊನೆಗೆ ‘ಈ’ ಸೂತ್ರದ ಮೂಲಕ ಸಂಧಾನ ಯಶಸ್ವಿ..!

ಹೆಚ್ಚು ಉಪ್ಪನ್ನು ಸೇವಿಸುವವರಿಗೆ ದೇಹದಲ್ಲಿ ಊತ ಸಮಸ್ಯೆ ಇರುತ್ತದೆ, ಹೆಚ್ಚು ಉಪ್ಪು ದೇಹದಲ್ಲಿನ ನೀರನ್ನು ಹೆಚ್ಚಾಗಿ ಬಳಸಲು ಪ್ರಚೋದನೆ ನೀಡುವುದರಿಂದ ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ತಲೆನೋವು ಉಂಟಾಗುತ್ತದೆ. ಉಪ್ಪಿನಲ್ಲಿನ ಹಲವು ಸಂಯಕ್ತಗಳು ಮರೆವಿಗೆ ಕಾರಣವಾಗುತ್ತದೆ. ಹಾಗಾಗಿ ಉಪ್ಪನ್ನು ಅತಿಯಾಗಿ ಸೇವಿಸದಿರುವುದು ಉತ್ತಮ. ಈ ವಿಷಯವು ಸಾಮಾನ್ಯ ಮಾಹಿತಿ ಮತ್ತು ಸಲಹೆಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ಸ್ವಂತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net